ದೇಶದಲ್ಲೇ ದುಬಾರಿ ನಮ್ಮ ಮೆಟ್ರೋ! ರೇಟ್ ಹೆಚ್ಚಳಕ್ಕೆ ಕಾರಣ ಯಾರು?
ಕೇಂದ್ರವಲ್ಲ.. ರಾಜ್ಯವಲ್ಲ.. ಮತ್ಯಾರು?

ದೇಶದಲ್ಲೇ ದುಬಾರಿ ನಮ್ಮ ಮೆಟ್ರೋ! ರೇಟ್ ಹೆಚ್ಚಳಕ್ಕೆ ಕಾರಣ ಯಾರು?ಕೇಂದ್ರವಲ್ಲ.. ರಾಜ್ಯವಲ್ಲ.. ಮತ್ಯಾರು?

ನಮ್ ಸಿಲಿಕಾನ್ ಸಿಟಿ ಮಂದಿ ಸ್ಯಾನೇ ಕೊಪ ಮಾಡಿಕೊಂಡಿದ್ದಾರೆ. ಏನ್ ರೇಟ್ ಗುರ್ ಹೇಗ್ ಜೀವನ ಮಾಡೋದು ಅಂತ ಬಾಯಿಗೆ ಬಂದಹಾಗೇ ಸರ್ಕಾರಗಳನ್ನ ಜನ ಬೈತಾ ಇದ್ದಾರೆ. ಆದ್ರೆ ಜನಗಳಿಗೆ ಈ ವಿಷ್ಯದಲ್ಲಿ ತುಂಬಾ ಕನ್ಫ್ಯೂಸ್‌ನಲ್ಲಿದ್ದಾರೆ.. ಸಿದ್ದರಾಮಯ್ಯ ಸರ್ಕಾರ ಇರೋ ಬರೋ ಗ್ಯಾರಂಟಿ ಯೋಜನೆ ಜಾರಿಗೆ ತಂದು ಬಸ್‌, ಮೆಟ್ರೋ ರೇಟ್ ಹೈಕ್ ಮಾಡಿದ್ದಾರೆ ಅಂದ ಹೇಳುತ್ತಿದ್ದಾರೆ. ಆದ್ರೆ ಮೆಟ್ರೋ ಯಾರ್ ಅಂಡರ್‌ನಲ್ಲಿ ಬರುತ್ತೆ ಅನ್ನೋದು ಜನಕ್ಕೆ ಸರಿಯಾಗಿ ಗೊತ್ತಿಲ್ಲ.. ಈ ಬಗ್ಗೆ ತಿಳಿಸಿಕೊಡುತ್ತೇನೆ ಬನ್ನಿ..

ಮೆಟ್ರೋ ಇದ್ಯಾ ಅಲ್ವಾ ಅದರ ಮೇಲೆ  ರಾಜ್ಯ ಸರ್ಕಾರಕ್ಕೆ ಸಂಪೂರ್ಣವಾದ ಹಕ್ಕು ಇರೋದಿಲ್ಲ..  ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳದ ಬಗ್ಗೆ ಬಿಎಂಆರ್‌ಸಿಎಲ್‌ ತೀರ್ಮಾನ ಮಾಡುತ್ತದೆ. ಅದಕ್ಕಾಗಿ ನ್ಯಾಯಮೂರ್ತಿ ನೇತೃತ್ವದಲ್ಲಿ ಕೇಂದ್ರದ ಸಮಿತಿ ರಚಿಸಲಾಗಿದ್ದು, ಆ ಸಮಿತಿ ಚರ್ಚೆ ನಡೆಸಿ ರೇಟ್ ಹೆಚ್ಚಳ ಮಾಡಿದೆ. ಆ ವರದಿಯನ್ನ ರಾಜ್ಯಕ್ಕೂ ಕೊಡುತ್ತೇ ಕೇಂದ್ರಕ್ಕೂ ಕೊಡಲಾಗುತ್ತೆ..  ರಾಜ್ಯ ಸರಕಾರ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹೀಗಾಗಿ ಮೆಟ್ರೋ ರೇಟ್ ಹೆಚ್ಚಳಕ್ಕೆ ಕೇವಲ ರಾಜ್ಯ ಸರ್ಕಾರ ಮಾತ್ರ ಕಾರಣವಲ್ಲ, ಕೇಂದ್ರದ ಹಸ್ತಕ್ಷೇಪ ಕೂಡವಿದೆ. ಆದ್ರೆ ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಮಾತ್ರ ಆರೋಪ ಮಾಡುತ್ತಿದ್ದಾರೆ.   ಹಾಗೇ ಕಾಂಗ್ರೆಸ್ ನಾಯಕರು ಕೂಡ ಮೆಟ್ರೋ ರೇಟ್ ಹೆಚ್ಚಳ ಮಾಡಿದ್ದು ಸರಿ ಅಲ್ಲ ಎನ್ನುತ್ತಿದ್ದಾರೆ.  ಹೀಗಾಗಿ ಜನರಲ್ಲಿ ಈ ಬಗ್ಗೆ ಕನ್ಫ್ಯೂಸ್ ಇದೆ.. ಈಗ ಮೆಟ್ರೋದಲ್ಲಿ ಬಂದಿರೋ ಹಣವನ್ನ ಬಿಎಂಆರ್‌ಸಿಎಲ್‌ ರಾಜ್ಯ ಅಥವಾ ಕೇಂದ್ರ  ಸರ್ಕಾರಕ್ಕೆ ಕೊಡಲ್ಲ.. ಸಾಕಷ್ಟು ಖರ್ಚು ಇರುತ್ತೆ. ಮೆಂಟೆನ್ಸ್ ಇರುತ್ತೆ. ಸಂಬಳ ಕೊಡಬೇಕು.. ನಂತ್ರ ಬಂದ ಲಾಭ ಹಣವನ್ನ ಮತ್ತೆ ಮೆಟ್ರೋ ಅಭಿವೃದ್ಧಿ ಕೆಲಸಕ್ಕೆ ಬಳಸಲಾಗುತ್ತೆ.. ಅಂದ್ರೆ ಮೆಟ್ರೋದ ಹಣ ಮೆಟ್ರೋದ ಅಭಿವೃದ್ಧಿಗೆ ಬಳಸಲಾಗುತ್ತೆ.. ರಾಜ್ಯ ಸರ್ಕಾರಕ್ಕೆ ಇದರಿಂದ ಹಣ ಹರಿದು ಹೋಗಲ್ಲ. ಆದ್ರೂ ಈ ಮಟ್ಟಿಗೆ ರೇಟ್ ಹೈಕ್ ಮಾಡಿದ್ದು ಸರಿ ಇಲ್ಲ ಬಿಡಿ.. 5-10 ಪರ್ಸೆಂಟ್ ಮಾಡಿದ್ರೆ ಓಕೆ ಅದು ಬಿಟ್ಟು ಒಂದ್ಕಡೆ 50 ಪರ್ಸೆಂಟ್ ಮತ್ತೆ ಕೆಲ ಕಡೆ 100 ಪರ್ಸೆಂಟ್ ಹೈಕ್ ಮಾಡಿದ್ದಾರೆ.

ನಮ್ಮ ಮೆಟ್ರೊ’ ಪ್ರಯಾಣ ದರವನ್ನು ಶೇ 47ರಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ದೇಶದಲ್ಲಿಯೇ ಅತಿ ದುಬಾರಿ ಪ್ರಯಾಣ ದರವನ್ನು ಹೊಂದಿರುವ ಮೆಟ್ರೊ ಇದಾಗಿದೆ. ಪ್ರಯಾಣಿಕರಿಂದ ಪ್ರಯಾಣ ದರವನ್ನು ಪಡೆಯುವ ಬದಲು ಬಂಡವಾಳ ಕ್ರೋಡೀಕರಣದ ಉದ್ದೇಶದಿಂದ ದರ ಹೆಚ್ಚಳ ಮಾಡಲಾಗಿದೆ ಎಂಬ ಆರೋಪಕ್ಕೆ ನಿಗಮವು ಗುರಿಯಾಗಿದೆ.

 ಹೊಸ ದರದಲ್ಲಿ ಗೊಂದಲ

ಸರಾಸರಿ ಶೇ 47ರಷ್ಟು ದರ ಹೆಚ್ಚಳ ಮಾಡಲಾಗಿದೆ. ಅದರಲ್ಲಿ ಸ್ಮಾರ್ಟ್‌ಕಾರ್ಡ್‌ ಹೊಂದಿರುವವರಿಗೆ ಶೇ 5 ರಿಯಾಯಿತಿ ನೀಡಲಾಗಿದೆ. ಜನದಟ್ಟಣೆ ಕಡಿಮೆ ಇರುವ ಅವಧಿಯಲ್ಲಿ  ಸಂಚರಿಸಿದರೆ ಹೆಚ್ಚುವರಿಯಾಗಿ ಶೇ 5 ರಿಯಾಯಿತಿ ದೊರೆಯಲಿದೆ. ರಾಷ್ಟ್ರೀಯ ಹಬ್ಬಗಳು ಮತ್ತು ಎಲ್ಲ ಭಾನುವಾರ ಶೇ 10 ರಿಯಾಯಿತಿ ಇರುತ್ತದೆ. ರಿಯಾಯಿತಿಗಳನ್ನು ಕಳೆದರೆ ಶೇ 40ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಮಾರ್ಟ್ ಕಾರ್ಡ್‌ನಲ್ಲಿನ ಕನಿಷ್ಠ ಮೊತ್ತವನ್ನು ₹50ರಿಂದ ₹90ಕ್ಕೆ ಏರಿಸಲಾಗಿದೆ.

ಕಿ.ಮೀ ಆಧಾರದಲ್ಲಿ ಪ್ರಯಾಣ ದರವನ್ನು ಹೆಚ್ಚಿಸಿ, ಅದನ್ನು ಸ್ಟೇಷನ್‌ಗಳಿಗೆ ಅನ್ವಯ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಗೊಂದಲ ಉಂಟಾಗಿದೆ. ಶೇ 47ರಷ್ಟು ಹೆಚ್ಚಳ ಎಂದು ಹೇಳಿದ್ದರೂ ಹಲವು ಕಡೆಗಳಲ್ಲಿ ಹಿಂದಿನ ದರದ ದುಪ್ಪಟ್ಟು ಶೇ 100ರಷ್ಟು ಅಧಿಕ ನೀಡಬೇಕಾಗಿದೆ.

ದರ ಪರಿಷ್ಕರಣೆ ಪ್ರಕ್ರಿಯೆ ಹೇಗೆ?

2011ರಲ್ಲಿ ಮೆಟ್ರೊ ಸಂಚಾರ ಆರಂಭವಾಗಿದ್ದು, 2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಆಗ ದರ ನಿಗದಿಗಾಗಿ ಸಮಿತಿ ರಚಿಸದೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಒಪ್ಪಿಗೆ ಪಡೆದು ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಲಾಗಿತ್ತು.

ನಿರ್ವಹಣೆ ವೆಚ್ಚ, ವೇತನ ವೆಚ್ಚ, ಇಂಧನ ವೆಚ್ಚ, ಸಾಮಗ್ರಿ ವೆಚ್ಚಗಳು ಪ್ರತಿವರ್ಷ ಏರಿಕೆಯಾಗುತ್ತಿವೆ. ಏಳು ವರ್ಷಗಳಿಂದ ‘ನಮ್ಮ ಮೆಟ್ರೊ’ ದರ ಪರಿಷ್ಕರಣೆ ಮಾಡಿಲ್ಲ ಎಂದು ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಮೆಟ್ರೊ ರೈಲ್ವೆ ಕಾಯ್ದೆ, 2002ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರ ಸರ್ಕಾರವು ಮೂವರು ಸದಸ್ಯರನ್ನು ಒಳಗೊಂಡ ದರ ನಿಗದಿ ಸಮಿತಿಯನ್ನು ರಚಿಸಿತ್ತು.

ಬಿಎಂಆರ್‌ಸಿಎಲ್‌ನ ಮೊದಲ ದರ ನಿಗದಿ ಸಮಿತಿ ಇದಾಗಿತ್ತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆ‌ರ್. ತರಣಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತೀಂದರ್ ಪಾಲ್ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿ ಆರ್.ವಿ. ರಮಣ ರೆಡ್ಡಿ ದರ ನಿಗದಿ ಸಮಿತಿಯ ಸದಸ್ಯರಾಗಿದ್ದರು.

ದರ ಪರಿಷ್ಕರಣೆ ಬಗ್ಗೆ ನಾಗರಿಕರು ಸಲಹೆ ನೀಡುವಂತೆ ಸಮಿತಿಯು ಅಕ್ಟೋಬ‌ರ್ 4ರಿಂದ 21ರವರೆಗೆ ಅವಕಾಶ ನೀಡಿತ್ತು. ಆನಂತರ ಅ.28ರವರೆಗೆ ಈ ಅವಧಿಯನ್ನು ವಿಸ್ತರಿಸಿತ್ತು. 2000ಕ್ಕೂ ಅಧಿಕ ಸಲಹೆಗಳು ಬಂದಿದ್ದವು. ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ, ತಜ್ಞರೊಂದಿಗೆ ಚರ್ಚೆ ನಡೆಸಿತ್ತು. ಮೂಲ ಸೌಕರ್ಯ ಒದಗಿಸುವ ವೆಚ್ಚ, ಇಂಧನ ವೆಚ್ಚ, ಅಧಿಕಾರಿಗಳು ಮತ್ತು ಸಿಬ್ಬಂದಿಯ ವೇತನದ ವೆಚ್ಚ, ಮೆಟ್ರೊ ನಿರ್ವಹಣೆ ವೆಚ್ಚಗಳನ್ನೆಲ್ಲ ಪರಿಶೀಲಿಸಿತ್ತು. ಈ ಸಮಿತಿಯ ಅವಧಿ ಮುಕ್ತಾಯದ ಕೊನೇ ದಿನವಾದ ಡಿ.16ರಂದು ಬಿಎಂಆರ್‌ಸಿಎಲ್‌ಗೆ ವರದಿ ಸಲ್ಲಿಸಿತ್ತು.

ಕೇಂದ್ರ ರೈಲ್ವೆ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಜ.17ರಂದು ಮಂಡಳಿ ಸಭೆ ನಡೆದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ದರ ನಿಗದಿ ಸಮಿತಿಯ ಶಿಫಾರಸುಗಳಿಗೆ ಒಪ್ಪಿಗೆ ನೀಡಲಾಗಿತ್ತು. ಆದರೆ, ದೆಹಲಿಯಲ್ಲಿ ಚುನಾವಣೆ ಮತ್ತು ಇತರ ಹಲವು ಕಾರಣಗಳಿಂದ ಪರಿಷ್ಕೃತ ದರ ಜಾರಿಯಾಗಿರಲಿಲ್ಲ. ಈ ನಡುವೆ ದರ ನಿಗದಿ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಕೇಳಿತ್ತು. ಬಿಎಂಆರ್‌ಸಿಎಲ್ ಮಾಹಿತಿಯನ್ನು ನೀಡಿತ್ತು. ದೆಹಲಿ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದ ಮರುದಿನವೇ ಪರಿಷ್ಕೃತ ದರವನ್ನು ಜಾರಿ ಮಾಡಲಾಗಿದೆ. ಕನಿಷ್ಠ ದರ ₹10 ಇದ್ದಿದ್ದನ್ನು ಹಾಗೇ ಉಳಿಸಿಕೊಂಡಿರುವ ಬಿಎಂಆರ್‌ಸಿಎಲ್ ಗರಿಷ್ಠ ದರ ₹60 ಇದ್ದಿದ್ದನ್ನು ₹90ಕ್ಕೆ ಏರಿಕೆ ಮಾಡಿದೆ. ಚೆನ್ನೈ, ಮುಂಬೈ, ದೆಹಲಿ, ಹೈದರಾಬಾದ್, ಕೋಲ್ಕತಾ ಮುಂತಾದ ಮಹಾನಗರಗಳಿಗಿಂತ ಶೇ 40ರಿಂದ ಶೇ 60ರಷ್ಟು ಅಧಿಕ ದರವನ್ನು ಬೆಂಗಳೂರಿನ ಮೆಟ್ರೊ ಪ್ರಯಾಣಿಕರು ಪಾವತಿಸಬೇಕಿದೆ.

 

ಕೋಲ್ಕತ್ತ ಅತಿ ಕಡಿಮೆ ಬೆಲೆ ಮೆಟ್ರೋ 

ಅರ್ಧ ಶತಮಾನದ ಇತಿಹಾಸ ಹೊಂದಿರುವ, ಕೋಲ್ಕತ್ತ ಮೆಟ್ರೊ ದರವು ದೇಶದಲ್ಲಿಯೇ ಅತಿ ಕಡಿಮೆ ಇದೆ. ನೀಲಿ, ಹಸಿರು, ನೇರಳೆ, ಕಿತ್ತಳೆ, ಹಳದಿ, ಗುಲಾಬಿ ಮಾರ್ಗಗಳನ್ನು ಹೊಂದಿರುವ ಇಲ್ಲಿ ಕನಿಷ್ಠ ದರವು 2 ಕಿ.ಮೀ. ವರೆಗೆ ₹5 ಮಾತ್ರ ಇದೆ.  ಅಲ್ಲಿ 25 ಕಿ.ಮೀ.ಗೆ ₹25 ಇದ್ದರೆ, ಮುಂಬೈಯಲ್ಲಿ ₹50 ಇದೆ. ಬೆಂಗಳೂರಿನ ‘ನಮ್ಮ ಮೆಟ್ರೊ’ದಲ್ಲಿ ₹90 ನೀಡಬೇಕಾಗುತ್ತದೆ. ವಾಣಿಜ್ಯ ನಗರಿ ಮುಂಬೈಯಲ್ಲಿ ಗರಿಷ್ಠ ₹80, ಚೆನ್ನೈಯಲ್ಲಿ ಗರಿಷ್ಠ ₹50, ಹೈದರಾಬಾದ್ ಮತ್ತು ದೆಹಲಿಯಲ್ಲಿ ಗರಿಷ್ಠ ದರ ₹60 ಇದೆ.

ಮೆಟ್ರೊ ಪ್ರಯಾಣ ದರ ಏರಿಕೆಯು ಹಲವು ಗೊಂದಲ ಹಾಗೂ ಪ್ರಶ್ನೆಗಳಿಗೂ ಕಾರಣವಾಗಿದೆ. ಪ್ರಯಾಣ ದರ ಏರಿಕೆಗೆ ಹೊಣೆ ರಾಜ್ಯ ಸರ್ಕಾರವೋ, ಕೇಂದ್ರ ಸರ್ಕಾರವೋ ಎನ್ನುವುದರ ಬಗ್ಗೆಯೂ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಆದ್ರೆ ಬಿಎಂಆರ್‌ಸಿಎಲ್ ದರ ಏರಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ನಂತರ ಮೂವರು ಸದಸ್ಯರಿದ್ದ ದರ ನಿಗದಿ ಸಮಿತಿ ರಚಿಸಲಾಗಿತ್ತು. ನಂತರ ನಮ್ಮ ಮೆಟ್ರೊ ಪರಿಷ್ಕೃತ ಪ್ರಯಾಣ ದರ ನಿಗದಿಯ ಮಾನದಂಡಗಳ ಬಗ್ಗೆ ಅಧ್ಯಯನ ಮಾಡಲು ಹೆಚ್ಚಿನ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರವು ಬಿಎಂಆರ್‌ಸಿಎಲ್‌ಗೆ ಸೂಚಿಸಿತ್ತು.

ನಮ್ಮ ಮೆಟ್ರೊ ಪ್ರಯಾಣ ದರವನ್ನು ಹೆಚ್ಚಿಸುವ ಬದಲು ಬಿಎಂಆರ್‌ಸಿಎಲ್‌ನಲ್ಲಿ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಡಳಿತ ಮಂಡಳಿಗೆ ಬಿಎಂಆರ್‌ಸಿಎಲ್ ನೌಕರರ ಯೂನಿಯನ್ ಪತ್ರ ಬರೆದಿತ್ತು. ಪ್ರಯಾಣ ದರ ಹೆಚ್ಚಿಸದೇ ಆದಾಯ ಹೆಚ್ಚಿಸುವುದು ಹೇಗೆ ಎಂಬ ಬಗ್ಗೆ ಸಲಹೆಗಳನ್ನೂ ನೀಡಿತ್ತು. ಈ ಎಲ್ಲದರ ನಡುವೆಯೇ ದರ ಹೆಚ್ಚಳ ಜಾರಿಯಾಗಿ ಪ್ರಯಾಣಿಕರ ಮೇಲೆ ಭಾರಿ ಹೊರೆ ಬಿದ್ದಿದೆ.

 ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ್ರಾ ಬಿಜೆಪಿ?

ಇನ್ನು ಈ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಇದೆಲ್ಲರದ ಮಧ್ಯ ಇದೀಗ ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮ್ಯಯನವರೇ ಸ್ಪಷ್ಟನೆ ನೀಡಿದ್ದು, ದರ ಏರಿಕೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.  ಸಿದ್ದರಾಮಯ್ಯ ಸರ್ಕಾರವೇ ಏರಿಕೆ ಮಾಡಿವುದು ಎಂದು ಬಿಜೆಪಿ ನಾಯಕರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ. ಇನ್ನು ದರ ಏರಿಕೆ ಮಾಡಿದ್ದು ಕೇಂದ್ರ ಸರ್ಕಾರ ಅಥವಾ ಸಿದ್ದರಾಮ್ಯಯ ಸರ್ಕಾರ ಎನ್ನುವುದೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಎ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಯಾಗುತ್ತಿದೆ. ಇದರ ಮಧ್ಯ ಇದೀಗ ಇದಕ್ಕೆ ಖುದ್ದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಮೆಟ್ರೋ ಟಿಕೆಟ್​ ದರ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

 

ಇಲ್ಲಿ ರಾಜಕೀಯ ನಾಯಕರು ಮೆಟ್ರೋ ದರ ಯಾರು ಹೆಚ್ಚಳ ಮಾಡಿದ್ದಾರೆ ಅನ್ನೋದಕ್ಕೆ ತಿರುಚಿದ್ದಾರೆ. ಬಿಜೆಪಿ ನಾಯಕರು ಮೆಟ್ರೋ ರೇಟ್ ಹೈಕ್ ಮಾಡಿದ್ದು ಸಿದ್ದು ಸರ್ಕಾರ ಎನ್ನುತ್ತಿದ್ದಾರೆ..  ಕೆಲವು ವಾಸ್ತವಾಂಶಗಳನ್ನು ಬೆಂಗಳೂರು ಜನತೆಯ ಮುಂದಿಡಲು ಬಯಸುತ್ತೇನೆ.  ಅಲ್ಲದೇ, ಬೆಂಗಳೂರು ಮೆಟ್ರೋ ರೈಲಿಗೆ ಸಂಬಂಧಿಸಿದ ಈ ಎಲ್ಲ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಚರ್ಚೆ ನಡೆಸಿದ ನಂತರ ಹತ್ತು ಅಧ್ಯಾಯಗಳಲ್ಲಿ ತನ್ನ ವರದಿ ನೀಡಿದೆ. ಸಮಿತಿ ದೇಶದ ಉಳಿದ ಮೆಟ್ರೋ ರೈಲಿನ ಪ್ರಯಾಣದರವನ್ನು ಅಧ್ಯಯನ ಮಾಡಿದೆ. ಸದ್ಯ ಬೆಂಗಳೂರು ಮೆಟ್ರೋ ಪ್ರಯಾಣ ದರ ಕನಿಷ್ಠ ರೂ.10 ಮತ್ತು ಗರಿಷ್ಠ ರೂ.90 ಆಗಿದೆ.  ಮುಂಬೈ ಮೆಟ್ರೋ ರೈಲಿನ ಕನಿಷ್ಠ ಪ್ರಯಾಣದರ ರೂ.10 ಮತ್ತು ಗರಿಷ್ಠ ಪ್ರಯಾಣ ದರ ರೂ.80 ಆಗಿದೆ. ದೆಹಲಿ ಮೆಟ್ರೋವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಮೊದಲ ಹಂತದ ಪ್ರಯಾಣದರವನ್ನು ಆಯಾ ರಾಜ್ಯಗಳ ಮೆಟ್ರೊ ನಿಗಮಗಳೇ ನಿಗದಿ ಪಡಿಸಿತ್ತು. ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಜೊತೆಗೂಡಿ ಬೆಂಗಳೂರು ಮೆಟ್ರೊ ರೈಲು ನಿಗಮವನ್ನು ಸ್ಥಾಪಿಸಿದ್ದು, ಇದರಲ್ಲಿ ಎರಡೂ ಸರ್ಕಾರಗಳ ಸಮ (50:50) ಪಾಲುದಾರಿಕೆ ಇದೆ.  ಈಗ ಪ್ರಯಾಣ ದರವನ್ನು ಕೇಂದ್ರ ಸರ್ಕಾರ ನೇಮಿಸುವ ಸಮಿತಿ ನಿಗದಿಪಡಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 ಸಂಸತ್‌ನಲ್ಲಿ ಮೆಟ್ರೋ ಬಗ್ಗೆ ಪ್ರಸ್ತಾಪಿಸಿ ತೇಜಸ್ವಿ ಸೂರ್ಯ

ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಸಂಸತ್ ಅಧಿವೇಶನದಲ್ಲಿ ಮೆಟ್ರೋ ದರ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ.ಸತ್ತಿನಲ್ಲಿ ನಡೆದ ಶೂನ್ಯ ವೇಳೆಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಬೆಂಗಳೂರಿನಲ್ಲಿ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣದ ಅಲ್ಪ ದೂರದ ಪ್ರಯಾಣ ದರ ಶೇ.100ರಷ್ಟು ಏರಿಕೆಯಾಗಿದೆ. ಈ ರೀತಿಯ ದರ ಏರಿಕೆಯನ್ನು ದೇಶದ ಇತರ ನಗರಗಳ ಮೆಟ್ರೋ ದರಕ್ಕೆ ಹೋಲಿಸಿ ನೋಡಿದರೆ ಬೆಂಗಳೂರು ನಮ್ಮ ಮೆಟ್ರೋ ಅತ್ಯಂತ ದುಬಾರಿಯಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪರಿಸರ ಸ್ನೇಹಿಯಾಗಿಸಬೇಕು ಮತ್ತು ಜನಪ್ರಿಯಗೊಳಿಸಬೇಕು. ಆದ್ರೆ ಈ ರೀತಿ ದರ ಏರಿಕೆ ಮಾಡಿರುವುದರಿಂದ ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ ಎಂದರು. ಒಟ್ನಲ್ಲಿ ನಮ್ಮ ಮೆಟ್ರೋ ರೇಟ್ ಹೆಚ್ಚಳ  ಜನರ ಕೈ ಸುಡುತ್ತಿದ್ದು, ರೇಟ್ ಕಮ್ಮಿ ಮಾಡಿದ್ರೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಆಗಲಿದೆ.

Kishor KV

Leave a Reply

Your email address will not be published. Required fields are marked *