ಬೆಂಗಳೂರು ಮೈಸೂರು ದಶಪಥ ರಸ್ತೆ ಸವಾರರಿಗೆ ಶಾಕ್ – ಮತ್ತೆ ಟೋಲ್ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಬೆಂಗಳೂರು ಮೈಸೂರು ದಶಪಥ ರಸ್ತೆ ಸವಾರರಿಗೆ ಶಾಕ್ – ಮತ್ತೆ ಟೋಲ್ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಬೆಂಗಳೂರು ಮೈಸೂರು ದಶಪಥ ರಸ್ತೆ ಆರಂಭದಿಂದಲೂ ಒಂದಿಲ್ಲೊಂದು ವಿಚಾರವಾಗಿ ಸುದ್ದಿ ಮಾಡ್ತಾನೇ ಇದೆ. ಕಾಮಗಾರಿ ವಿಚಾರ, ಫ್ಲೈಓವರ್, ಸರ್ವಿಸ್ ರಸ್ತೆ ಸೇರಿದಂತೆ ಹಲವು ಬಾರಿ ಗೊಂದಲವೂ ಸೃಷ್ಟಿಯಾಗಿತ್ತು. ಕೊನೆಗೆ ದುಬಾರಿ ಟೋಲ್ ದರದಿಂದಾಗಿ ವಾಹನ ಸವಾರರು ಹೈರಾಣಾಗಿದ್ದರು. ಇದೀಗ ಮತ್ತೆ ಟೋಲ್ ದರ ಹೆಚ್ಚಳ ಮಾಡಿದ್ದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ದೆಹಲಿಯಲ್ಲಿ APP ಆಧಾರಿತ ಬೈಕ್ ಟ್ಯಾಕ್ಸಿಗಳಿಗೆ ನಿಷೇಧ – ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಶೇ.22ರಷ್ಟು ಟೋಲ್ ದರವನ್ನು ಹೆದ್ದಾರಿ ಪ್ರಾಧಿಕಾರ ಏರಿಕೆ ಮಾಡಿದೆ. ಶಾಕಿಂಗ್ ವಿಷ್ಯ ಅಂದರೆ ಜೂನ್ 1ರಿಂದಲೇ ದುಬಾರಿ ಶುಲ್ಕ ಅನ್ವಯವಾಗಿದೆ. ಆದರೆ ಫಾಸ್ಟ್ ಟ್ಯಾಗ್ ಹಿನ್ನೆಲೆಯಲ್ಲಿ ಟೋಲ್‌ ದರ ಹೆಚ್ಚಳವಾಗಿರುವುದು ವಾಹನ ಸವಾರರ ಗಮನಕ್ಕೆ ಬಂದಿರಲಿಲ್ಲ. ಈ ಹಿಂದೆ ಏಪ್ರಿಲ್‌ 1ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್‌ ದರವನ್ನು ಹೆಚ್ಚಿಸಿತ್ತು. ಸಾರ್ವಜನಿಕರಿಂದ ಆಕ್ರೋಶ ಹಿನ್ನೆಲೆ ದರ ಹೆಚ್ಚಳ ಆದೇಶ ಹಿಂಪಡೆಯಲಾಗಿತ್ತು. ಆದರೆ ಇದೀಗ ಮತ್ತೆ ಟೋಲ್ ದರ ಹೆಚ್ಚಿಸಲಾಗಿದೆ.

ಹೆಚ್ಚಳವಾಗಿರುವ ಟೋಲ್ ದರ ಹೀಗಿದೆ

* ಕಾರು, ವ್ಯಾನ್‌, ಜೀಪ್‌ ಏಕಮುಖ ಸಂಚಾರ ದರ 135ರಿಂದ 165ಕ್ಕೆ ಏರಿಕೆ ಮಾಡಿದ್ದು 30 ರೂಪಾಯಿ ಹೆಚ್ಚಳ

* ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ ದರ 220-270ಕ್ಕೆ ಏರಿಕೆ (50 ರೂ. ಹೆಚ್ಚಳ)

* ಟ್ರಕ್‌, ಬಸ್, 2 ಆ್ಯಕ್ಸೆಲ್‌ ವಾಹನ ಏಕಮುಖ ಸಂಚಾರ ಟೋಲ್ ದರ ₹460-565ಕ್ಕೆ ಏರಿಕೆ (105 ಹೆಚ್ಚಳ)

* 3 ಆ್ಯಕ್ಸೆಲ್‌ ವಾಹನಗಳ ಏಕಮುಖ ಸಂಚಾರ ಟೋಲ್ ದರ ₹500-615ಕ್ಕೆ ಏರಿಕೆ (115 ರೂ. ಹೆಚ್ಚಳ)

* ಭಾರಿ ವಾಹನಗಳ ಏಕಮುಖ ಸಂಚಾರ ಟೋಲ್ ದರ ₹720ರಿಂದ ₹885ಕ್ಕೇರಿಕೆ (165 ರೂ.ಗೆ ಹೆಚ್ಚಳ)

* 7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸೆಲ್‌ ವಾಹನಗಳ ಟೋಲ್‌ ₹880-1,080ಕ್ಕೇರಿಕೆ (200 ಹೆಚ್ಚಳ)

ಸುಮಾರು 8 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧವಾದ ರಾಮನಗರ, ಬೆಂಗಳೂರು-ಮೈಸೂರು ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು ಮಾರ್ಚ್​​ 11ರಂದು ಪ್ರಧಾನಿ ನರೇಂದ್ರ ಮೋದಿಯವರು ಮಂಡ್ಯ ಜಿಲ್ಲೆಯ ಮದ್ದೂ​ರಿ​ನಲ್ಲಿ ಲೋಕಾ​ರ್ಪಣೆ ಮಾಡಿದ್ದರು. ಇದು ರಾಜ್ಯದ ಮೊದಲ ಎಕ್ಸ್‌ಪ್ರೆಸ್‌ ಹೆದ್ದಾರಿಯಾಗಿದ್ದು, ಇದರ ಟೋಲ್​ ಸಂಗ್ರಹವನ್ನು ಫೆ.27 ರಿಂದ ಪ್ರಾರಂಭಿಸಲಾಗಿದೆ.

 

suddiyaana