ಬೆಂಗಳೂರು ಟು ಮಂಗಳೂರಿಗೆ ವಂದೇಭಾರತ್ ರೈಲಿಗೆ ಗ್ರೀನ್ ಸಿಗ್ನಲ್ – ಜೂನ್ 1 ರಿಂದ ಪ್ರಾಯೋಗಿಕ ಸಂಚಾರ

ಬೆಂಗಳೂರು ಟು ಮಂಗಳೂರಿಗೆ ವಂದೇಭಾರತ್ ರೈಲಿಗೆ ಗ್ರೀನ್ ಸಿಗ್ನಲ್ – ಜೂನ್ 1 ರಿಂದ ಪ್ರಾಯೋಗಿಕ ಸಂಚಾರ

ಮಂಗಳೂರು ಟು ಬೆಂಗಳೂರು ವಂದೇಭಾರತ್ ಎಕ್ಸಪ್ರೆಸ್ ರೈಲು ಸಂಚಾರ ಮಾಡಬೇಕು ಎಂಬ ಆಗ್ರಹಕ್ಕೆ ಕೊನೆಗೂ ಸ್ಪಂದನೆ ಸಿಕ್ಕಿದೆ. ಜೂನ್ 1 ರಿಂದ ಬೆಂಗಳೂರಿನ ಮಂಗಳೂರಿಗೆ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.

ಇದನ್ನೂ ಓದಿ:ಜೂನ್ 3ಕ್ಕೆ ಡಿಕೆ ಶಿವಕುಮಾರ್ ಪಟ್ಟಾಭಿಷೇಕ – ನೊಣವಿನಕೆರೆ ಅಜ್ಜಯ್ಯ ಹೇಳಿದ್ದಂತೆ ಮುಹೂರ್ತ ಫಿಕ್ಸ್

ಕರಾವಳಿ ರೈಲ್ವೆ ಪ್ರಯಾಣಿಕರ ಬೇಡಿಕೆ ಕೊನೆಗೂ ಈಡೇರಿದೆ. ಕರಾವಳಿ ಭಾಗದ ಪ್ರಯಾಣಿಕರ  ಬಹುದಿನಗಳ ಕನಸು ನನಸಾಗುವ ಸಮಯ ಬಂದಿದೆ. ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಸದ್ಯದಲ್ಲೇ ಆರಂಭವಾಗಲಿದೆ. ಜೂನ್​ನಲ್ಲಿ ಸಂಚಾರ ಆರಂಭವಾಗುವ ನಿರೀಕ್ಷೆ ಇದ್ದು, ಅದರ ಪೂರ್ವಭಾವಿಯಾಗಿ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಕಠಿಣವಾದ ಘಾಟ್ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಜೂನ್ 1 ರಿಂದ ಆರಂಭವಾಗಲಿದೆ. ಸದ್ಯ ಈ ಭಾಗದಲ್ಲಿ ವಿದ್ಯುದೀಕರಣ ಕಾರ್ಯ ಕೂಡಾ ಯಶಸ್ವಿಯಾಗಿ ಮುಗಿದಿದೆ.

ಜೂನ್ 1 ರಿಂದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ಸೆಕ್ಷನ್‌ನಲ್ಲಿ ವಂದೇ ಭಾರತ್ ರೈಲು ಸಂಚಾರದ ಸುರಕ್ಷತಾ ಹೈ-ಲೆವೆಲ್ ಟ್ರಯಲ್ ರನ್ ಶುರುವಾಗಲಿದೆ. ದುರ್ಗಮ ತಿರುವುಗಳು ಹಾಗೂ 57 ಸುರಂಗಗಳನ್ನು ಹೊಂದಿರುವ 55 ಕಿಮೀ ಕಠಿಣ ಘಾಟ್ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಮಾಡಲಾಗುತ್ತದೆ. ರೈಲ್ವೇ ಸಚಿವ ವಿ. ಸೋಮಣ್ಣ ನೀಡಿರುವ ಭರವಸೆಯಂತೆ ಜೂನ್​ನಲ್ಲೇ ರೈಲು ಸಂಚಾರ ಶುರುವಾಗಲಿದೆ. ಜೂನ್ 1 ರಿಂದ ಆರಂಭವಾಗಲಿರುವ ಈ ಟೆಸ್ಟಿಂಗ್ ಪ್ರಕ್ರಿಯೆಯು ಸುಮಾರು ಒಂದು ವಾರಗಳ ಕಾಲ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ವಿವಿಧ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಇತ್ತೀಚೆಗಷ್ಟೇ ಎಲೆಕ್ಟ್ರಿಕ್ ಇಂಜಿನ್ ಮೂಲಕ ಖಾಲಿ ಪ್ಯಾಸೆಂಜರ್ ರೇಕ್ ಬಳಸಿ ನಡೆಸಿದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ಹಾಸನ-ಮಂಗಳೂರು ಲೈನ್‌ನಲ್ಲಿ ಬರುವ 55 ಕಿಲೋಮೀಟರ್ ಉದ್ದದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಅತ್ಯಂತ ಕಡಿದಾದ ಮಾರ್ಗವಾಗಿದ್ದು, ಭಾರತದಲ್ಲೇ ಅತ್ಯಂತ ಕಠಿಣ ತಾಂತ್ರಿಕ ಸವಾಲುಗಳನ್ನು ಹೊಂದಿರುವ ರೈಲ್ವೆ ಸೆಕ್ಷನ್ ಎಂದು ಗುರುತಿಸಲ್ಪಟ್ಟಿದೆ. ಭೂಕುಸಿತದ ಭೀತಿಯ ನಡುವೆಯೂ 57 ಸುರಂಗಗಳು , 258 ಸೇತುವೆಗಳು ಮತ್ತು 108 ಕಡಿದಾದ ತಿರುವುಗಳನ್ನು ಹೊಂದಿರುವ ಈ ಮಾರ್ಗದಲ್ಲಿ ಓವರ್‌ಹೆಡ್ ವಿದ್ಯುದೀಕರಣದ ಮೂಲಸೌಕರ್ಯವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ರೈಲುಗಳು ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.

Sulekha

Leave a Reply

Your email address will not be published. Required fields are marked *