ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ – ಬಾಂಬರ್‌ನ ಇಮ್ಯಾಜಿನರಿ ಸ್ಕೆಚ್ ಬಿಡುಗಡೆ
ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿದಂತೆ ಎನ್‌ಐಎ ತಂಡ ತನಿಖೆ ಚುರುಕುಗೊಳಿಸಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಶಂಕಿತ ಉಗ್ರನ ಸುಳಿವು ಕೊಟ್ಟರೆ 10 ಲಕ್ಷ ನಗದು ಬಹುಮಾನ ಕೊಡುವುದಾಗಿ ಬಾಂಬರ್‌ನ ಸಿಸಿಟಿವಿ ಫೋಟೋವೊಂದನ್ನು ಬುಧವಾರ ಎನ್‌ಐಎ ಬಿಡುಗಡೆ ಮಾಡಿತ್ತು. ಈ ಬೆನ್ನಲ್ಲೇ ಸಿಸಿಬಿ (CCB) ಪೊಲೀಸರು ಬಾಂಬರ್‌ನ ಮತ್ತೊಂದು ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: 10 ದಿನಗಳ ಕಾಲ ಎಸ್ಕಾಂ ಆನ್‌ಲೈನ್ ಸೇವೆ ಬಂದ್! – ಕಾರಣವೇನು ಗೊತ್ತಾ?
ಕಳೆದ ಶುಕ್ರವಾರ ದಿ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಗೊಂಡಿತ್ತು. ಆರು ದಿನ ಕಳೆದರೂ ಆರೋಪಿಯ ಪತ್ತೆಯಾಗಿಲ್ಲ. ಶಂಕಿತ ಉಗ್ರನ ಸುಳಿವು ಕೊಟ್ಟರೆ 10 ಲಕ್ಷ ನಗದು ಬಹುಮಾನ ಕೊಡುವುದಾಗಿ ಎನ್‌ಐಎ ಘೋಷಿಸಿತ್ತು. ಈ ಘೋಷಣೆ ಬೆನ್ನಲ್ಲೇ ಸಾರ್ವಜನಿಕರಿಂದ ಸಾಕಷ್ಟು ಕರೆಗಳು ಬರುತ್ತಿವೆ. ಆರೋಪಿಯನ್ನು ನೋಡಿದ್ದಾಗಿ ಕರೆಗಳು ಬರುತ್ತಿದ್ದ ಕಾರಣ ರೇಖಾಚಿತ್ರ ಬಿಡುಗಡೆ ಮಾಡಲು ಸಿಸಿಬಿ ತಯಾರಿ ನಡೆಸಿತ್ತು. ಸಿಸಿಟಿವಿಯಲ್ಲಿ ಬಾಂಬರ್ ದೃಶ್ಯ ಸಮರ್ಪಕವಾಗಿ ಸೆರೆಯಾಗದ ಕಾರಣ ರೇಖಾಚಿತ್ರ ಬಿಡುಗಡೆ ಮಾಡಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದರು. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯವನ್ನು ಆಧಾರವಾಗಿ ಇಟ್ಟುಕೊಂಡು ಸಿಸಿಬಿ ಶಂಕಿತ ಉಗ್ರನ ರೇಖಾಚಿತ್ರ ತಯಾರಿ ಮಾಡಿದೆ.
ಖ್ಯಾತ ಸ್ಕೆಚ್ ಆರ್ಟಿಸ್ಟ್‌ನಿಂದ ಬಾಂಬರ್‌ನ ಇಮ್ಯಾಜಿನರಿ ಸ್ಕೆಚ್ ಬಿಡಿಸಲಾಗಿದೆ. ಸ್ಕೆಚ್ ಆರ್ಟಿಸ್ಟ್ ಎನ್‌ಐಎ ಬಿಡುಗಡೆ ಮಾಡಿದ ಸಿಸಿಟಿವಿ ಫೋಟೋವನ್ನು ಆಧರಿಸಿ ಸಂಪೂರ್ಣ ಮುಖದ ಇಮ್ಯಾಜಿನರಿ ಸ್ಕೆಚ್ ಮಾಡಿದ್ದಾರೆ. ಮಾಸ್ಕ್ ಧರಿಸಿದ ರೀತಿಯಲ್ಲಿ ಹಾಗೂ ಮಾಸ್ಕ್ ಇಲ್ಲದೇ ಟೋಪಿ ಕನ್ನಡಕ ಧರಿಸಿದ ರೇಖಾಚಿತ್ರವನ್ನು ಬಿಡಿಸಲಾಗಿದೆ. ಇದೇ ರೀತಿ ಬಾಂಬರ್ ಇರಬಹುದು ಎಂದು ಕಲ್ಪಿಸಿ ಕಲಾವಿದ ಈ ರೇಖಾಚಿತ್ರ ಬಿಡಿಸಿದ್ದಾರೆ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ರಾಜ್ಯದ ಹಲವು ಜಿಲ್ಲೆಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಬಾಂಬ್ ಬಾಸ್ಟ್ ನಡೆಸಿದ ಬಳಿಕ ತುಮಕೂರು ಮೂಲಕ ಬಳ್ಳಾರಿ ಬಸ್ ನಿಲ್ದಾಣಕ್ಕೆ ಬಂದಿದಿದ್ದಾನೆ ಎಂಬ ಮಾಹಿತಿ ಆಧಾರವಾಗಿ ಎನ್‌ಐಎ ತಂಡ ತನಿಖೆ ನಡೆಸಿದೆ. ಬಳ್ಳಾರಿ ಬಸ್ ನಿಲ್ದಾಣದಿಂದ ಮಂತ್ರಾಲಯ, ಗೋಕರ್ಣ ಬಸ್ ಮೂಲಕ ಭಟ್ಕಳಕ್ಕೆ ತೆರಳಿದ್ದಾನೆ ಅನ್ನೋ ಶಂಕೆ ಕೂಡ ವ್ಯಕ್ತವಾಗಿದೆ. ಹೀಗಾಗಿ ಎನ್‌ಐಎ ಅಧಿಕಾರಿಗಳು ಬಳ್ಳಾರಿ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿಂದ ಎರಡು ತಂಡಗಳು ಎರಡು ಕಾರುಗಳಲ್ಲಿ ಬಂದು ತನಿಖೆ ನಡೆಸಿದ್ದಾರೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಬಂದಿದ್ದಾರೆ. ಬಳ್ಳಾರಿಯಿಂದಲೇ ಬೇರೆಡೆ ತೆರಳಿದ ಹಿನ್ನಲೆ ಬಳ್ಳಾರಿ ನಿಲ್ದಾಣದಲ್ಲಿ ಮಾಹಿತಿ ಪಡೆದಿದ್ದಾರೆ.
ಇನ್ನು ಬಾಂಬರ್ ಬಳ್ಳಾರಿ ಮೂಲಕ ಆಂಧ್ರಕ್ಕೂ ಪ್ರಯಾಣಿಸಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಎನ್‌ಐಎ ಅಧಿಕಾರಿಗಳು ಬಳ್ಳಾರಿ ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಬಳ್ಳಾರಿಯ ಪೊಲೀಸರಿಂದಲೂ ಕೂಡ ಹುಡುಕಾಟ ನಡೆದಿದ್ದು, ನಗರದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಮಾಹಿತಿ ಕಲೆ ಹಾಕಿದ್ದಾರೆ.