ಅವಾಂತರಗಳ ಗೂಡಾದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ – ರಸ್ತೆಯಲ್ಲಿ ಓಡಾಡದಿದ್ರೂ ಟೋಲ್ ಶುಲ್ಕ ಕಡಿತ

ಅವಾಂತರಗಳ ಗೂಡಾದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ – ರಸ್ತೆಯಲ್ಲಿ ಓಡಾಡದಿದ್ರೂ ಟೋಲ್ ಶುಲ್ಕ ಕಡಿತ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಅವಾಂತರಗಳ ಗೂಡಾಗಿಯೇ ಮಾರ್ಪಟ್ಟಿದೆ. ಉದ್ಘಾಟನೆಯಾದಾಗಿಂದ ದಿನಕ್ಕೊಂದು ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಸರ್ವೀಸ್​ ರಸ್ತೆ ಗಲಾಟೆ, ಟೋಲ್ ಹೈಡ್ರಾಮಾ, ಮಳೆ ನೀರಿನ ಅವಾಂತರ, ಅಪಘಾತ, ಕಳ್ಳತನ ಹೀಗೆ ಒಂದಿಲ್ಲೊಂದು ಗಲಾಟೆ ನಡೀತಾನೆ ಇದೆ. ಇದೀಗ ಹೆದ್ದಾರಿ ಸಮಸ್ಯೆಗಳ ಸರಮಾಲೆಗೆ ಮತ್ತೊಂದು  ವಿವಾದ ಸೇರ್ಪಡೆಯಾಗಿದೆ.

ಕೆಲವು ದಿನಗಳ ಹಿಂದೆ ವಾಹನ ಸವಾರರು ದುಬಾರಿ ಶುಲ್ಕದ ವಿರುದ್ಧ ಸಿಡಿದೆದ್ದಿದ್ದರು. ಆದರೆ ಈಗ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಸಂಚರಿಸದೇ ಇದ್ರೂ ಫಾಸ್ಟ್​ಟ್ಯಾಗ್​ನಲ್ಲಿ ದುಡ್ಡು ಕಟ್ಟಾಗುತ್ತಿದೆ ಅಂತಾ ವಾಹನ ಸವಾರರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬನ್ನೇರುಘಟ್ಟ ಪಾರ್ಕ್ ನಲ್ಲಿ ಹುಲಿಗಳಿಗಿಲ್ಲ ಉಳಿಗಾಲ – ವ್ಯಾಘ್ರಗಳ ಜೀವಕ್ಕೆ ಕಂಟಕವಾಗುತ್ತಿದೆಯಾ ವಿಚಿತ್ರ ವೈರಸ್

ರಾಮನಗರದ ನಿವಾಸಿ ಚೆನ್ನಿಗರಾಜು ಎಂಬುವವರು ಇಲ್ಲಿವರೆಗೂ ಒಮ್ಮೆಯೂ ಎಕ್ಸ್​ಪ್ರೆಸ್​ ಹೈವೇಯಲ್ಲಿ ಸಂಚಾರ ಮಾಡಿಲ್ಲ. ಆದ್ರೆ ಮಾರ್ಚ್​ 24ರ ರಾತ್ರಿ ಅವರ ಫಾಸ್ಟ್​ಟ್ಯಾಗ್​ನಿಂದ 135 ರೂ. ಕಡಿತವಾಗಿದೆ. ಈ ಬಗ್ಗೆ ಕಣಿಮಿಣಿಕೆ ಟೋಲ್​ ಫ್ಲಾಜಾದಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಹೈವೇಯಲ್ಲಿ ವಾಹನ ಸಂಚರಿಸಿದ ಕುರಿತು ಯಾವುದೇ  ದಾಖಲೆ ಲಭ್ಯವಾಗಿಲ್ಲ.

ರಾಮನಗರ ನಿವಾಸಿ  ಶಿವಸ್ವಾಮಿ,‌ ಪ್ರಭಾಕರ್ ಹಾಗೂ ಮಂಡ್ಯ ಮೂಲದ ತ್ಯಾಗರಾಜು ಅವರ ಫಾಸ್ಟ್​​ಟ್ಯಾಗ್​​ನಿಂದಲೂ ಸುಖಾಸುಮ್ಮನೆ ಹಣ ಕಟ್​​ ಆಗಿದೆ ಅಂತಾ ಆರೋಪಿಸಿದ್ದಾರೆ.

ಮೊದಲೇ ದುಬಾರಿ ಟೋಲ್ ಸುಂಕ ಕಟ್ಟುತ್ತಿದ್ದೇವೆ. ಹಣ ಹೇಗೆ ಕಟ್ಟಾಯ್ತು ಅಂತಾ  ಟೋಲ್​ ಸಿಬ್ಬಂದಿ ಬಳಿ  ವಿಚಾರಿಸಿದ್ರೆ ಅದಕ್ಕೆ ಅವರು ಯಾವುದೇ ಉತ್ತರ ಕೊಡ್ತಿಲ್ಲ. ಟೋಲ್ ಸಿಬ್ಬಂದಿ ವಾಹನ ಸವಾರರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ವಾಹನ ಸವಾರರು ಕಿಡಿ ಕಾರಿದ್ದಾರೆ.

suddiyaana