ಪ್ರವಾಸಿಗರೇ ಗಮನಿಸಿ.. ನಾಗರಹೊಳೆ, ಬಂಡೀಪುರ ಸಫಾರಿಯಲ್ಲಿ ಮಹತ್ವದ ಬದಲಾವಣೆ!

ಪ್ರವಾಸಿಗರೇ ಗಮನಿಸಿ.. ನಾಗರಹೊಳೆ, ಬಂಡೀಪುರ ಸಫಾರಿಯಲ್ಲಿ ಮಹತ್ವದ ಬದಲಾವಣೆ!

ಸಫಾರಿ ಪ್ರಿಯರಿಗೆ ಒಂದು ಶಾಕಿಂಗ್‌ ಸುದ್ದಿಯಿದೆ. ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಸಫಾರಿ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಇನ್ನುಮುಂದೆ ಎರಡು ಪ್ರದೇಶಗಳಲ್ಲಿ ಹೊಸ ನಿಯಮ ತರಲಾಗಿದೆ.

ಇದನ್ನೂ ಓದಿ:  ಅಯೋಧ್ಯಾ ಮಂದಿರ ಸಂಪೂರ್ಣ ಸಿದ್ಧ! – ನ.25 ಕ್ಕೆ ಮೋದಿ ಧ್ವಜಾರೋಹಣ

ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಸಫಾರಿ ಪ್ರಿಯರ ನೆಚ್ಚಿನ ತಾಣ. ಈ ಎರಡೂ ಪ್ರದೇಶಗಳು ಹುಲಿ ಸಂರಕ್ಷಿತ ಪ್ರದೇಶಗಳಾಗಿದ್ದು, ಸಫಾರಿ ಮಾಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಫಾರಿಯ ಟ್ರಪ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಆದರೆ ರಾತ್ರಿ 6 ಗಂಟೆಯ ನಂತರವೂ ಕಾಡಿನಲ್ಲಿ ಸಫಾರಿ ವಾಹನಗಳು ಸಂಚರಿಸುತ್ತಿವೆ. ವಾಹನದ ಬೆಳಕು ಮತ್ತು ಶಬ್ದದಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡುತ್ತಿವೆ ಎಂದು ವಿವಿಧ ರೈತ ಸಂಘಟನೆಗಳು ಆರೋಪಿಸಿ, ಕೂಡಲೇ ಸಫಾರಿ ನಿಲ್ಲಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಸಫಾರಿಯಲ್ಲಿ ಹೊಸ ಬದಲಾವಣೆ ಮಾಡಿದ್ದು, ಇದು ಸಫಾರಿಪ್ರಿಯರಿಗೆ ತುಸು ಬೇಸರ ಉಂಟುಮಾಡುವಂತಿದೆ. ಇದೀಗ ಸಫಾರಿಯ ಟ್ರಪ್ ಗಳ ಪೈಕಿ ಕೊನೆಯ ಒಂದು ಟ್ರಿಪ್ ನಿಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.

ಏನೆಲ್ಲ ಬದಲಾವಣೆ?

ಬಂಡೀಪುರದಲ್ಲಿ ಈಗ ಇರುವ ಸಫಾರಿಯ ಟ್ರಿಪ್​ಗಳ ಪೈಕಿ ಕೊನೆಯ ಒಂದು ಟ್ರಿಪ್ ಅನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ. ಬಂಡೀಪುರದಲ್ಲಿ ಸದ್ಯ 5 ಜಿಪ್ಸಿ, 5 ಕ್ಯಾಂಪರ್ ಹಾಗೂ 7 ಮಿನಿ ಬಸ್ ಸೇರಿದಂತೆ ಒಟ್ಟು 17 ವಾಹನಗಳು ಸಫಾರಿಗೆ ಹೋಗುತ್ತವೆ. ಪ್ರತಿ ದಿನ ಬೆಳಗ್ಗೆ 6.30 ಹಾಗೂ 8 ಗಂಟೆಗೆ ಎರಡು ಟ್ರಿಪ್‌ ಆದರೆ, ಮಧ್ಯಾಹ್ನದಿಂದ ಸಂಜೆವರೆಗೆ ಮೂರು ಟ್ರಿಪ್‌ ತೆರಳುತ್ತಿದ್ದವು. ಇದರಲ್ಲಿ ಒಂದು ಟ್ರಿಪ್‌ ಇನ್ಮುಂದೆ ಇರಲ್ಲ. ಜಂಗಲ್ ಲಾಡ್ಜ್​ನಿಂದಲೂ 10 ವಾಹನಗಳು ಸಫಾರಿಗೆ ತೆರಳುತ್ತವೆ. ಸಂಜೆ 5ರ ನಂತರ ಹೊರಡುವ ಸಫಾರಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಈ ಅವಧಿಯಲ್ಲೇ ಪ್ರವಾಸಿಗರು ಹೆಚ್ಚಾಗಿ ಸಫಾರಿಗೆ ಬರುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಈ ಕೊನೆಯ ಟ್ರಿಪ್‌ ರದ್ದಾಗಲಿದೆ. ಈ ಆದೇಶದ ಅನುಸಾರ ಕ್ರಮ ಕೈಗೊಳ್ಳುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Shwetha M