ಚಲಿಸುತ್ತಿದ್ದ ಕಾರಿನಲ್ಲಿಯೇ ಯುವತಿ ಮೇಲೆ ರಾತ್ರಿಯಿಡೀ ಗ್ಯಾಂಗ್ ರೇಪ್ – ಕಾಮುಕರ ಅಟ್ಟಹಾಸಕ್ಕೆ ಬೆಚ್ಚಿದ ಬೆಂಗಳೂರು

ಚಲಿಸುತ್ತಿದ್ದ ಕಾರಿನಲ್ಲಿಯೇ ಯುವತಿ ಮೇಲೆ ರಾತ್ರಿಯಿಡೀ ಗ್ಯಾಂಗ್ ರೇಪ್ – ಕಾಮುಕರ ಅಟ್ಟಹಾಸಕ್ಕೆ ಬೆಚ್ಚಿದ ಬೆಂಗಳೂರು

ಕಾಮಪಿಶಾಚಿಗಳ ಅಟ್ಟಹಾಸಕ್ಕೆ ರಾಜ್ಯ ರಾಜಧಾನಿ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಐಟಿ ಸಿಟಿ, ಸಿಲಿಕಾನ್ ಸಿಟಿ ಅಂತೆಲ್ಲಾ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಇಡೀ ಮನುಕುಲವೇ ತಲೆತಗ್ಗಿಸುವಂಥ ನೀಚಕೃತ್ಯ ನಡೆದಿದೆ. ಚಲಿಸುತ್ತಿದ್ದ ಕಾರಿನಲ್ಲಿಯೇ ನಾಲ್ವರು ದುಷ್ಟರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಇದನ್ನೂ ಓದಿ: ದೇವಸ್ಥಾನದ ಮೆಟ್ಟಿಲುಬಾವಿ ಕುಸಿತ – ಸಾವಿನ ಸಂಖ್ಯೆ 13 ಕ್ಕೆ ಏರಿಕೆ

ನಗರದ ಹೃದಯ ಭಾಗದಂತಿರೋ ಕೋರಮಂಗಲದಲ್ಲಿ ಮಾ.25 ರಂದು ರಾತ್ರಿ 10 ಗಂಟೆ ಸುಮಾರಿನಲ್ಲಿ ಯುವತಿ ತನ್ನ ಸ್ನೇಹಿತನ ಜೊತೆ ನ್ಯಾಷನಲ್ ಗೇಮ್ಸ್ ವಿಲೇಜ್‌ನ‌ ಪಾರ್ಕ್‌ನಲ್ಲಿ ಕುಳಿತಿದ್ದಳು. ಈ ವೇಳೆ ಅಲ್ಲಿಗೆ ಬಂದ ನಾಲ್ವರು ಯುವಕನನ್ನ ಬೆದರಿಸಿ ಅಲ್ಲಿಂದ ಕಳಿಸಿದ್ದಾರೆ. ಬಳಿಕ ಯುವತಿ ಜೊತೆಗೆ ಜಗಳ ತೆಗೆದು ಕಿಡ್ನ್ಯಾಪ್ ಮಾಡಿದ್ದಾರೆ. KA 01 MB 6169 ನಂಬರ್ ನ ಮಾರುತಿ 800 ಕಾರಿನಲ್ಲಿಯೇ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆವರೆಗೂ ನಿರಂತರವಾಗಿ ದೌರ್ಜನ್ಯ ಎಸಗಿದ್ದಾರೆ. ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆ ಸೇರಿದಂತೆ ಹಲವೆಡೆ ಸುತ್ತಾಟ ನಡೆಸಿದ್ದಾರೆ. ನಂತರ ಬೆಳಗಿನ ಜಾವ ಯುವತಿ ವಾಸವಿದ್ದ ಮನೆ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಾ. 26 ರಂದು ನೊಂದ ಯುವತಿ ದೂರು ನೀಡಿದ್ದಾಳೆ. ತನಿಖೆಗೆ ಇಳಿದ ಪೊಲೀಸರು ನಾಲ್ವರು ಕಾಮುಕರಿಗೆ ಹೆಡೆಮುರಿ ಕಟ್ಟಿದ್ದಾರೆ.  ಸತೀಶ್, ವಿಜಯ್, ಶ್ರೀಧರ್ ಹಾಗೂ ಕಿರಣ್ ಎಂಬುವರೇ ಇಂಥಾ ನೀಚ ಕೃತ್ಯ ಎಸಗಿದ್ದಾರೆ..

suddiyaana