ಅಣ್ಣ ಅಣ್ಣ ಅಂತಾನೇ ಗಂಡನ ಸ್ನೇಹಿತನ ಜೊತೆ ಜೂಟ್ ಆದ ಜಿಮ್ ಟ್ರೈನರ್ ಹೆಂಡತಿ

ರಾಜ್ಯದಲ್ಲಿ ಗಂಡಗೆ ಕೈ ಕೊಟ್ಟು ಬೇರೆಯವರ ಜೊತೆ ಓಡಿ ಹೋಗುವ ಪ್ರಕರಣಗಳು ಸಾಲು ಸಾಲಾಗಿ ಕೇಳಿ ಬರ್ತಿದೆ. ಬೆಂಗಳೂರಿನಲ್ಲಿ ಇದೇ ತರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜಿಮ್ ಟ್ರೈನರ್ ಒಬ್ಬರಿಗೆ ಸ್ವಂತ ಸ್ನೇಹಿತನೇ ಕಣ್ಣು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. “ಅವನು ನನಗೆ ಅಣ್ಣನ ಸಮಾನ” ಎಂದು ಪತಿ ನಿತೇಶ್‌ಗೆ ಹೇಳುತ್ತಿದ್ದ ಪತ್ನಿಯು ಈಗ ಅದೇ ಸ್ನೇಹಿತನ ಜೊತೆ ನಾಪತ್ತೆಯಾಗಿರುವುದು ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಚುರುಮುರಿ ಅಂಗಡಿ ಮಾಲೀಕನಿಗೆ ಖುಲಾಯಿಸಿದ ಅದೃಷ್ಟ ಲಕ್ಷ್ಮೀ! – ಮೋದಿ ಕೊಟ್ಟ 10ರೂ. ನೋಟಿಗೆ ಫುಲ್ ಡಿಮ್ಯಾಂಡ್!
ಜಿಮ್ ಟ್ರೈನರ್ ನಿತೇಶ್ ಮತ್ತು ನವೀನ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಸ್ನೇಹಿತರಾಗಿದ್ದರು. ನಿತೇಶ್ ಯುವತಿಯೊಬ್ಬರನ್ನು ಪ್ರೀತಿಸಿ ಮದುವೆಯಾದ ಬಳಿಕ, ಸ್ನೇಹಿತ ನವೀನ್ ಅವರ ಮನೆಯಲ್ಲೇ ಬಾಡಿಗೆಗೆ ವಾಸವಿದ್ದರು. ಈ ವೇಳೆ ನವೀನ್ ತನ್ನ ಪತ್ನಿ ಮೇಲೆ ಕಣ್ಣು ಹಾಕಿರುವುದು ನಿತೇಶ್ ಗಮನಕ್ಕೆ ಬಂದಿತ್ತು. ನವೀನ್‌ನ ನಂಬರ್ ಅನ್ನು ಹುಡುಗಿಯ ಹೆಸರಿನಲ್ಲಿ ಸೇವ್ ಮಾಡಿಕೊಂಡು ಪತ್ನಿ ಚಾಟಿಂಗ್ ಮಾಡುತ್ತಿದ್ದಳು. ಈ ಬಗ್ಗೆ ಹಲವು ಬಾರಿ ಬುದ್ಧಿ ಮಾತು ಹೇಳಿದ್ದ ನಿತೇಶ್, ನಂತರ ಬನಶಂಕರಿಯ ಬೇರೊಂದು ಮನೆಗೆ ಶಿಫ್ಟ್ ಆಗಿದ್ದರು.
ಬನಶಂಕರಿಗೆ ಹೋದ ಮೇಲೂ ನವೀನ್ ಜೊತೆಗಿನ ಸಂಪರ್ಕ ಮುಂದುವರಿದಿತ್ತು. ಮೂರು ದಿನಗಳ ಹಿಂದೆ ಹೊಟ್ಟೆನೋವು ಎಂದು ಕೆಲಸಕ್ಕೆ ರಜೆ ಹಾಕಿದ್ದ ಪತ್ನಿ, ಬ್ಯಾಗ್ ಪ್ಯಾಕ್ ಮಾಡಿಕೊಂಡು ಪ್ರಿಯಕರ ನವೀನ್ ಜೊತೆ ಎಸ್ಕೇಪ್ ಆಗಿದ್ದಾಳೆ. ಪತ್ನಿ ನಾಪತ್ತೆಯಾದ ಬಗ್ಗೆ ನಿತೇಶ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಯುವತಿ ಮತ್ತು ನವೀನ್‌ನನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದಾರೆ. ಆದರೆ ಪೊಲೀಸರ ಮುಂದೆ ಪತ್ನಿ ಒಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ನೋಡಿರಿ

