ಬಿಪಿ, ಕಿಡ್ನಿ ಸ್ಟೋನ್ ನಿವಾರಣೆಗೆ ರಾಮಬಾಣ – ಬಾಳೆದಿಂಡು ಸೇವನೆಯಿಂದ ಎಷ್ಟೊಂದು ಪ್ರಯೋಜನ?

ಬಿಪಿ, ಕಿಡ್ನಿ ಸ್ಟೋನ್ ನಿವಾರಣೆಗೆ ರಾಮಬಾಣ – ಬಾಳೆದಿಂಡು ಸೇವನೆಯಿಂದ ಎಷ್ಟೊಂದು ಪ್ರಯೋಜನ?

ಬಾಳೆಹಣ್ಣು ಸೇವನೆಯಿಂದ ಏನೆಲ್ಲಾ ಉಪಯೋಗ ಇದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಬಾಳೆದಿಂಡು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ತುಂಬಾನೇ ಪೌಷ್ಟಿಕ ಸತ್ವಗಳನ್ನ ಹೊಂದಿರುವ ಬಾಳೆಗಿಡದ ಕಾಂಡವನ್ನ ದಿಂಡು ಅಂತಾ ಕರೀತಾರೆ. ಇದ್ರಲ್ಲಿ ವಿಟಮಿನ್ ಬಿ6 ಮತ್ತು ಪೊಟ್ಯಾಶಿಯಂ ಪ್ರಮಾಣ ಹೆಚ್ಚಾಗಿದೆ.

ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡುತ್ತಿದ್ದೀರಾ?

ಬಿಪಿ, ಶುಗರ್, ಗ್ಯಾಸ್ಟ್ರಿಕ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಬಾಳೆ ದಿಂಡಿನ ರಸ ರಾಮಬಾಣವಾಗಿ ಕೆಲಸ ಮಾಡುತ್ತೆ. ಇದು ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಆಗಾಗ ಅಡುಗೆಗಳಲ್ಲಿ ಬಳಸಿ ತಿನ್ನೋದ್ರಿಂದ ಕಿಡ್ನಿಗಳಲ್ಲಿ ಕ್ಯಾಲ್ಸಿಯಂ ಶೇಖರಣೆಯಾಗುವುದು ತಪ್ಪುತ್ತದೆ. ಈಗಾಗ್ಲೇ ಸ್ಟೋನ್ ಇದ್ರೆ ಹೊರ ಹೋಗುತ್ತದೆ. ಕೆಲವೊಂದು ಅಧ್ಯಯನಗಳು ಕೂಡ ಬಾಳೆ ದಿಂಡಿನ ಸಾರದಿಂದ ಕಿಡ್ನಿ ಕಲ್ಲುಗಳ ನಿವಾರಣೆ ಸಾಧ್ಯ ಎಂದಿವೆ. ಹಾಗೇ ನಿಮ್ಮ ದೇಹದ ತೂಕ ಹೆಚ್ಚಾಗದಂತೆಯೂ ಕಂಟ್ರೋಲ್ ಮಾಡುತ್ತೆ. ಬಾಳೆದಿಂಡಿನಲ್ಲಿ ನಾರಿನ ಅಂಶ ಹೆಚ್ಚಾಗಿರೋದ್ರಿಂದ ಹೊಟ್ಟೆ ಹಸಿವು ಕಡಿಮೆ ಮಾಡುತ್ತೆ. ತುಂಬಾ ಸಮಯದವರೆಗೆ ನಿಮಗೇ ಹಸಿವು ಆಗೋದಿಲ್ಲ. ಜೊತೆಗೆ ಮಲಬದ್ಧತೆ ಸಮಸ್ಯೆಯನ್ನೂ ಪರಿಹರಿಸುತ್ತೆ. ಇನ್ನು ಖಾಲಿ ಹೊಟ್ಟೆಯಲ್ಲಿ ಬಾಳೆ ದಿಂಡಿನ ರಸ ಸೇವಿಸೋದ್ರಿಂದ ಹೊಟ್ಟೆಯ ಆಮ್ಲಿಯತೆ ದೂರವಾಗುತ್ತದೆ. ಇದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿಯಂತ್ರಣ ಮಾಡಬಹುದು. ​ಸಕ್ಕರೆ ಕಾಯಿಲೆ ಇರುವವರಿಗೂ ಕೂಡ ಬಾಳೆ ದಿಂಡಿನಿಂದ ಹಲವಾರು ಪ್ರಯೋಜನಗಳಿವೆ. ನಿಮ್ಮ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗದಂತೆ ಕೆಲಸ ಮಾಡುತ್ತದೆ. ಸಿಹಿ ಪ್ರಮಾಣ ಕಡಿಮೆ ಇರೋದ್ರಿಂದ ಶುಗರ್ ಲೆವೆಲ್ ಏರಿಕೆ ಆಗದಂತೆ ಕಂಟ್ರೋಲ್ ಮಾಡುತ್ತೆ. ಮೂತ್ರವರ್ಧಕ ಗುಣಲಕ್ಷಣಗಳು ಇರೋದ್ರಿಂದ ಮೂತ್ರ ಸೋಂಕುಗಳನ್ನ ನಿವಾರಣೆ ಮಾಡುತ್ತದೆ.. ಜ್ಯೂಸ್, ಪಲ್ಯ ಸೇರಿದಂತೆ ನಾನಾ ಬಗೆಯ ಅಡುಗೆ ಮಾಡಿ ಬಾಳೆದಿಂಡನ್ನ ಸೇವಿಸಬಹುದು.

Shantha Kumari