ನೀರಿನ ಅಭಾವದ ಮಧ್ಯೆಯೂ ನೀರಿನ ನಿರ್ವಹಣೆಯಲ್ಲಿ ದೇಶದಲ್ಲೇ ಬೆಂಗಳೂರು ನಂ.2
ಮಳೆಯ ಅಭಾವದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ನೀರಿನ ಅಭಾವದ ಮಧ್ಯೆಯೂ ನೀರಿನ ನಿರ್ವಹಣೆಯಲ್ಲಿ ಬೆಂಗಳೂರು ಟಾಪ್ 5 ರಲ್ಲಿ ಸ್ಥಾನ ಪಡೆದಿದೆ.
ಇದನ್ನೂ ಓದಿ: ರೋಹಿತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಆಗಲಿ..!- ಐಪಿಎಲ್ ವಿಚಾರದಲ್ಲಿ ಹಿಟ್ಮ್ಯಾನ್ ಫುಲ್ ಸೈಲೆಂಟ್
ಹೌದು, ಥಿಂಕ್ ಟ್ಯಾಂಕ್ ಕೌನ್ಸಿಲ್ ಆನ್ ಎನರ್ಜಿ, ವಾಟರ್ ಆ್ಯಂಡ್ ಎನ್ವಿರಾನ್ಮೆಂಟ್ ನಗರಗಳು ನೀರಿನ ನಿರ್ವಹಣೆ ಹೇಗೆ ಮಾಡುತ್ತವೆ ಎಂದು ಸರ್ವೆ ನಡೆಸಿದೆ. ದೇಶದ 10 ರಾಜ್ಯಗಳ ಪೈಕಿ 500 ನಗರಗಳನ್ನು ಸರ್ವೆಗೆ ಒಳಪಡಿಸಲಾಗಿತ್ತು. ಈ ಸರ್ವೆಯಲ್ಲಿ ಬಳಸಿದ ನೀರು ನಿರ್ವಹಣೆಯಲ್ಲಿ ಸೂರತ್ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಸಂಶೋಧನೆಗಳ ಆಧಾರದಲ್ಲಿ ಸೂರತ್ಗೆ 3.32 ಅಂಕಗಳ ಮೂಲಕ ಮೊದಲ ಸ್ಥಾನ ಇದೆ. ಬೆಂಗಳೂರು 5 ಅಂಕಗಳಿಗೆ 3.23 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ಬಳಸಿದ ನೀರು ಮರುಬಳಕೆ ವಿಚಾರದಲ್ಲಿ ದೇಶದಲ್ಲೇ ಇದು ಗಮನಾರ್ಹ ಸಾಧನೆಯಾಗಿದೆ. ಬೇರೆ ಯಾವ ನಗರಗಳೂ ಕನಿಷ್ಠ 3 ಅಂಕ ಗಳಿಸಿಲ್ಲ.
ಸಂಸ್ಕರಿಸಿದ ಗೃಹ ತ್ಯಾಜ್ಯವನ್ನು ಮರುಬಳಕೆ ಮಾಡಲು ಸಂಸ್ಕರಿಸಿದ ಬಳಸಿದ ನೀರಿನ ನೀತಿಯನ್ನು ಅಳವಡಿಸಿಕೊಂಡಿರುವ 10 ರಾಜ್ಯಗಳು, ಬಳಸಿದ ನೀರಿನ ನಿರ್ವಹಣೆ ಎಂಬ ವಿಷಯಾಧಾರಿತವಾಗಿ ಅಧ್ಯಯನ ನಡೆಸಲಾಗಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) 2021 ರಲ್ಲಿ ಪ್ರಕಟಿಸಿದ ಇತ್ತೀಚಿನ ರಾಷ್ಟ್ರೀಯ ಮಟ್ಟದ ಒಳಚರಂಡಿ ದಾಸ್ತಾನು ದತ್ತಾಂಶವನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.