ಜ. 16 ರಿಂದ ಬೆಂಗಳೂರು – ಮೈಸೂರು ಇವಿ ಪವರ್ ಪ್ಲಸ್ ಬಸ್ ಸೇವೆ ಆರಂಭ

ಜ. 16 ರಿಂದ ಬೆಂಗಳೂರು – ಮೈಸೂರು ಇವಿ ಪವರ್ ಪ್ಲಸ್ ಬಸ್ ಸೇವೆ ಆರಂಭ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೊದಲ ಅಂತರ್ ಜಿಲ್ಲಾ ಎಲೆಕ್ಟ್ರಿಕ್ ಬಸ್ ಬೆಂಗಳೂರಿನಿಂದ ಮೈಸೂರಿಗೆ ಇದೇ ಜನವರಿ 16ರಂದು ಸೋಮವಾರ ಸಂಚಾರ ಆರಂಭಿಸಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎಲೆಕ್ಟ್ರಿಕ್ ಬಸ್ ಪರಿಚಯಿಸುವ ಯೋಜನೆಯಡಿ ಒಟ್ಟು 50 ಬಸ್ ಗಳನ್ನು ಸಂಚಾರ ಬಿಡಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಬೆಂಗಳೂರು-ಮೈಸೂರು ಎರಡು ನಗರಗಳ ನಡುವೆ ಜ. 16 ರಿಂದ  ಅಂತರ್‌ಜಿಲ್ಲಾ ಕೆಎಸ್‌ಆರ್‌ಟಿಸಿ ಇವಿ ಪವರ್ ಪ್ಲಸ್ ಸಂಚರಿಸಲಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬುದ್ಧಿ ಕಲಿಯದ ಪಾಕಿಸ್ತಾನ – ಭಾರತ ಜೊತೆಗಿನ ಬಿಕ್ಕಟ್ಟು ಪರಿಹಾರಕ್ಕೆ ಮಧ್ಯಸ್ಥಿಕೆ ಬಯಸಿದ್ದೇಕೆ?

ಸುಮಾರು 40ಕ್ಕೂ ಹೆಚ್ಚು ಆಸನಗಳನ್ನು ಹೊಂದಿರುವ ನೀಲಿ ವರ್ಣದ ಇವಿ ಪವರ್ ಪ್ಲಸ್ ಬಸ್ ನಲ್ಲಿ ದೂರದರ್ಶನ, ಪ್ರೀಮಿಯಂ ಸೀಟ್‌ಗಳು, ವೈಯಕ್ತಿಕ ಚಾರ್ಜಿಂಗ್ ಸಾಕೆಟ್‌ಗಳು, ಎಸಿ ವೆಂಟ್‌ಗಳು, ಓದುವ ದೀಪಗಳು ಮತ್ತು ಇತರ ಸೌಕರ್ಯಗಳು ಲಭ್ಯವಿದೆ. ಬೆಂಗಳೂರಿನಿಂದ ಮೈಸೂರಿಗೆ 300 ರೂಪಾಯಿಗಳ ಟಿಕೆಟ್ ದರದೊಂದಿಗೆ ಇವಿ ಪವರ್ ಚಾರ್ಜಿಂಗ್ ಸೇವೆ ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ಬಾರಿ ಚಾರ್ಜ್ ಮಾಡಿದರೆ ಬಸ್ಸುಗಳು 300 ಕಿಮೀ ಓಡುವ ನಿರೀಕ್ಷೆಯಿದೆ. ‘ಬೆಂಗಳೂರಿನಿಂದ ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗಕ್ಕೆ ಸೇವೆಯನ್ನು ಪ್ರಾರಂಭಿಸಲು ಫೆಬ್ರುವರಿ ವೇಳೆಗೆ 50 ಇ-ಬಸ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಮತ್ತು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಚಾರ್ಜಿಂಗ್ ಕೇಂದ್ರಗಳು ಜಾರಿಯಲ್ಲಿವೆ ಮತ್ತು ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಬಸ್ ನಿಲ್ದಾಣಗಳಲ್ಲಿ ಪ್ರಗತಿಯಲ್ಲಿದೆ ‘ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಂಡಿ ಅನ್ಬು ಕುಮಾರ್ ಹೇಳಿದ್ದಾರೆ.

ಇವಿ ಪವರ್ ಪ್ಲಸ್ ಬಸ್ ಬೆಂಗಳೂರು – ಮೈಸೂರು ಭಾಗದ ಪ್ರಮಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಮುಖ್ಯವಾಗಿ ರಾಜ್ಯಾದ್ಯಂತ ಭವಿಷ್ಯದಲ್ಲಿ ಪರಿಸರ ಸ್ನೇಹಿ ಬಸ್‌ಗಳ ಕಾರ್ಯಾಚರಣೆ ಚಿಂತನೆಗೆ, ಯೋಜನೆ ರೂಪಿಸಲು ಇದು ನಾಂದಿ ಹಾಡಲಿದೆ ಎಂದು ಹೇಳಿದ್ದಾರೆ.

 

suddiyaana