ರಾಂಗ್‌ ರೂಟ್‌ನಲ್ಲಿ ಬಂದು ಆಟೋ ಚಾಲಕನ ಮೇಲೆ ದರ್ಪ ತೋರಿದ ಮಹಿಳೆ! – ಈಕೆ ಎಡವಟ್ಟಿನಿಂದ 1 ಕಿ.ಮೀ. ಟ್ರಾಫಿಕ್‌ ಜಾಮ್!

ರಾಂಗ್‌ ರೂಟ್‌ನಲ್ಲಿ ಬಂದು ಆಟೋ ಚಾಲಕನ ಮೇಲೆ ದರ್ಪ ತೋರಿದ ಮಹಿಳೆ! – ಈಕೆ ಎಡವಟ್ಟಿನಿಂದ 1 ಕಿ.ಮೀ. ಟ್ರಾಫಿಕ್‌ ಜಾಮ್!

ಸಿಲಿಕಾನ್‌ ಸಿಟಿ ಬೆಂಗಳೂರಿಲ್ಲಿ ಟ್ರಾಫಿಕ್‌ ಸಮಸ್ಯೆ ದೊಡ್ಡ ತಲೆನೋವಾಗಿದೆ. ಗಂಟೆಗಟ್ಟಲೇ ರಸ್ತೆಯಲ್ಲೇ ನಿಲ್ಲೋ ಪರಿಸ್ಥಿತಿ. ಇಷ್ಟೆಲ್ಲಾ ಸಮಸ್ಯೆ ಇದ್ರೂ ಕೆಲವರು ರಾಂಗ್‌ ರೂಟ್‌ನಲ್ಲಿ ಬಂದು ಇನ್ನಷ್ಟು ರಂಪ ರಾಮಾಯಣ ಮಾಡುತ್ತಾರೆ. ಇದೀಗ ಬೆಂಗಳೂರಿನಲ್ಲಿ ರಾಂಗ್ ರೂಟ್‌ನಲ್ಲಿ ಬಂದ ಮಹಿಳೆಯೊಬ್ಬರು ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಲು ಕಾರಣವಾಗಿದ್ದಲ್ಲದೇ ಆಟೋ ಚಾಲಕನೋರ್ವನಿಗೆ ಧಮ್ಕಿ ಹಾಕಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಸಾವಿಗೂ ಮುನ್ನ ಜನತೆಗೆ ವೃಕ್ಷಮಾತೆ ಭಾವುಕ ಸಂದೇಶ – ಸಾಲುಮರದ ತಿಮ್ಮಕ್ಕ ಅವರ ಪತ್ರದಲ್ಲಿ ಏನಿದೆ?

ಬೆಂಗಳೂರಿನ ಕೆಆರ್ ಪುರಂ ಬಳಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ರಾಂಗ್ ರೂಟ್‌ನಲ್ಲಿ ಮಹಿಳೆಯೊಬ್ಬಳು ಬಂದಿದ್ದಲ್ಲದೇ, ಆಟೋ ಚಾಲಕನಿಗೆ ಧಮ್ಕಿ ಹಾಕಿದ್ದಾಳೆ. ಜೊತೆಗೆ ಸಮಾಧಾನ ಮಾಡಿ ಪರಿಸ್ಥಿತಿ ನಿಭಾಯಿಸಲು ಬಂದ ಟ್ರಾಫಿಕ್ ಪೊಲೀಸರ ಜೊತೆಗೂ ವಾಗ್ವಾದಕ್ಕೆ ಇಳಿದಿದ್ದಾಳೆ. ಈಕೆ ಮಾಡಿದ ತಪ್ಪಿನಿಂದಾಗಿ1 ಕಿಲೋ ಮೀಟರ್ ಟ್ರಾಫಿಕ್ ಜಾಮ್‌ ಆಗಿದೆ. ಇದ್ರಿಂದಾಗಿ ನೂರಾರು ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ.

@karnatakaportf ಎಂಬ ಇನ್ಸ್ಟಾಗ್ರಾಮ್ ಪೇಜ್‌ ನಲ್ಲಿಈ ವಿಡಿಯೋ ಪೋಸ್ಟ್‌ ಮಾಡಿದ್ದು, ಮಹಿಳೆ ರಾಂಗ್ ರೂಟ್‌ನಲ್ಲಿ ಬಂದಳು, ಇದರಿಂದ ಆಟೋ ರಿಕ್ಷಾದೊಂದಿಗೆ ಅಪಘಾಥ ಆಯ್ತು. ಆದರೆ ಅದಕ್ಕಿಂತ ಕೆಟ್ಟ ಭಾಗ ಎಂದರೆ ಆಕೆ ತನ್ನ ತಪ್ಪನ್ನು ಅರಿತುಕೊಳ್ಳುವುದು ಬಿಟ್ಟು, ಜಗಳ ಮಾಡಲು, ನಿಂದಿಸಲು ಶುರು ಮಾಡಿದಳು, ಆದರೆ ಆಕೆಯ ತಪ್ಪನ್ನು ಆಕೆ ಒಪ್ಪಿಕೊಳ್ಳಲು ಸಿದ್ಧಳಿರಲಿಲ್ಲ, ತನ್ನ ತಪ್ಪಿಗೆ ಆಕೆ ಕ್ಷಮೆಯನ್ನೂ ಕೇಳಲಿಲ್ಲ, ಜೊತೆಗೆ ಶಾಂತಳಾಗುವುದಕ್ಕೂ ಆಕೆ ಸಿದ್ಧಳಿರಲಿಲ್ಲ, ಟ್ರಾಫಿಕ್ ಪೊಲೀಸರು ಈ ಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಪ್ರಯತ್ನಿಸಿದರೂ. ಆಕೆ ಔಟ್ ಆಫ್ ಕಂಟ್ರೋಲ್ ಆಗಿದ್ದಳು. ಆಕೆಯ ವರ್ತನೆಯಿಂದಾಗಿ ಒಂದು ಕಿಲೋ ಮೀಟರ್ ಟ್ರಾಫಿಕ್ ಜಾಮ್ ಆಯ್ತು. ಕೆಲವೊಮ್ಮೆ ರಸ್ತೆಗಳಲ್ಲಿನ ದೊಡ್ಡ ಅಡ್ಡಿಎಂದರೆ ಅದು ಟ್ರಾಫಿಕ್ ಅಲ್ಲ, ಬದಲಾಗಿ ಮನುಷ್ಯರ ದುರಂಕಾರ ಎಂದು ಬರೆಯಲಾಗಿದೆ.

ಈ ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಕೆಆರ್ ಪುರಂ ಟ್ರಾಫಿಕ್ ಪೊಲೀಸರಿಗೆ ವೀಡಿಯೋ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವೀಡಿಯೋ ನೋಡಿದ ನಂತರ ಮೊದಲು ಹಾಗೂ ನಂತರದ ವೀಡಿಯೋವನ್ನು ಪೊಲೀಸರು ಹಾಕಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಆಕೆಯ ಲೈಸೆನ್ಸ್ ಬ್ಯಾನ್ ಮಾಡುವಂತೆ ಆಗ್ರಹಿಸಿದ್ದಾರೆ. ಆದರೆ ಆಕೆ ರಾಂಗ್ ರೂಟ್‌ನಲ್ಲಿ ಬಂದಿದ್ದಾರೆ ಎನ್ನಲಾಗುತ್ತಿದ್ದರು. ಆಕೆ ಬರುತ್ತಿದ್ದ ದಿಕ್ಕಿನಿಂದಲೇ ಹಲವು ವಾಹನಗಳು ಬರುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನು ನೋಡಿದ ಒಬ್ಬರು ಹೀಗೆ ಕಾಮೆಂಟ್ ಮಾಡಿದ್ದಾರೆ. ಸರಿ, ಅವಳು ತಪ್ಪು ದಾರಿಯಲ್ಲಿ ಬಂದಿದ್ದಾರೆ. ಆದರೆ ಅವಳ ಪಕ್ಕದಲ್ಲಿ ಇರುವ ಇತರ ವಾಹನ ಸವಾರರ ಬಗ್ಗೆ ಏನು ಹೇಳುವಿರಿ? ಅವರು ತಪ್ಪು ದಿಕ್ಕಿನಲ್ಲಿ ಹೋಗಲು ನಿಜವಾಗಿಯೂ ಅವಕಾಶವಿದೆಯೇ? ಅಥವಾ ಅದು ದ್ವಿಮುಖವಿರುವ ಏಕಮುಖ ರಸ್ತೆಯೇ? ಅದು ದ್ವಿಮುಖ ರಸ್ತೆಯಾಗಿದ್ದರೆ, ಆಕೆಯ ಕೃತ್ಯ ದೊಡ್ಡ ಅಪರಾಧವಲ್ಲ, ಅದು ಕೇವಲ ತಪ್ಪು ಸ್ಥಳದಲ್ಲಿ ಓವರ್‌ಟೇಕ್ ಆಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಹಲವರು ಅದು ವನ್ ವೇ ರಸ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಹಲವರು ತಪ್ಪಿತಸ್ಥರು ಇದ್ದಾರೆ ಎಂದ ಕಾರಣಕ್ಕೆ ಅವರು ಮಾಡಿದ್ದು ಸರಿ ಎನ್ನಲಾಗದು ಎಂದು ಕಾಮೆಂಟ್ ಮಾಡಿದ್ದಾರೆ.

Shwetha M