ಬೆಂ-ಮೈ ಹೆದ್ದಾರಿಯಲ್ಲಿ ದಂಡಾಸ್ತ್ರ – 2 ಲಕ್ಷ ಸವಾರರಿಗೆ ಫೈನ್ ಬಿದ್ದಿದ್ದೇಗೆ?
ಸ್ಪೀಡ್ ಲಿಮಿಟ್ ಎಷ್ಟಿದ್ರೆ ಸೇಫ್?

ಬೆಂ-ಮೈ ಹೆದ್ದಾರಿಯಲ್ಲಿ ದಂಡಾಸ್ತ್ರ – 2 ಲಕ್ಷ ಸವಾರರಿಗೆ ಫೈನ್ ಬಿದ್ದಿದ್ದೇಗೆ?ಸ್ಪೀಡ್ ಲಿಮಿಟ್ ಎಷ್ಟಿದ್ರೆ ಸೇಫ್?

ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇ ಆದಾಗ ಪ್ರಯಾಣಿಕರು ತುಂಬಾನೇ ಖುಷಿ ಪಟ್ಟಿದ್ರು. ಆದ್ರೆ ಈಗ ವಾಹನ ಓಡಿಸಬೇಕು ಅಂದ್ರೆ ನಿಮ್ಮ ವಾಹನದ ಮೇಲೆ ನಿಮಗೆ ಕಂಟ್ರೋಲ್ ಇರಲೇಬೇಕು. ಇಲ್ಲಾಂದ್ರೆ, ಅಲ್ಲಿರೋ ಕ್ಯಾಮರಾಗಳು ನಿಮ್ಮನ್ನ ಕಂಟ್ರೋಲ್ ಮಾಡುತ್ವೆ ಹುಷಾರ್. ಪೊಲೀಸ್ ಇಲ್ಲ, ಕ್ಯಾಮರಾ ಇಲ್ಲ ಅಂತ ನಿಮ್ಮ ವಾಹನಗಳನ್ನ ವೇಗವಾಗಿ ಚಲಾಯಿಸಿದ್ರೋ, ದಂಡ ಬಿತ್ತು ಅಂತಾನೇ ಲೆಕ್ಕ. ಇಡೀ ಹೆದ್ದಾರಿಯಲ್ಲಿ ಐಟಿಎಮ್ಎಸ್ ಕ್ಯಾಮರಾ ನಿಮ್ಮ ಮೇಲೆ ನಿಗಾ ಇಡಲಿದೆ . ಇದಕ್ಕೆ ಸಾಕ್ಷಿ ಕೆಲವೇ ಕೆಲವು ದಿನಗಳಲ್ಲಿ ಬರೋಬ್ಬರಿ ಎರಡು ಲಕ್ಷ ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿರೋದು. ಈ ವಿಚಾರವನ್ನು ಸ್ವತಃ ರಾಮನಗರ ಎಸ್ ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ. ಹಾಗಾದ್ರೆ, ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇಯಲ್ಲಿ ಎಲ್ಲೆಲ್ಲಿ ಕ್ಯಾಮರಾ ಇಟ್ಟಿದ್ದಾರೆ? ಅತಿವೇಗದ ಚಾಲನೆಯಿಂದ ಎಷ್ಟು ವಾಹನ ಸವಾರರು ದಂಡ ಕಟ್ಟಿದ್ದಾರೆ? ಎಷ್ಟು ವಾಹನಗಳು ಸೀಜ್ ಆಗಿವೆ. ಅಪಘಾತ ತಡೆಗೆ ಮಾಡಿದ ಪ್ಲಾನ್ ಹೇಗೆಲ್ಲಾ ವರ್ಕೌಟ್ ಆಗ್ತಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಐಶ್ವರ್ಯ – ಅಭಿ ಸಂಧಾನ​! – ಬಚ್ಚನ್​ ಮನೆಗೆ ಬಂದ ಐಶ್?

ವಾಹನ ಸವಾರರೇ ಇನ್ನಾದ್ರೂ ಎಚ್ಚೆತ್ತುಕೊಳ್ಳಿ!  

ಬೆಂಗಳೂರು ಮೈಸೂರು ಎಕ್ಸಪ್ರೆಸ್ ವೇ ಮೇಲೆ ಸವಾರಿ ಮಾಡುವ ಸವಾರರು ಈ ಸ್ಟೋರಿಯನ್ನ ಸರಿಯಾಗಿ ನೋಡಿ. ಯಾಕೆಂದ್ರೆ, ನಿಯಮ ಉಲ್ಲಂಘನೆಯಲ್ಲಿ ಎರಡು ಲಕ್ಷ ವಾಹನ ಸವಾರರು ಸಿಕ್ಕಿಬಿದ್ದಿದ್ದಾರೆ. ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್ ವೇ ಹೆದ್ದಾರಿಯಲ್ಲಿ ಕಠಿಣ ನಿಯಮ ಜಾರಿಯಾಗಿತ್ತು. ಸಂಚಾರ ಪೊಲೀಸರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿಯಮ ಜಾರಿ ಮಾಡಲಾಗಿತ್ತು. ಹೆದ್ದಾರಿಯುದ್ದಕ್ಕೂ ಅತ್ಯಾಧುನಿಕ ಕ್ಯಾಮರಾಗಳು, ಸೆನ್ಸರ್​ಗಳನ್ನು ಅಳವಡಿಸಲಾಗಿದೆ. ಇದೀಗ ಕೆಲವೇ ವಾರಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಾಹನ ಸವಾರರು ನಿಯಮ ಉಲ್ಲಂಘಿಸಿದ್ದಾರೆ. ಈ ವಿಚಾರವನ್ನ ರಾಮನಗರ ಎಸ್​ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಗಂಟೆಗೆ 130 ಕಿಲೋಮೀಟರ್​ಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಅಂಥವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗುತ್ತದೆ. ವಾಹನ ಸೀಜ್ ಮಾಡಿ, ಲೈಸೆನ್ಸ್ ಕೂಡ ಅಮಾನತಿನಲ್ಲಿಡಲಾಗುತ್ತದೆ ಎಂದು ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಈವರೆಗೆ 193‌‌ ವಾಹನ ಮಾಲಿಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ಎರಡು ಲಕ್ಷಕ್ಕೂ ಅಧಿಕ ವಾಹನ ಸವಾರರು ನಿಯಮ ಮೀರಿದ್ದಾರೆ. ಐಟಿಎಮ್ಎಸ್ ಕ್ಯಾಮರಾದಿಂದ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದೆ. 9 ರೀತಿಯ ನಿಮಯಗಳು ಇದರಲ್ಲಿ ಡಿಟೆಕ್ಟ್ ಆಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕ್ಯಾಮರಾ ಇಲ್ಲದ ಜಾಗದಲ್ಲಿ ನೂರಕ್ಕಿಂತ ಹೆಚ್ಚು ವೇಗದಲ್ಲಿ ಹೋದರೆ ಐಟಿಎಮ್ಎಸ್ ಕ್ಯಾಮರಾ ಪತ್ತೆ ಮಾಡಿ ಮಾಹಿತಿ ಕಳುಹಿಸುತ್ತದೆ. ಅಂಥವರಿಗೆ ಫೈನ್ ಬೀಳಲಿದೆ. ಎಐ ಕ್ಯಾಮೆರಾ ಪೋಲ್ ಬಳಿ ಮಾತ್ರವಷ್ಟೇ ಅಲ್ಲ, ಕ್ಯಾಮೆರಾ ಇಲ್ಲದ ಜಾಗದಲ್ಲಿ ವೇಗವಾಗಿ ಹೋದರೂ ಗೊತ್ತಾಗುತ್ತದೆ. ಎರಡು ಕ್ಯಾಮರಾಗಳ ಮಧ್ಯೆ ಇಂತಿಷ್ಟೇ ವೇಗದ ಮಿತಿ ಹಾಗೂ ಸಮಯ ಫಿಕ್ಸ್ ಆಗಿರುತ್ತದೆ. ನೂರಕ್ಕಿಂತ ಹೆಚ್ಚು ವೇಗ ತೆರಳಿದರೆ, ಸಮಯಕ್ಕಿಂತ‌ ಮುಂಚೆ ಕ್ಯಾಮರಾ ಪೋಲ್ ಬಂದ್ರೆ ದಂಡ ವಿಧಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಆರು ಸಾವಿರ ಜನರಿಗೆ ಈಗಾಗಲೇ ದಂಡದ ಸಂದೇಶ ಕಳುಹಿಸಲಾಗಿದೆ. ಉಳಿದ ವಾಹನಸವಾರರಿಗೂ ದಂಡ ಪಾವತಿಸುವಂತೆ ನೊಟೀಸ್ ನೀಡಲು ಸಿದ್ಧತೆ ಮಾಡಲಾಗುತ್ತಿದೆ. ಪೊಲೀಸ್ ಇಲ್ಲ, ಕ್ಯಾಮರಾ ಇಲ್ಲ ಅಂತ ವೇಗವಾಗಿ ಹೋಗಬೇಡಿ. ಇಡೀ ಹೆದ್ದಾರಿಯಲ್ಲಿ ಐಟಿಎಮ್ಎಸ್ ಕ್ಯಾಮರಾ ನಿಗಾ ಇದೆ ಎಂದು ಕಾರ್ತಿಕ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಮೈಸೂರು-ಬೆಂಗಳೂರು ಎಕ್ಸಪ್ರೆಸ್ ವೇ ಮಾಡಿದಾಗ ಎರಡು ಪ್ರಮುಖ ಸಿಟಿಗಳು ತುಂಬಾ ಹತ್ತಿರವಾದಂತೆ ಭಾಸವಾಗಿತ್ತು. ವಾಹನ ಸವಾರರು ಕೂಡಾ ಪ್ರಯಾಣದ ಸಮಯ ಉಳಿಯುತ್ತೆ ಅಂತಾ ಖುಷಿಪಟ್ಟಿದ್ದರು. ಜೊತೆಗೆ ಎಕ್ಸಪ್ರೆಸ್ ವೇ ಯಲ್ಲಿ ಝುಮ್ ಅಂತಾ ಸವಾರಿ ಮಾಡಬಹುದು ಅಂತಾ ಅಂದುಕೊಂಡಿದ್ದೇ ಬಂತು. ಸಾಲು ಸಾಲು ಅಪಘಾತಗಳಿಂದಾಗಿ ಎಕ್ಸ ಪ್ರೆಸ್ ವೇಯಲ್ಲಿ ಸ್ಪೀಡ್ ಗೆ ಬ್ರೇಕ್ ಬಿದ್ದಿದೆ. ಹೀಗಾಗಿ ವಾಹನ ಸವಾರರಿಗೆ ಎಕ್ಸಪ್ರೆಸ್ ವೇನಲ್ಲಿ ಹೋಗೋದೇ ದೊಡ್ಡ ತಲೆನೋವಾಗಿದೆ.

Shwetha M

Leave a Reply

Your email address will not be published. Required fields are marked *