ರಾಜಧಾನಿಯಲ್ಲಿ ಕಾವೇರಿದ ಕಾವೇರಿ ವಿವಾದ – ಮಂಗಳವಾರ ಬೆಂಗಳೂರು ಬಂದ್

ರಾಜಧಾನಿಯಲ್ಲಿ ಕಾವೇರಿದ ಕಾವೇರಿ ವಿವಾದ – ಮಂಗಳವಾರ ಬೆಂಗಳೂರು ಬಂದ್

ರಾಜ್ಯದಲ್ಲಿ ಕಾವೇರಿ ವಿವಾದ ಮತ್ತೆ ಕಾವೇರಿದೆ. ಮೊದಲೇ ಕರ್ನಾಟಕದಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲ. ಕಾವೇರಿ ನದಿ ತೀರದ ರೈತರ ಆತಂಕವೂ ಹೆಚ್ಚಾಗಿದೆ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಡಲೇ ಬೇಕಾದ ಅನಿವಾರ್ಯತೆಗೆ ಕರ್ನಾಟಕ ರಾಜ್ಯ ಸರ್ಕಾರ ಸಿಲುಕಿದೆ. ಇದೀಗ ಕಾವೇರಿ ನದಿ ಪಾತ್ರದ ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ, ಜೆಡಿಎಸ್ ಸೇರಿದಂತೆ ರಾಜ್ಯದ ಪ್ರಮುಖ ವಿರೋಧ ಪಕ್ಷಗಳು, ನೂರಾರು ಸಂಘಟನೆಗಳು ಸಿಡಿದೆದ್ದಿವೆ. ಸೆಪ್ಟೆಂಬರ್ 26 ಮಂಗಳವಾರ ಬೆಂಗಳೂರು ಬಂದ್ ಆಗಲಿದೆ. ಬಂದ್ ದಿನ ಏನಿರುತ್ತೆ ಏನಿಲ್ಲ ಅನ್ನೋದನ್ನು ನೋಡೋಣ.

ಇದನ್ನೂ ಓದಿ: ಕಾವೇರಿ ನಮ್ಮದು… ನಾನು ಸಹ ಕಾವೇರಿಗಾಗಿ ಹೋರಾಟ ಮಾಡುವೆ! – ಅನಾರೋಗ್ಯ ಲೆಕ್ಕಿಸದೆ ಮಂಡ್ಯಕ್ಕೆ ಹೊರಟ ನಟಿ ಲೀಲಾವತಿ

ಸೆಪ್ಟೆಂಬರ್ 26 ಮಂಗಳವಾರ ಬೆಂಗಳೂರು ಬಂದ್ ಆಗಲಿದೆ. ಜೊತೆಯಲ್ಲೇ ಸೆಪ್ಟೆಂಬರ್ 29 ಶುಕ್ರವಾರ ಕರ್ನಾಟಕ ಬಂದ್ ಗೂ ಕರೆ ನೀಡಲಾಗಿದೆ. ಮಂಗಳವಾರ ಇಡೀ ಬೆಂಗಳೂರು ಸ್ತಬ್ಧ ಆಗಲಿದೆ. ಕನ್ನಡ ಪರ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳ ಜೊತೆಗೆ ಬಿಜೆಪಿ ಕೂಡಾ ಬಂದ್‌ಗೆ ಬೆಂಬಲ ಘೋಷಣೆ ಮಾಡಿದೆ. ಹಲವು ಉದ್ಯಮಗಳ ನೌಕರರ ಸಂಘ ಕೂಡಾ ಬಂದ್‌ಗೆ ಬೆಂಬಲ ನೀಡಿವೆ.

ಬೆಂಗಳೂರಿನಲ್ಲಿ ಮಂಗಳವಾರ ಏನೇನು ಇರಲ್ಲ..?

  • ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಬಸ್ ಓಡಾಟ ಇಲ್ಲ
  • ಗೂಡ್ಸ್ ವಾಹನ ಸೇವೆ ಕೂಡಾ ಇರಲ್ಲ
  • ಯಶವಂತಪುರ, ದಾಸನಪುರ ಎಪಿಎಂಸಿ ಮಾರುಕಟ್ಟೆ ತೆರೆಯುವುದಿಲ್ಲ
  • ಹೋಟೆಲ್, ರೆಸ್ಟೊರೆಂಟ್, ಮಾಲ್, ಮಲ್ಟಿಪ್ಲೆಕ್ಸ್ ಓಪನ್ ಇಲ್ಲ
  • ಅಂಗಡಿ ಮಳಿಗೆಗಳು ಬಂದ್ ಆಗಲಿವೆ

ಬೆಂಗಳೂರು ಬಂದ್- ಏನೇನು ಇರುತ್ತೆ?

  • ಖಾಸಗಿ ಶಾಲೆಗಳ ಒಕ್ಕೂಟದಿಂದ ನೈತಿಕ ಬೆಂಬಲ ಮಾತ್ರ
  • ಸರ್ಕಾರಿ ಶಾಲೆ, ಕಾಲೇಜುಗಳು ತೆರೆದಿರುತ್ತೆ
  • ಆಸ್ಪತ್ರೆ, ಆಂಬುಲೆನ್ಸ್ ಸೇವೆ, ತುರ್ತು ಸೇವೆಗಳು ಎಂದಿನಂತೆ ಸಾಗಲಿವೆ
  • ಬೆಂಗಳೂರು ಮೆಟ್ರೋ ರೈಲು ಎಂದಿನಂತೆ ಕಾರ್ಯಾಚರಣೆ
  • ಸರ್ಕಾರಿ, ಖಾಸಗಿ ಕಚೇರಿಗಳು ಬಂದ್ ಇಲ್ಲ

Sulekha