ಸಿಲಿಕಾನ್ ಸಿಟಿಯಲ್ಲಿ ನೀರಿಗಾಗಿ ಹಾಹಾಕಾರ – ಅಪಾರ್ಟ್ಮೆಂಟ್‌ಗಳಲ್ಲಿ ವಾಹನ ತೊಳೆಯುವುದು, ಸ್ವಿಮ್ಮಿಂಗ್ ಪೂಲ್ ಬಳಕೆ ನಿಷೇಧ!

ಸಿಲಿಕಾನ್ ಸಿಟಿಯಲ್ಲಿ ನೀರಿಗಾಗಿ ಹಾಹಾಕಾರ – ಅಪಾರ್ಟ್ಮೆಂಟ್‌ಗಳಲ್ಲಿ ವಾಹನ ತೊಳೆಯುವುದು, ಸ್ವಿಮ್ಮಿಂಗ್ ಪೂಲ್ ಬಳಕೆ ನಿಷೇಧ!

ಮಾರ್ಚ್‌ ತಿಂಗಳ ಆರಂಭದಲ್ಲಿಯೇ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನೀರಿನ ಅಭಾವ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದು ನಗರದ ಅಪಾರ್ಟ್ಮೆಂಟ್‌ಗಳಿಗೂ ಬಿಸಿ ತಟ್ಟಿದೆ. ಇದೀಗ ಅಪಾರ್ಟ್ಮೆಂಟ್‌ಗಳಲ್ಲಿ ವಾಹನಗಳನ್ನು ತೊಳೆಯುವುದನ್ನು ಹಾಗೂ ಸ್ವಿಮ್ಮಿಂಗ್ ಪೂಲ್ ಬಳಕೆ ಮಾಡುವುದನ್ನು ನಿಷೇಧಿಸಿದ್ದು, ಅಲ್ಲಿನ ನಿವಾಸಿಗಳು ಶಾಕ್‌ ಆಗಿದ್ದಾರೆ.

ಇದನ್ನೂ ಓದಿ:   ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತನ ‘ಪರಾರಿ ಪ್ಲಾನ್’ ಭಯಾನಕ – ಬೆಂಗಳೂರಿನಲ್ಲಿ ಬಸ್‌ ಹತ್ತಿ ಬಳ್ಳಾರಿಗೆ ಹೋದ್ನಾ ಬಾಂಬರ್?

ನಗರದ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ವಿಪರೀತವಾಗಿ ಕಾಣಿಸಿಕೊಂಡಿದೆ. ಕೆಲವು ಕಡೆಗಳಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿನಿ ನಿರ್ಮಾಣವಾಗಿದೆ. ಇದೀಗ ಬೆಂಗಳೂರಿನ ಅಪಾರ್ಟ್ಮೆಂಟ್ ಅಸೋಸಿಯೇಷನ್‌ ವಾಹನಗಳನ್ನು ತೊಳೆಯುವುದನ್ನು ಹಾಗೂ ಸ್ವಿಮ್ಮಿಂಗ್ ಪೂಲ್ ಬಳಕೆ ಮಾಡುವುದನ್ನು ನಿಷೇಧಿಸಿದೆ. ನೀರಿನ ಅಭಾವ ತೀವ್ರಗೊಂಡ ಹಿನ್ನೆಲೆಯಲ್ಲಿ ಇಂತಹದೊಂದು ಹೆಜ್ಜೆಯನ್ನು ಇಟ್ಟಿದೆ.

ಇನ್ನು ಬೆಂಗಳೂರಿನ ಪ್ರಮುಖ ರೆಸಿಡೆನ್ಶಿಯಲ್ ಎನ್‌ಕ್ಲೇವ್ ತನ್ನ ನಿವಾಸಿಗಳಿಗೆ ಬಳಸಿ ಬಿಸಾಡಬಹುದಾದ ಪಾತ್ರೆಗಳನ್ನು ಬಳಸುವುದು ಹಾಗೂ ಸ್ವಚ್ಛತೆಗೆ ಟಿಶ್ಯೂ ಪೇಪರ್‌ಗಳನ್ನು ಬಳಸುವ ಬಗ್ಗೆ ಯೋಚಿಸಲು ಪ್ರಸ್ತಾಪಿಸಿದೆ ಎಂದು ತಿಳಿದುಬಂದಿದೆ.

ಈ ಕುರಿತಾಗಿ ಪಿಎಫ್‌ಸಿ ಅಪಾರ್ಟ್ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ವಸಂತ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ನೀರಿನ ಮಿತ ಬಳಕೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಪಾರ್ಟ್ಮೆಂಟ್‌ಗಳಲ್ಲಿ ಖಾಸಗಿ ಟ್ಯಾಂಕರ್‌ ಮೂಲಕ ಪೂರೈಕೆ ಮಾಡಲಾಗುತ್ತಿರುವ ನೀರನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಇದೀಗ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆಗೂ ಸಮಸ್ಯೆ ಎದುರಾಗಿದೆ. ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯತ್ತ ನಾವು ಮುಖ ಮಾಡಲು ಚಿಂತನೆ ನಡೆಸುತ್ತಿದ್ದೇವೆ. ಕೆಆರ್‌ಎಸ್ ಡ್ಯಾಂನಲ್ಲೂ ಅಗತ್ಯ ನೀರಿನ ಸಂಗ್ರಹ ಇಲ್ಲ. ಈ ಕಾರಣಕ್ಕಾಗಿ ನೀರಿನ ಬಳಕೆ ಕಡಿಮೆ ಮಾಡಲು ಬಳಸಿ ಬಿಸಾಡುವ ಪಾತ್ರಗಳು, ಟಿಶ್ಯೂ ಪೇಪರ್‌ಗಳನ್ನು ಬಳಕೆ ಮಾಡಲು ಸಲಹೆ ನೀಡಿದ್ದೇವೆ ಎಂದು ಹೇಳಿದ್ದಾರೆ.

Shwetha M