ಬೆಂಗಳೂರಿನ ಹಗಲು ದರೋಡೆ?- ಐಟಿ ಬಿಟಿ ಹೊಸೂರಿಗೆ ಶಿಫ್ಟ್?
ತಮಿಳುನಾಡು ಏರ್‌ಪೋರ್ಟ್ ಲೆಕ್ಕವೇನು?
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸಿದ್ಧತೆ ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ವಿಮಾನ ನಿಲ್ದಾಣವನ್ನು ಬಳಸುವ ಪ್ರಯಾಣಿಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮುಂದಿನ ಒಂದು ಅಥವಾ ಎರಡು ದಶಕದ ಅವಧಿಯಲ್ಲಿ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಲಾಗಿದೆ. ಇದನ್ನೇ ಗುರಿಯಾಗಿಸಿಕೊಂಡು ಹಾಗೂ ಆರ್ಥಿಕ ಲೆಕ್ಕಾಚಾರಗಳನ್ನು ಹಾಕಿರುವ ತಮಿಳುನಾಡು ಸರ್ಕಾರ ಬೆಂಗಳೂರಿನಿಂದ ಕೆಲವೇ ಗಂಟೆಗಳಲ್ಲಿ ತಲುಪಬಹುದಾದ ತಮಿಳುನಾಡಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಕೆಲಸವನ್ನು ಚುರುಕುಗೊಳಿಸಿದೆ. ಆದರೆ, ಇದರ ಹಿಂದೆ ಬೇರೆ ಲೆಕ್ಕಾಚಾರಗಳೂ ಬೇರೆಯೇ ಇವೆ.
ಇದನ್ನೂ ಓದಿ :ಸಂಕ್ರಾಂತಿ ನಂತರ ಕೆಎಸ್ಆರ್ಟಿಸಿ, ಬಿಎಂಟಿಸಿ ಟಿಕೆಟ್ ದರ ಹೆಚ್ಚಳ?
ತಮಿಳುನಾಡಿನಲ್ಲಿ ವಿಮಾನ ನಿಲ್ದಾಣದ ಹಿಂದೆ ಇರುವ ಮುಖ್ಯ ಲೆಕ್ಕಾಚಾರ ಬೆಂಗಳೂರಿನ ಉದ್ಯಮಿಗಳನ್ನು ಸೆಳೆಯುವುದು. ಹೌದು ಕರ್ನಾಟಕ ಹಾಗೂ ತಮಿಳುನಾಡಿನ ಗಡಿಭಾಗದಲ್ಲಿರುವ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಸುಲಭವಾಗಿ ಉದ್ಯಮಿಗಳನ್ನು ಸೆಳೆಯಬಹುದು. ಅಲ್ಲದೆ ಎರಡು ಕಡೆ ಉದ್ಯಮಗಳನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಇರುವ ಉದ್ಯಮಿಗಳಿಗೆ ಇದು ಲಾಭವಾಗಲಿದೆ. ತಮಿಳುನಾಡಿನ ಹೊಸೂರು ಕೈಗಾರಿಕಾ ಪ್ರದೇಶವಾಗಿದ್ದು, ವೇಗವಾಗಿ ಬೆಳೆಯುತ್ತಿರುವ ತಮಿಳುನಾಡಿನ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಕೈಗಾರಿಕೆಗೆ ಉತ್ತೇಜನ ನೀಡುವುದರ ಜೊತೆ ಜೊತೆಗೆ ಇನ್ನಷ್ಟು ಉದ್ಯಮಗಳನ್ನು ಸೆಳೆಯುವ ಲೆಕ್ಕಾಚಾರವೂ ಇದೆ.
ತಮಿಳುನಾಡಿಗೆ ಬೆಂಗಳೂರಿನ ಟ್ರಾಫಿಕ್ ಜಾಮ್ ವರ
ಹೌದು ತಮಿಳುನಾಡಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ, ಬೆಂಗಳೂರಿನ ದಕ್ಷಿಣ ಭಾಗದ ಜನರ ಮೊದಲ ಆದ್ಯತೆ ಇದೇ ಆಗಿರುವ ಸಾಧ್ಯತೆ ಇದೆ. ಯಾಕೆಂದರೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವ ಸಮಯ ಹಾಗೂ ವೆಚ್ಚಕ್ಕಿಂತ ಈ ನಿಲ್ದಾಣ ಸುಲಭವಾಗುವ ಸಾಧ್ಯತೆ ಇದೆ. ಇದು ತಮಿಳುನಾಡಿಗೆ ವರದಾನವಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ತಮಿಳುನಾಡಿನವರೂ ಸೇರಿದಂತೆ ಎಲ್ಲಾ ರಾಜ್ಯದವರೂ ಇದ್ದಾರೆ. ವ್ಯಾಪಾರ ಅಥವಾ ಅನುಕೂಲತೆ ಎಂದು ಬಂದಾಗ ಜನ ಸುಲಭವಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ತಮಿಳುನಾಡು ಕರ್ನಾಟಕಕ್ಕಿಂತ ಹೆಚ್ಚು ಕೊಡುಗೆ ನೀಡುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಕರ್ನಾಟಕದಿಂದ ವಲಸೆ ಹೋಗುವ ಅಪಾಯವೂ ಇದೆ. ಬೆಂಗಳೂರು ಈಗ ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಜಾಗತಿಕವಾಗಿ ಪ್ರತಿಷ್ಠಿತ ನಗರವಾಗಿ ಹೊರ ಹೊಮ್ಮಿದೆ. ಆದರೆ ಮುಂದೆ ಹೊಸೂರು ವಿಮಾನ ನಿಲ್ದಾಣ ಶುರುವಾದರೆ ಬೆಂಗಳೂರಿನ ಪ್ರತಿಷ್ಠೆಗೆ ಧಕ್ಕೆ ಬರುವ ಸಾಧ್ಯತೆ ಇದೆ. ಬೆಂಗಳೂರು ಮೆಟ್ರೋವನ್ನು ಹೊಸೂರಿನವರೆಗೂ ವಿಸ್ತರಿಸಬೇಕು ಎಂದು ತಮಿಳುನಾಡು ಸರ್ಕಾರ ಈ ಹಿಂದೆ ಮನವಿ ಮಾಡಿಕೊಂಡಿದ್ದಿದೆ. ಈಗ ಹೊಸೂರಿನಲ್ಲಿ ಏರ್ಪೋರ್ಟ್ ನಿರ್ಮಾಣವಾದರೆ ಹೊಸೂರಿನವರೆಗೂ ಮೆಟ್ರೋ ಕನೆಕ್ಟಿವಿಟಿ ವಿಸ್ತರಿಸುವ ಎಲ್ಲಾ ಸಾಧ್ಯತೆ ಇದೆ.
ಹೊಸೂರು ಬೆಂಗಳೂರಿನಂತೆ ಕೂಲ್ ಕೂಲ್
ಬೆಂಗಳೂರು ಐಟಿಬಿಟಿ ಐಕಾನಿಕ್ ಸಿಟಿಯಾಗಿ ಈಗಾಗಲೇ ಅಭಿವೃದ್ಧಿಯಾಗಿದೆ. ಆದರೆ, ಚೆನ್ನೈನಲ್ಲಿ ಈ ರೀತಿಯ ವಾತಾವರಣ ಇಲ್ಲ. ಅದಕ್ಕೆ ಮುಖ್ಯ ಕಾರಣ ಚೆನ್ನೈನ ಬಿಸಿಲು ಹಾಗೂ ಅಲ್ಲಿನ ಜನ ಅಷ್ಟಾಗಿ ಹಿಂದಿಗೆ ಮುಕ್ತರಾಗದೆ ಇರುವುದು. ಬೆಂಗಳೂರಿನಲ್ಲಿನ ಐಟಿಬಿಟಿ ಹಾಗೂ ಉದ್ಯಮಗಳು ಸಾಕಷ್ಟು ಅಭಿವೃದ್ಧಿ ಆಗಿವೆ. ಈ ಉದ್ಯಮಗಳು ಸದಾ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವ ಪ್ಲಾನ್ ಮಾಡುತ್ತಿರುತ್ತವೆ. ಹೀಗಾಗಿ, ತಮಿಳುನಾಡು ಹೊಸೂರಿನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಮಾಡುವ ಪ್ಲಾನ್ ಮಾಡಿಕೊಂಡಿದೆ. ಒಂದು ಭಾಗದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಆಗುವುದರಿಂದ ವ್ಯಾಪಾರ ಹಾಗೂ ವ್ಯವಹಾರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಲಾಭವಾಗುತ್ತೆ.. ಹೊಸೂರಿನಲ್ಲಿ ಕೂಡ ಬೆಂಗಳೂರಿನಂತೆಯೇ ವಾತಾವರ್ಣವಿದೆ.
ನಮ್ಮ ನಾಯಕರು ರಾಜ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಸೆಂಟ್ರಲ್‌ನಲ್ಲಿ ಬಿಜೆಪಿ ಸರ್ಕಾರವಿದೆ.. ಹೊಸೂರಿನಲ್ಲಿ ವಿಮಾನ ನಿಲ್ದಾಣ ಮಾಡೋ ವಿಚಾರವಾಗಲಿ, ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ಮಾಡೋ ವಿಚಾರವಾಗಲಿ. ಈ ಇಬ್ಬರು ನಾಯಕರು ಕಚ್ಚಾಡಿಕೊಳ್ಳದೇ ಒಟ್ಟಿಗೆ ಸೇರಿ ಹೋರಾಡ ಬೇಕು.. ವಿಮಾನ ನಿಲ್ದಾಣಕ್ಕೆ ಒಪ್ಪಿಗೆ ಕೊಡುವುದು ಸೆಂಟ್ರಲ್. ತಮಿಳುನಾಡಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚಿನ ಬಿಜೆಪಿ ಸಂಸದರು ಇರೋವುದು.. ಹೀಗಾಗಿ ಕೇಂದ್ರದ ಮೇಲೆ ಒತ್ತಡ ಹಾಕಿ ತಮಿಳುನಾಡಿನಲ್ಲಿ ಏರ್‌ಪೋರ್ಟ್ ಆಗದಂತೆ ತಡೆಯಲು ಅವಕಾಶವಿದೆ.. ಹಾಗೇ ರಾಜ್ಯ ಸರ್ಕಾರ ಕೂಡ ಆದಷ್ಟು ಬೇಗ ಇನ್ನೊಂದು ಏರ್‌ಪೋರ್ಟ್ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದ್ರೆ ತಮಿಳುನಾಡಿ ಸೈಲೆಂಟ್ ಆಗಬಹುದು. ಎರಡನೇ ವಿಮಾನ ನಿಲ್ದಾಣದ ಸ್ಥಳ ಆಯ್ಕೆ ಪ್ರಕ್ರಿಯೆಯ ಹಲವು ಸ್ಥಳಗಳನ್ನು ನೋಡಲಾಗಿದೆ. ಈ ಸ್ಥಳಗಳಲ್ಲಿ ನೆಲಮಂಗಲ, ತುಮಕೂರು, ಡಾಬಸ್‌ಪೇಟೆ, ಹೊಸೂರು ಬಿಡದಿ, ಕನಕಪುರ, ಹಾರೋಹಳ್ಳಿ ಮುಂತಾದವು ಪ್ರಮುಖವಾಗಿವೆ. ಪ್ರತಿ ಸ್ಥಳದ ಭೌಗೋಳಿಕ ಸ್ಥಿತಿ, ಸಂಪರ್ಕ ವ್ಯವಸ್ಥೆ ಭೂಮಿ ಲಭ್ಯತೆ, ಮತ್ತು ಸ್ಥಳೀಯ ಜನಸಂಖ್ಯೆಯ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು, ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ. ತುಮಕೂರು ಕೂಡ ವೇಗ ಬೆಳೆಯುತ್ತಿರುವ ನಗರವಾಗಿದ್ದು, ವಿಮಾನ ನಿಲ್ದಾಣ ನಿರ್ಮಾಣದಿಂದ ಈ ಪ್ರದೇಶದ ಆರ್ಥಿಕ ಬೆಳವಣಿಗೆ ಉತ್ತೇಜನ ನೀಡಬಹುದು.