ಜಾತಕ ನೋಡಿ ಹಿಂದೂ ಸಂಪ್ರದಾಯದಂತೆ ಗಿಳಿಗಳ ಮದುವೆ! –  ಅಪರೂಪದ ಕಲ್ಯಾಣ ಹೇಗಿತ್ತು ಗೊತ್ತಾ?

ಜಾತಕ ನೋಡಿ ಹಿಂದೂ ಸಂಪ್ರದಾಯದಂತೆ ಗಿಳಿಗಳ ಮದುವೆ! –  ಅಪರೂಪದ ಕಲ್ಯಾಣ ಹೇಗಿತ್ತು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಪ್ರಾಣಿ, ಪಕ್ಷಿ ಪ್ರಿಯರಿಗೆ ಕೊರತೆ ಇಲ್ಲ. ಪ್ರಾಣಿಗಳೊಂದಿಗೆ ರೈಡ್, ಪ್ರೀತಿಯ ಸಾಕು ಪ್ರಾಣಿಗಳ  ಹುಟ್ಟು ಹಬ್ಬ ಆಚರಣೆ, ಮದುವೆ, ಸೀಮಂತ ಮಾಡುವುದನ್ನು ಕೇಳಿದ್ದೇವೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಈ ನಡುವೆ ಮಧ್ಯಪ್ರದೇಶದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಹಿಂದೂ ಸಂಪ್ರದಾಯದ ವಿಧಿವಿಧಾನಗಳಂತೆ 2 ಗಿಳಿಗಳಿಗೆ ಅದ್ದೂರಿಯಾಗಿ ಮದುವೆ ಮಾಡಲಾಗಿದೆ.

ಇದನ್ನೂ ಓದಿ: ಸಾಲ ಮಾಡದಿದ್ದರೂ ಕಾರು ಹರಾಜು! ಮಾಲೀಕರು ಮಾಡಿದ ತಪ್ಪಾದ್ರೂ ಏನು ಗೊತ್ತಾ?

ಮಧ್ಯಪ್ರದೇಶದ ಕರೇಲಿ ಸಮೀಪದ ಪಿಪಾರಿಯಾ ಎಂಬಲ್ಲಿ ರಾಮ್ ಸ್ವರೂಪ್ ಎಂಬುವವರು ಗಿಳಿಯನ್ನು ಸಾಕುತ್ತಿದ್ದರು. ಆ ಗಿಳಿಗೆ ಮೈನಾ ಎಂದು ಹೆಸರಿಟ್ಟು ತಮ್ಮ ಮಗಳಂತೆ ಬೆಳೆಸಿದ್ದರು. ತಮ್ಮ ಮಕ್ಕಳು ಬೆಳೆದು ನಿಂತಾಗ ಹೇಗೆ ಮದುವೆ ಮಾಡಿಸುತ್ತಾರೋ ಅದೇ ರೀತಿ ಮೈನಾ ಮದುವೆ ಮಾಡಲು ನಿರ್ಧರಿಸಿದ್ದಾರೆ. ಬಳಿಕ ಮೈನಾಗೆ ಗಂಡು ಹುಡುಕಲು ಶುರು ಮಾಡಿದ್ದಾರೆ. ತಮ್ಮ ಪರಿಚಿತರ ಬಳಿ ವಿಚಾರಿಸಿದ್ದಾರೆ. ಈ ವೇಳೆ ಅದೇ ಗ್ರಾಮದ ಲಾಲ್ ವಿಶ್ವಕರ್ಮ ಎಂಬುವವರು ಗಿಳಿ ಸಾಕುತ್ತಿದ್ದಾರೆ ಎಂಬ ಸುದ್ದಿ ರಾಮ್ ಸ್ವರೂಪ್ ಗೆ ಗೊತ್ತಾಗಿದೆ. ಬಳಿಕ ಅವರನ್ನು ಭೇಟಿಯಾಗಿ ತನ್ನ ಮಗಳಂತೆ ಇರುವ ಮೈನಾಗೆ ನಿಮ್ಮ ಗಿಳಿಯನ್ನು ಮದುವೆ ಮಾಡಿಕೊಡುತ್ತೀರಾ ಎಂದು ಕೇಳಿದ್ದಾರೆ. ಇದಕ್ಕೆ ವಿಶ್ವಕರ್ಮ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ  2 ಗಿಳಿಗಳ ಜಾತಕ ಪರೀಕ್ಷಿಸಿ ಹೊಂದಾಣಿಕೆ ಬಂದ ಬಳಿಕ ಮದುವೆ ಮಾತುಕತೆ ಮುಂದುವರಿಸಿದ್ದಾರೆ. ಅಲ್ಲದೇ ಹಿಂದೂ ಸಂಪ್ರದಾಯದ ವಿಧಿ ವಿಧಾನಗಳಂತೆ ಮದುವೆ ನಡೆಸುವುದಾಗಿ ಎರಡೂ ಮನೆಯವರು ನಿರ್ಧರಿಸಿದ್ದಾರೆ.

ನಿಗದಿಯಾದ ದಿನದಂದೇ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಮದುವೆ ನೆರವೇರಿಸಲಾಗಿದೆ. ಮದುವೆ ವೇಳೆ ವರನನ್ನು ಕರೆ ತರುವಾಗ ಚಿಕ್ಕ ವಾಹನದಲ್ಲಿ ಪಂಜರವನ್ನಿರಿಸಿ ಗ್ರಾಮದುದ್ದಕ್ಕೂ ಮೆರವಣಿಗೆ ನಡೆಸಿದ್ದಾರೆ. ಬಳಿಕ ಮದುವೆ ಮಂಟಪಕ್ಕೆ ವರನನ್ನು ಕರೆಸಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಲಾಗಿದೆ. ಈ ವಿಶಿಷ್ಟ ವಿವಾಹಕ್ಕೆ ಪಿಪಾರಿಯಾ ಗ್ರಾಮದ ಜನರು ಸಾಕ್ಷಿಯಾಗಿದ್ದಾರೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

suddiyaana