ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಮೇಲ್ಛಾವಣಿ ಕುಸಿದು 4 ವಾರಗಳಾದ್ರೂ ಸಿಕ್ಕಿಲ್ಲ ದುರಸ್ತಿ ಭಾಗ್ಯ!
ಬೆಂಗಳೂರು: ಉದ್ಘಾಟನೆಯಾದ ಒಂದೇ ವರ್ಷಕ್ಕೆ ಬೈಯಪ್ಪನಹಳ್ಳಿಯ ಅತ್ಯಾಧುನಿಕ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ನ ಮೇಲ್ಛಾವಣಿ ಕುಸಿದು ನಾಲ್ಕು ವಾರಗಳೇ ಕಳೆದಿವೆ. ಆದರೂ ಕೂಡ ಇದಕ್ಕೆ ದುರಸ್ತಿ ಭಾಗ್ಯ ಸಿಕ್ಕಿಲ್ಲ!
ಬೈಯ್ಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ಒಂದು ಭಾಗದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಮಳೆ ನೀರು ಸೋರಿಕೆಯಾಗುತ್ತಿದೆ. ಆದರೆ ಇದುವರೆಗೆ ಅದನ್ನು ದುರಸ್ತಿ ಮಾಡುವ ಯಾವುದೇ ಕೆಲಸಗಳು ನಡೆದಿಲ್ಲ. ಸೀಲಿಂಗ್ ನಲ್ಲಿ ರಂದ್ರಗಳು ಕಂಡು ಬಂದಿವೆ. ಸೀಲಿಂಗ್ ನ ಮುರಿದ ಭಾಗಗಳು ಇನ್ನು ಅದೇ ಸ್ಥಳದಲ್ಲಿವೆ. ಬೈಯ್ಯಪ್ಪನಹಳ್ಳಿ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ಒಂದು ಭಾಗದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಮಳೆ ನೀರು ಸೋರಿಕೆಯಾಗುತ್ತಿದೆ. ಆದರೆ ಇದುವರೆಗೆ ಅದನ್ನು ದುರಸ್ತಿ ಮಾಡುವ ಯಾವುದೇ ಕೆಲಸಗಳು ನಡೆದಿಲ್ಲ. ಸೀಲಿಂಗ್ ನಲ್ಲಿ ರಂದ್ರಗಳು ಕಂಡು ಬಂದಿವೆ. ಸೀಲಿಂಗ್ ನ ಮುರಿದ ಭಾಗಗಳು ಇನ್ನು ಅದೇ ಸ್ಥಳದಲ್ಲಿವೆ. ಘಟನೆ ನಡೆದು ನಾಲ್ಕೂ ವಾರ ಕಳೆದಿದ್ದು, ಇನ್ನೂ ದುರಸ್ತಿ ಮಾಡಿಲ್ಲ.
ಇದನ್ನೂ ಓದಿ: ರೈಲು ಪ್ರಯಾಣಿಕರೇ ನಿಮ್ಮ ಸರ ಜೋಪಾನ – ಚಲಿಸುತ್ತಿದ್ದ ರೈಲಿನಲ್ಲಿ ಕೊರಳಲ್ಲಿದ್ದ ಸರ ಕಿತ್ತು ಪರಾರಿ!
ಈ ಬಗ್ಗೆ ನೈಋತ್ಯ ರೈಲ್ವೆ ವಲಯ CPRO, ಅನೀಶ್ ಹೆಗ್ಡೆ ಮಾತನಾಡಿದ್ದಾರೆ. ಬ್ಯಾರಿಕೇಡ್ ವಿಸ್ತರಣೆ ಮಾಡಲಾಗಿದೆ. ನಿಲ್ದಾಣದ ನಿರ್ಮಾಣದ ಗುತ್ತಿಗೆ ಪಡೆದಿರುವ ಎಂವಿವಿ ಸತ್ಯನಾರಾಯಣ ಅವರಿಗೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ತಿಳಿಸಲಾಗಿದೆ. ಈ ರೀತಿಯ ಅವಘಡಗಳು ಪುನರಾವರ್ತನೆಯಾಗುವುದನ್ನು ತಡೆಗಟ್ಟಲು, ಫಾಲ್ಸ್ ಸೀಲಿಂಗ್ ಸಪೋರ್ಟ್ ಗಾಗಿ ಅಡಿಷನಲ್ ಸಸ್ಪೆಂಡರ್ ಅಳವಡಿಸಲಾಗಿದೆ. ಫಾಲ್ಸ್ ಸೀಲಿಂಗ್ಗಾಗಿ ಅಲ್ಯೂಮಿನಿಯಂ ಶೀಟ್ಗಳು ಪುಣೆಯಿಂದ ಬರಬೇಕು. ನಮಗೆ 150 ಚದರ ಮೀಟರ್ ಶೀಟ್ ಬೇಕಾಗುತ್ತದೆ. ಇದನ್ನು ಹಾಳೆಗಳಾಗಿ ಕತ್ತರಿಸಲಾಗುತ್ತದೆ, ಪ್ರತಿಯೊಂದೂ 3.5 ಮೀ ಉದ್ದ ಮತ್ತು 184 ಸೆಂ ಅಗಲವನ್ನು ಅಳತೆ ಇರುತ್ತದೆ. ಫಾಲ್ಸ್ ಸೀಲಿಂಗ್ನ ಮೂಲೆಗಳಲ್ಲಿ ಹೆಚ್ಚಿನ ಗಾಳಿಯು ಕತ್ತರಿಸುವುದನ್ನು ತಡೆಯಲು ಟ್ವೀಕ್ ಮಾಡಲಾಗುತ್ತಿದೆ. “125 ಕಿಮೀ ವೇಗದ ಗಾಳಿಯ ವೇಗವನ್ನು ತಡೆದುಕೊಳ್ಳುವಂತೆ ಛಾವಣಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಡಿಆರ್ಎಂ ಶ್ಯಾಮ್ ಸಿಂಗ್ ಮಾತನಾಡಿ, ಪ್ರಬಲ ಹಾಗೂ ತೀವ್ರ ವೇಗದ ಗಾಳಿ ಬೀಸಿದ್ದು, ಚಂಡಮಾರುತವು ಫಾಲ್ಸ್ ಸೀಲಿಂಗ್ನ ಒಂದು ಭಾಗವನ್ನು ಹಾನಿಗೊಳಿಸಿದೆ. ಹಾನಿಗೊಳಗಾದ ಭಾಗವನ್ನು ಬದಲಾಯಿಸಲಾಗುತ್ತಿದೆ ಮತ್ತು ಮರುಸ್ಥಾಪನೆಯನ್ನು ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಅವರು ಹೇಳಿದರು, ನಿರ್ಮಾಣ ಮತ್ತು ಬಳಸಿದ ವಸ್ತುಗಳು ಕಳಪೆ ಗುಣಮಟ್ಟದ್ದಾಗಿವೆ ಎಂದಿದ್ದಾರೆ.