ಈ ದಿನದಂದು ಬೆಂಗಳೂರು ನಗರದಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ! – ಕಾರಣವೇನು ಗೊತ್ತಾ?

ಈ ದಿನದಂದು ಬೆಂಗಳೂರು ನಗರದಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ! – ಕಾರಣವೇನು ಗೊತ್ತಾ?

ಸಿಲಿಕಾನ್‌ ಸಿಟಿ ಬೆಂಗಳೂರಿನ ಮಾಂಸ ಪ್ರಿಯರಿಗೆ ಮಹತ್ವದ ಸುದ್ದಿಯಿದೆ.  ಮೇ 23 ರಂದು ಬೆಂಗಳೂರು ನಗರದಲ್ಲಿ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡದಲಾಗಿದೆ. ಈ ಬಗ್ಗೆ ಬಿಬಿಎಂಪಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: RCBಗೆ ಎದುರಾಳಿ ಯಾರು? – ಫೈನಲ್‌ನಲ್ಲಿ KKR ಟೀಮ್‌ನ ಸೋಲಿಸಬಹುದಾ?

ಹೌದು, ಮೇ 23 ರಂದು ಬುದ್ಧ ಪೂರ್ಣಿಮಾ ಇದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಾಂಸ ಮಾರಾಟ ನಿಷೇಧಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿಬಿಎಂಪಿ, ಗುರುವಾರದಂದು “ಬುದ್ಧ ಪೂರ್ಣಿಮಾ” ಆಚರಿಸಲಾಗುತ್ತಿದೆ. ಈ ಪವಿತ್ರ ದಿನದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಮಾಡಬಾರದು. ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಜಂಟಿ ನಿರ್ದೇಶಕರು(ಪಶುಪಾಲನೆ) ಸೂಚನೆ ನೀಡಿದ್ದಾರೆ.

ದಿ ಹುಬ್ಬಳ್ಳಿ ಬುದ್ಧಿಸ್ಟ್‌ ಅಸೋಸಿಯೇಷನ್‌ ವತಿಯಿಂದ ಮೇ 23ರಂದು ಭಗವಾನ್‌ ಬುದ್ಧ (ಬೌದ್ಧ ಪೂರ್ಣಿಮಾ)ಜಯಂತಿಯನ್ನು ಇಲ್ಲಿನ ಗಣೇಶಪೇಟೆಯ ಬುದ್ಧ ವಿಹಾರದಲ್ಲಿಆಯೋಜಿಸಲಾಗಿದೆ. ಆ ದಿನ ಬೆಳಗ್ಗೆ 8.30ಕ್ಕೆ ವರ್ಲ್ಡ್ ಬುದ್ದಿಸ್ಟ್‌ ಧ್ವಜಾರೋಹಣ, ಮಹಾಬುದ್ಧ ಪೂಜೆ, ನಂತರ ಬುದ್ಧ, ಧಮ್ಮ, ಸಂಘ ಪೂಜೆ ಹಾಗೂ ಬೌದ್ಧ ಮಂತ್ರ ಪಠಣೆ ನಡೆಯಲಿದೆ. ಬೆಳಗ್ಗೆ 11ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ.

Shwetha M