ಆಸ್ಪತ್ರೆಯಲ್ಲಿದ್ದ ಸಂಗೀತಾ, ಪ್ರತಾಪ್ ಕಣ್ಣಿಗೆ ಬ್ಯಾಂಡೇಜ್ – ವಿನಯ್, ನಮ್ರತಾಗೆ ಪಶ್ಚಾತ್ತಾಪವೇ ಇಲ್ಲ – ಬಿಗ್ಬಾಸ್ ಮನೆಗೆ ಕಿಚ್ಚಸುದೀಪ್ ಎಂಟ್ರಿ..!

ಆಸ್ಪತ್ರೆಯಲ್ಲಿದ್ದ ಸಂಗೀತಾ, ಪ್ರತಾಪ್ ಕಣ್ಣಿಗೆ ಬ್ಯಾಂಡೇಜ್ – ವಿನಯ್, ನಮ್ರತಾಗೆ ಪಶ್ಚಾತ್ತಾಪವೇ ಇಲ್ಲ – ಬಿಗ್ಬಾಸ್ ಮನೆಗೆ ಕಿಚ್ಚಸುದೀಪ್ ಎಂಟ್ರಿ..!

ಒಬ್ಬರಿಗೆ ನೋವಾದಾಗ ಖುಷಿ ಪಡುವುದನ್ನು ಅಮಾನವೀಯತೆ ಎನ್ನುತ್ತಾರೆ. ಬಿಗ್‌ಬಾಸ್ ಮನೆಯಲ್ಲಿ ಇರುವವರಿಗೆ ಇಷ್ಟೊಂದು ರಾದ್ಧಾಂತ ನಡೆದರೂ, ತಮ್ಮ ಜೊತೆಯಲ್ಲೇ ಇದ್ದ ಸ್ಪರ್ಧಿಗಳು ಆಸ್ಪತ್ರೆಗೆ ಸೇರಿದರೂ ಚೂರೂ ಕೂಡಾ ಪಶ್ಚಾತ್ತಾಪ ಆಗಿಲ್ಲವೇ. ಇವರೆಲ್ಲಾ ಸೇಡಿನ ಜ್ವಾಲೆಯಲ್ಲಿ ಬೆಂದು ಇಷ್ಟೊಂದು ಕ್ರೂರಿಗಳಾದರೇ.. ಇವರ ಆಟಕ್ಕೆ ಬೇಸತ್ತು ಕಿಚ್ಚ ಸುದೀಪ್ ರೊಚ್ಚಿಗೆದ್ದು ಸೀದಾ ದೊಡ್ಮನೆಗೆ ಬಂದು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ವಿನಯ್ ಸೇಡಿಗೆ ಆಸ್ಪತ್ರೆ ಸೇರಿದ ಸಂಗೀತಾ, ಡ್ರೋನ್ ಪ್ರತಾಪ್ – ಸ್ಪರ್ಧಿಗಳ ಅತಿರೇಕದ ವರ್ತನೆಗೆ ಬಿಗ್‌ಬಾಸ್ ಮೌನವೇಕೆ?

ಬಿಗ್‌ಬಾಸ್ ರಿಯಾಲಿಟಿ ಶೋ ಜನರಿಗೆ ನೋಡಲು ಇರುವಂಥಾ ಶೋ ಅನ್ನೋದು ಸ್ಪರ್ಧಿಗಳಿಗೆ ಸ್ವಲ್ಪವಾದರೂ ಅರಿವು ಇರಲೇಬೇಕು. ಟಾಸ್ಕ್ ವಿಚಾರಕ್ಕೆ ಬಂದಾಗ ನಮ್ಮ ಆಟ ನಾವು ನ್ಯಾಯಯುತವಾಗಿ ಆಟಬೇಕು ಎಂಬ ನಿಲುವು ಇರಬೇಕು. ಸಿಟ್ಟು, ಜಗಳ ಮನುಷ್ಯನ ನಡುವೆ ಆಗಿಯೇ ಆಗುತ್ತದೆ. ಇದಕ್ಕೆ ವೀಕ್ಷಕರ ಆಕ್ಷೇಪವೂ ಇಲ್ಲ. ಸ್ಪರ್ಧಿಗಳ ಸಿಟ್ಟು, ಜಗಳ, ನೋವು, ನಲಿವು ನೋಡೋದು ಕೂಡಾ ವೀಕ್ಷಕರಿಗೂ ಇಷ್ಟವೇ. ಆದರೆ, ಈ ಬಾರಿ ಬಿಗ್‌ಬಾಸ್ ಶೋನಲ್ಲಿ ಆಗುತ್ತಿರುವುದು ತೀರಾ ಅತಿರೇಕದ ವರ್ತನೆ ಮಾತ್ರ. ಇದನ್ನು ನೋಡಿ ಮಾಧ್ಯಮಗಳು, ಸೋಶಿಯಲ್ ಮೀಡಿಯಾಗಳು ಪ್ರಶ್ನೆ ಮಾಡುತ್ತಿವೆ. ಇದು ಬಿಗ್‌ಬಾಸ್ ಆಯೋಜಕರಿಗೆ ತಲೆನೋವಾಗಿದೆ. ಕಿಚ್ಚ ಸುದೀಪ್ ಕೂಡಾ ಅತಿರೇಕದ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸುದೀಪ್ ನೇರವಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಬಿಗ್‌ಬಾಸ್ ಮನೆಯಲ್ಲಾದ ರಾದ್ಧಾಂತ ನೋಡಿ ಸಂಗೀತಾ ಅವರ ಸಹೋದರ ಕೂಡಾ ತೀವ್ರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತನ್ನ ಸಹೋದರಿಯನ್ನು ಈ ರೀತಿ ಹಿಂಸಾತ್ಮಕ ರೂಪದಲ್ಲಿ ಸ್ಪರ್ಧಿಗಳು ನಡೆಸಿಕೊಂಡಿರುವುದನ್ನು ಸಂತೋಷ್ ಅವರು ಪ್ರಶ್ನೆ ಮಾಡಿದ್ದಾರೆ. ಸಧ್ಯ ರಾಮಯ್ಯ ಆಸ್ಪತ್ರೆಯಲ್ಲಿ ಸಂಗೀತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕಣ್ಣಿಗೆ ಬ್ಯಾಂಡೇಜ್ ಸುತ್ತಲಾಗಿದೆ. ಸಂಗೀತಾ ಕುಟುಂಬದವರು ಕೂಡಾ ದ್ವೇಷದ ಆಟದ ವಿರುದ್ಧ ಕಿಡಿಕಾರಿದ್ದಾರೆ.

ಸಂಗೀತಾ ಶೃಂಗೇರಿ ಸಹೋದರ ಸಂತೋಷ್ ಕುಮಾರ್ ಈ ವಿಚಾರವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಸುದೀಪ್ ಸರ್, ನೀವು ಹೇಳಿದ್ದಿರಿ. ಬಿಗ್ಬಾಸ್ ಮನೆ ಸುರಕ್ಷಿತ. ಏನು ಆಗಲ್ಲ ಅಂತ. ಆದರೆ ಈಗ ನೋಡಿದ್ರೆ, ಇದು ಹಾಗಿಲ್ಲ. ಇದು ಕುಟುಂಬದ ಶೋ ಅಂತ ಕಾಣಲ್ಲ. ಕೇವಲ ಹಿಂಸೆಯೇ ಕಾಣ್ತಿದೆ. ಕುಟುಂಬದವರು ಈ ರೀತಿಯ ಆಕ್ರಮಕಣಕಾರಿ ವರ್ತನೆಯನ್ನು ಹೇಗೆ ನೋಡ್ತಾರೆ” ಎಂದು ಪ್ರಶ್ನಿಸಿದ್ದಾರೆ. ಬಿಗ್ಬಾಸ್ ಇರೋದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವೀಕ್ಷಕರು ಕೂಡ ಈ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ.

ಇನ್ನು ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಅವರ ಚಿಕಿತ್ಸೆ ಮುಂದುವರೆದಿದೆ. ಅವರಿಬ್ಬರ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿದ್ದು, ಇಬ್ಬರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಸಂಗೀತಾ ಮತ್ತು ಪ್ರತಾಪ್ ಆಸ್ಪತ್ರೆ ಸೇರಿ 2 ದಿನ ಕಳೆದಿದೆ. ಇನ್ನೂ 2 ದಿನಗಳ ಕಾಲ ರೆಸ್ಟ್ ನೀಡುವ ಅವಶ್ಯಕತೆ ಇರುತ್ತದೆ. ಜೊತೆಗೆ ಆಸ್ಪತ್ರೆಯಿಂದ ಚೇತರಿಸಿಕೊಂಡ ಡ್ರೋನ್ ಪ್ರತಾಪ್ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದು, ಬಿಗ್‌ಬಾಸ್ 2 ದಿನ ರೆಸ್ಟ್ ಮಾಡುವಂತೆ ಆದೇಶ ನೀಡಿದ್ದಾರೆ ಎನ್ನಲಾಗುತ್ತಿದೆ.

ವಿಪರ್ಯಾಸವೆಂದರೆ ತಮ್ಮ ಜೊತೆಗಿರುವ ಇಬ್ಬರು ಆಸ್ಪತ್ರೆ ಸೇರಿದರೂ ವಿನಯ್ ಮತ್ತು ಗ್ಯಾಂಗ್ ದ್ವೇಷದ ಮಾತನ್ನು ಮುಂದುವರೆಸಿದ್ದಾರೆ. ಈ ಟೀಮ್‌ನಲ್ಲಿರುವ ಯಾರಿಗೂ ಪಶ್ಚಾತ್ತಾಪ ಕೂಡಾ ಆಗಿಲ್ಲ. ಇನ್ನೂ ಟೈಮ್ ಕೊಡಬೇಕಿತ್ತು. ನಾವು ಇನ್ನೂ ಸ್ಟ್ರಾಂಗ್ ಆಗಿಯೇ ರಿವೇಂಜ್ ತೀರಿಸಿಕೊಳ್ಳಬೇಕಿತ್ತು ಎಂದು ಹೇಳಿಕೊಂಡಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ವಿನಯ್ ಮತ್ತು ಟೀಮ್‌ನವರ ಕ್ರೂರ ವರ್ತನೆಯನ್ನು ಈಗ ವೀಕ್ಷಕರು ಪ್ರಶ್ನೆಮಾಡುತ್ತಿದ್ದಾರೆ. ಇದು ಅಮಾನವೀಯತೆ ಎಂದು ಹೇಳುತ್ತಿದ್ದಾರೆ. ಇದರ ನಡುವೆ ವೀಕೆಂಡ್ ಪಂಚಾಯ್ತಿ ಮಾಡುವ ಮೊದಲು ಬಿಗ್‌ಬಾಸ್ ಮನೆಗೆ ಕಿಚ್ಚ ಸುದೀಪ್ ಹೋಗಿದ್ದಾರೆ ಅನ್ನೋ ವಿಚಾರ ಹೊರಬಿದ್ದಿದೆ. ಬಿಗ್‌ಬಾಸ್ ಮನೆಯಲ್ಲಾಗಿರುವ ಬೆಳವಣಿಗೆಯಿಂದ ಕಿಚ್ಚ ಸುದೀಪ್ ಕೂಡಾ ರೊಚ್ಚಿಗೆದ್ದಿದ್ದಾರೆ ಎಂಬ ಅಪ್‌ಡೇಟ್ಸ್ ಸಿಗ್ತಿದೆ. ಹೀಗಾಗಿ ವೀಕೆಂಡ್ ಶೋ ನೋಡಲು ವೀಕ್ಷಕರು ಕೂಡಾ ಕಾಯುತ್ತಿದ್ದಾರೆ.

Sulekha