ಕಳಪೆ ಮಟ್ಟಕ್ಕೆ ಕುಸಿದ ಸಿಲಿಕಾನ್‌ ಸಿಟಿ ಏರ್‌ ಕ್ವಾಲಿಟಿ! – ಬೆಂಗಳೂರಿಗರೇ ಎಚ್ಚರ.. ನಿಮ್ಮ ಹಾರ್ಟ್ ಜೋಪಾನ!

ಕಳಪೆ ಮಟ್ಟಕ್ಕೆ ಕುಸಿದ ಸಿಲಿಕಾನ್‌ ಸಿಟಿ ಏರ್‌ ಕ್ವಾಲಿಟಿ! – ಬೆಂಗಳೂರಿಗರೇ ಎಚ್ಚರ.. ನಿಮ್ಮ ಹಾರ್ಟ್ ಜೋಪಾನ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ದಿನೇ ದಿನೆ ಹೆಚ್ಚಾಗುತ್ತಿದೆ. ವಾಯುಗುಣಮಟ್ಟ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದು ಪ್ರಾಣಿ, ಪಕ್ಷಿಗಳು ಮಾತ್ರವಲ್ಲದೇ, ಜನರ ಮೇಲೂ ಗಂಭೀರ ಪರಿಣಾಮ ಬೀಳುತ್ತಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ಬರದಿದ್ದರೆ ಜನರ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀಳಲಿದೆ.

ಇದನ್ನೂ ಓದಿ:‌ ಬಿಗ್‌ಬಾಸ್‌ ವೀಕೆಂಡ್‌ನಲ್ಲಿ ಸುದೀಪ್‌ ನಿರೂಪಣೆ ಇರಲ್ಲ! – ಶನಿವಾರ, ಭಾನುವಾರ ಶೋ ಹೋಸ್ಟ್‌ ಮಾಡೋದ್ಯಾರು?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಏರ್ ಕ್ವಾಲಿಟಿ ಪಾತಾಳಕ್ಕಿಳಿದಿದೆ. ಕಳೆದ ಹಲವು ದಿನಗಳಿಂದ  ವಾಯುಗುಣಮಟ್ಟ 170 ರಿಂದ 200ರವೆಗೂ ಏರಿಳಿತ ಕಾಣುತ್ತಿದೆ. ಇಂದು ಬೆಂಗಳೂರಿನಲ್ಲಿ PM2.5 ಪ್ರಮಾಣ 112ಕ್ಕೆ ತಲುಪಿದ್ದು, PM10 ಪ್ರಮಾಣ 155ಕ್ಕೆ ಇಳಿದಿದೆ. ನಗರದಲ್ಲಿ ವಾಯುಮಾಲಿನ್ಯ  ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಇದೆ. ಈಗಾಗಲೇ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಕಳೆದ ನಾಲ್ಕು ವರ್ಷದಲ್ಲಿ ಈ ವರ್ಷವೇ ಬೆಂಗಳೂರಿನ ಹವೆ ಇಷ್ಟರ ಮಟ್ಟಿಗೆ ಹದಗೆಟ್ಟಿದೆ. ಜಾಸ್ತಿ ಹದಗೆಟ್ಟ ಗಾಳಿಯ ಸೇವನೆಯಿಂದ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಎದುರಾಗಲಿದ್ದು, ಮನೆಯಿಂದ ಹೊರ ಬೀಳುವಾಗ ಆದಷ್ಟು ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ

  • ಬೆಂಗಳೂರು –196
  • ಮಂಗಳೂರು – 157
  • ಮೈಸೂರು – 112
  • ಬೆಳಗಾವಿ – 163
  • ಕಲಬುರ್ಗಿ – 137
  • ಶಿವಮೊಗ್ಗ – 84
  • ಬಳ್ಳಾರಿ – 196
  • ಹುಬ್ಬಳ್ಳಿ- 97
  • ಉಡುಪಿ – 124
  • ವಿಜಯಪುರ –96
  • ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

Shwetha M