ಮತ್ತೊಂದು ವಿವಾದಕ್ಕೆ ಕಾರಣವಾಯ್ತು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ! – ಎಕ್ಸ್​​ಪ್ರೆಸ್ ವೇ ಎಂಟ್ರಿ-ಎಕ್ಸಿಟ್ ಕ್ಲೋಸ್ ಮಾಡಿದ್ಯಾಕೆ?

ಮತ್ತೊಂದು ವಿವಾದಕ್ಕೆ ಕಾರಣವಾಯ್ತು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ! – ಎಕ್ಸ್​​ಪ್ರೆಸ್ ವೇ ಎಂಟ್ರಿ-ಎಕ್ಸಿಟ್ ಕ್ಲೋಸ್ ಮಾಡಿದ್ಯಾಕೆ?

ಸದಾ ಒಂದಿಲ್ಲೊಂದು ವಿವಾದಗಳಿಂದ ಅಪಖ್ಯಾತಿಗಳಿಸಿರುವ ನೂತನ ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್ ವೇ ಇದೀಗ ಮತ್ತೊಂದು ವಿವಾದಕ್ಕೆ ಸಾಕ್ಷಿ ಆಗುತ್ತಿದೆ. ಮೈಸೂರು ಬೆಂಗಳೂರು ದಶಪಥ ರಸ್ತೆ ಸದಾ ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುತ್ತಲೇ ಇದೆ. ಹೆದ್ದಾರಿಯಲಿ ವಾಹನ ಸಂಚಾರ ಆರಂಭವಾದಾಗಿಂದ ಸರ್ಕಾರಕ್ಕೆ ಹಾಗೂ ಪ್ರಯಾಣಿಕರಿಗೆ ತಲೆನೋವು ತರಿಸಿದೆ. ಹೆದ್ದಾರಿ ನಿರ್ಮಾಣದ ನಂತರ ಗ್ರಾಮೀಣ ಭಾಗದ ಜನರು ಹಾಗೂ ತಾಲೂಕು ಕೇಂದ್ರಗಳಿಗೆ ಹೋಗಲು ವಾಹನ ಸವಾರರಿಗೆ ಅನುಕೂಲವಾಗಲಿ ಎಂದು ದಶಪಥ ಹೆದ್ದಾರಿಯಲ್ಲಿ ಅಲ್ಲಲ್ಲಿ ಎಂಟ್ರಿ ಹಾಗೂ ಎಕ್ಸಿಟ್ ಕೊಟ್ಟಿದೆ. ಆದರೆ, ಇದೀಗ ಎಕ್ಸಿಟ್ ಹಾಗೂ ಎಂಟ್ರಿಗಳನ್ನ ಕ್ಲೋಸ್ ಮಾಡುವ ಮೂಲಕ ಮತ್ತೊಂದು ವಿವಾದಕ್ಕೆ ಮುಂದಾಗಿದೆ.

ಇದನ್ನೂ ಓದಿ: ಒಂದು ಊರಿನಿಂದ ಮತ್ತೊಂದು ಊರಿಗೆ ಸಂಪರ್ಕ ಕಲ್ಪಿಸಿದ ಭಾರತೀಯ ಸೇನಾ ಯೋಧರು! – ಪ್ರವಾಹ ಪೀಡಿತ ಸಿಕ್ಕಿಂನಲ್ಲಿ ಕೇವಲ 18 ದಿನಗಳಲ್ಲಿ ಸೇತುವೆ ನಿರ್ಮಾಣ!

ಪ್ರಧಾನಿ ಮೋದಿ ಅವರು ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಉದ್ಘಾಟನೆ ಮಾಡಿದ್ದರು. ಸಾವಿರಾರು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ಹೆದ್ದಾರಿಯನ್ನ ನಿರ್ಮಾಣ ಮಾಡಲಾಗಿದೆ.  ನೂತನ ಎಕ್ಸ್​​​ಪ್ರೆಸ್ ವೇನಲ್ಲಿ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಿಗೆ ಎಂಟ್ರಿ ಹಾಗೂ ಎಕ್ಸಿಟ್​​ಗಳು ಇರಲಿಲ್ಲ. ನೇರವಾಗಿ ಬೆಂಗಳೂರು ಟು ಮೈಸೂರು ಸಂಚಾರಕ್ಕೆ ಮಾತ್ರ ಅವಕಾಶ ಇತ್ತು. ಆನಂತರ ಪ್ರತಿಭಟನೆ, ಹೋರಾಟಗಳು ನಡೆದ ನಂತರ ಜಿಲ್ಲಾ ಹಾಗೂ ತಾಲೂಕು ಕೇಂದ್ರ ಸಂಪರ್ಕ ಕಲ್ಪಿಸಲು ದಶಪಥ ಹೆದ್ದಾರಿಯಲ್ಲಿ ಎಂಟ್ರಿ ಹಾಗೂ ಎಕ್ಸಿಟ್ ಕಲ್ಪಿಸಲಾಗಿತ್ತು. ಆದರೆ ಇದೀಗ ಟೋಲ್ ಸಂಗ್ರಹದ ನೆಪವೊಡ್ಡಿ, ಮಂಡ್ಯ ಜಿಲ್ಲೆಯ ಬಹುತೇಕ ಕಡೆ ಎಂಟ್ರಿ ಹಾಗೂ ಎಕ್ಸಿಟ್​​​ಗಳನ್ನ ಮುಚ್ಚಲಾಗಿದೆ. ಇದೀಗ ಬೆಂಗಳೂರಿನಿಂದ ಮಂಡ್ಯಕ್ಕೆ, ಮೈಸೂರಿನಿಂದ ಮಂಡ್ಯಕ್ಕೆ, ಮಂಡ್ಯದಿಂದ ಮೈಸೂರಿಗೆ ಹೋಗಲು ವಾಹನ ಸವಾರರು ಪರದಾಡುವಂತೆ ಆಗಿದೆ. ಸರ್ವಿಸ್ ರಸ್ತೆಯಲ್ಲಿಯೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ನೂತನ ದಶಪಥ ಹೆದ್ದಾರಿಯಲ್ಲಿ ದುಬಾರಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಬೆಂಗಳೂರಿನ ಕಣಮಿಣಿಕೆ ಹಾಗೂ ಮಂಡ್ಯದ ಗಣಂಗೂರು ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಆದರೆ ಬೆಂಗಳೂರಿನಿಂದ ಬರುವ ವಾಹನ ಸವಾರರು ಪಾಂಡವಪುರಕ್ಕೆ ಹೋಗಬೇಕಾದರೆ ಇಂಡವಾಳು ಬಳಿ ಹಾಕಲಾಗಿದ್ದ ಎಕ್ಸಿಟ್ ಅನ್ನ ಕ್ಲೋಸ್ ಮಾಡಲಾಗಿದೆ. ಇನ್ನು ಮಂಡ್ಯದಿಂದ ಮೈಸೂರಿಗೆ ಹೋಗುವವರು ಇಂಡುವಾಳು ಬಳಿ ಇರುವ ಎಂಟ್ರಿ ಮೂಲಕ ದಶಪಥ ರಸ್ತೆಯ ಮೂಲಕ ಮೈಸೂರು ಕಡೆಗೆ ಸಂಚಾರ ಮಾಡುತ್ತಿದ್ದರು. ಆದರೆ ಅಲ್ಲೂ ಕೂಡ ಬಂದ್ ಮಾಡಲಾಗಿದೆ. ಇನ್ನು ಸರ್ವಿಸ್ ರಸ್ತೆಯಲ್ಲಿ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಅರ್ಧಂಬರ್ಧ ಕಾಮಗಾರಿ ನಡೆದಿದೆ. ಇಂತಹದರಲ್ಲಿ ಸರ್ವಿಸ್ ರಸ್ತೆಯಲ್ಲಿ ಸಂಚಾರಿಸಿ ಎಂದರೇ ಹೇಗೆ ಎಂದು ವಾಹನ ಸವಾರರು ಪ್ರಶ್ನೆ ಮಾಡುತ್ತಿದ್ದಾರೆ.

Shwetha M