ಉತ್ತರ ಕರ್ನಾಟಕ ಹುಲಿ ಬಾಳು ಬೆಳಗುಂದಿ.. 3ನೇ ಕ್ಲಾಸ್.. ಕುರಿ ಕಾಯಕ.. 600 ಹಾಡು!
ಸರಿಗಮಪದಲ್ಲಿ ಹಾವೇರಿಯ ಜವಾರಿ ಹೈದ

ಉತ್ತರ ಕರ್ನಾಟಕ ಹುಲಿ ಬಾಳು ಬೆಳಗುಂದಿ.. 3ನೇ ಕ್ಲಾಸ್.. ಕುರಿ ಕಾಯಕ.. 600 ಹಾಡು!ಸರಿಗಮಪದಲ್ಲಿ ಹಾವೇರಿಯ ಜವಾರಿ ಹೈದ

ಝೀ ಕನ್ನಡದಲ್ಲಿ ಸರಿಗಮಪ ಹವಾ ಶುರುವಾಯ್ತು. ಸೀಸನ್ 20ರ ರಿಯಾಲಿಟಿ ಶೋಗೆ ಆಡಿಷನ್ಸ್​ ಕೂಡ ಮುಗಿದಿದೆ. ಕಳೆದ ವಾರದಿಂದ ಈ ಎಪಿಸೋಡ್ಸ್ ಪ್ರಸಾರ ಆಗ್ತಿದೆ. ಬಟ್ ಆಡಿಷನ್ಸ್ ರೌಂಡ್ ಟೆಲಿಕಾಸ್ಟ್ ಆದ್ಮೇಲೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಹೆಸ್ರು ಬಾಳು ಬೆಳಗುಂದಿ. ಯಾರಪ್ಪ ಈ ಬಾಳು ಬೆಳಗುಂದಿ ಅಂತಾ ಜನ್ರಂತೂ ಬೇಜಾನ್ ತಲೆಕೆಡಿಸ್ಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ತಡಕಾಡ್ತಿದ್ದಾರೆ. ಉತ್ತರ ಕರ್ನಾಟಕದ ಈ ಜವಾರಿ ಹೈದನ ಕ್ರೇಜ್ ಹೆಂಗಿದೆ? 3ನೇ ಕ್ಲಾಸ್ ಓದಿರೋ ಹುಡ್ಗ ರೈಟರ್ & ಸಿಂಗರ್ ಆಗಿದ್ದೇಗೆ? ಹಾವೇರಿ  ಯುವಕನ ಬಗೆಗಿನ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಮೇಜರ್ ಟ್ವಿಸ್ಟ್! – ಭಾರತ-ಪಾಕ್ ಗೆ ಹೊಸ ಸ್ಟೇಡಿಯಂ?

ಆಕ್ಚುಲಿ ಸರಿಗಮಪ ಆಡಿಷನ್‌ಗೆ ಬರೋ ಮುಂಚೆಯೇ ಉತ್ತರ ಕರ್ನಾಟಕ ಜನ್ರ ಪಾಲಿಗೆ ಈ ಬಾಳು ಬೆಳಗುಂದಿ ದೊಡ್ಡ ಸೆಲೆಬ್ರಿಟಿ. ಯೂಟ್ಯೂಬ್‌ನಲ್ಲಿ 12 ಲಕ್ಷಕ್ಕೂ ಹೆಚ್ಚು ಸಬ್ ಸ್ಕ್ರೈಬರ್ಸ್ ಹೊಂದಿರುವ ಬೆಳಗುಂದಿ ತಮ್ಮ ಟ್ಯಾಲೆಂಟ್ ಮೂಲಕವೇ ಮನೆ ಮಾತಾದವ್ರು. ಈಗ ಸರಿಗಮಪ ಶೋಗೆ ಕಾಲಿಟ್ಟಿದ್ದಾರೆ. ಆಡಿಷನ್​ನಲ್ಲಿ ಬೇರೆ ಬೇರೆ ಸ್ಪರ್ಧಿಗಳೆಲ್ಲಾ ಸಿನಿಮಾ ಹಾಡುಗಳನ್ನ ಆಡ್ತಿದ್ರೆ ಬೆಳಗುಂದಿ ಮಾತ್ರ ತಾವೇ ರಚಿಸಿ ತಾವೇ ಹಾಡಿದ ಹಾಡನ್ನ ಹಾಡಿ ಶೋಗೆ ಸೆಲೆಕ್ಟ್ ಆಗಿದ್ದಾರೆ. ಈತನ ದೇಸಿ ಪ್ರತಿಭೆಗೆ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೇ ರಾಜೇಶ್ ಕೃಷ್ಣನ್ ಕೂಡ ಫಿದಾ ಆಗಿದ್ದಾರೆ. ಅಷ್ಟೇ ಯಾಕೆ ಆನ್ ದಿ ಸ್ಪಾಟ್​ನಲ್ಲೇ ಌಂಕರ್ ಅನುಶ್ರೀ ಬಗ್ಗೆಯೂ ಹಾಡು ಹೇಳಿ ಎಲ್ಲರ ಹುಬ್ಬೇರಿಸಿದ್ದಾರೆ. ಹೀಗೆ ಡೇ ಒನ್​ನಿಂದಲೇ ಹವಾ ಎಬ್ಬಿಸ್ತಿರೋ ಬೆಳಗುಂದಿ ಈ ಬಾರಿಯ ಸರಿಗಮಪ ಶೋನಲ್ಲಿ ಮೇನ್ ಹೈಲೆಟ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಅದ್ರಲ್ಲೂ ಸರಿಗಮಪ ಆಡಿಷನ್ ವೇಳೆ ಹಾಡಿರೋ ಕರಿಯ ಕೂದಲಿಗೆ ಕೆಂಪಾನ ಬಣ್ಣ ಹಚ್ಚಿ ಎಬ್ಬಿಸ್ಯಾಳ ಧೂಳಾ ಹಾಡಂತೂ ವೀಕ್ಷಕರ ಕಿವಿಯಲ್ಲಿ ಗುಯ್ ಗುಡ್ತಿದೆ.

ನಮ್ಮ ಜಾನಪದ ಸೊಗಡು ಅದೆಷ್ಟು ಶ್ರೀಮಂತವಾಗಿದೆ ಅನ್ನೋದು ಇವ್ರ ಧ್ವನಿಯಲ್ಲೇ ಗೊತ್ತಾಗುತ್ತೆ. ಸಾಹಿತ್ಯದ ಸದ್ದನ್ನ ಆಲಿಸೋದಾ, ಧ್ವನಿಯ ಮಾಧುರ್ಯವನ್ನ ಅನುಭವಿಸೋದಾ ಅನ್ನೋದು ಗೊತ್ತೇ ಆಗಲ್ಲ. ಹಂಗಂತ ಬೆಳಗುಂದಿ ಏನು ಸಂಗೀತ ಕ್ಷೇತ್ರದಲ್ಲಿ ದೊಡ್ಡ ವಿಧ್ವಾಂಸರಲ್ಲ. ಕುರಿ ಕಾಯುವ ಹುಡುಗ. ಎಲೆ ಮರೆಯ ಕಾಯಿಯಂತೆ ಬೆಳೆದಿರೋ ಗ್ರಾಮೀಣ ಪ್ರತಿಭೆ.  ಸೋಶಿಯಲ್ ಮೀಡಿಯಾ ವಿಡಿಯೋಗಳಿಗಾಗಿ ಹಾಡೋಕೆ ಶುರು ಮಾಡಿದ ಬೆಳಗುಂದಿ ತಮಗೇ ಗೊತ್ತಿಲ್ಲದಂತೆ ತಮ್ಮ ಟ್ಯಾಲೆಂಟ್ ಮೂಲಕ ಜನ್ರಿಗೆ ಹತ್ತಿರವಾಗಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಇವ್ರೇ ಹಾಡುಗಳನ್ನ ಬರೆಯುತ್ತಾರೆ ಅಂದ್ರೆ ನೀವು ನಂಬ್ಲೇಬೇಕು. 500ರಿಂದ 600 ಹಾಡುಗಳನ್ನ ಬರೆದಿರೋದಾಗಿ ಬೆಳಗುಂದಿಯೇ ಹೇಳಿಕೊಂಡಿದ್ದಾರೆ.

ಬಾಳು ಬೆಳಗುಂದಿಯವ್ರ ಸಾಂಗ್ಸ್ ಎಷ್ಟು ಸ್ಪೆಷಲ್ಲೋ ಅವ್ರ ಟ್ಯೂನ್ ಕೂಡ ಅಷ್ಟೇ ಸ್ಪೆಷಲ್. ಯಾಕಂದ್ರೆ ಜನಪದ ಅಥವಾ ಫೇಮಸ್ ಆದಂತ ಹಾಡುಗಳಿದ್ದರೆ ಅದೇ ಟ್ಯೂನ್​ನಲ್ಲಿ ಅವ್ರದ್ದೇ ಸ್ಟೈಲ್‌ನಲ್ಲಿ ಹಾಡು ಬರೆದು ಹಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಕುರಿ ಕಾಯುವ ಕೆಲಸದ ಜತೆಗೆ ಸೋಷಿಯಲ್‌ ಮೀಡಿಯಾಕ್ಕಾಗಿ ಹಾಡ್ತಾರೆ. ಇಷ್ಟೆಲ್ಲಾ ಟ್ಯಾಲೆಂಟ್ ಇದ್ರೂ ಓದಿರೋದು ಜಸ್ಟ್ ಮೂರನೇ ಕ್ಲಾಸ್ ಅಷ್ಟೇ. ಎಜುಕೇಶನ್ ಕಮ್ಮಿ ಇದ್ರೂ ಅಚ್ಚಕನ್ನಡದ ಸುಂದರ ಹಾಡುಗಳನ್ನು ದೇಸಿ ಸ್ಟೈಲ್‌ನಲ್ಲಿ ಬರೆದು ಹಾಡುವ ಇವರ ಪ್ರತಿಭೆ ಎಲ್ಲರಿಗೂ ಅಚ್ಚರಿ ತಂದಿದೆ.

ಬಾಳು ಬೆಳಗುಂದಿ ಮೂಲತಃ ಹಾವೇರಿಯ ಕತ್ರಿಕೊಪ್ಪ ಎಂಬ ಹಳ್ಳಿಯವರು. ಬೆಳಗುಂದಿ ಅವ್ರು ಮಾಲಾಶ್ರೀ ಎಂಬ ಗಾಯಕಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರ ಇನ್‌ಸ್ಟಾಗ್ರಾಂನಲ್ಲೂ ಸಾಕಷ್ಟು ರೀಲ್ಸ್‌, ಹಾಡುಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಅಲ್ದೇ ಇಬ್ಬರೂ ಕೂಡ ಯೂಟ್ಯೂಬ್ ಚಾನೆಲ್​ಗಳನ್ನ ಹೊಂದಿದ್ದಾರೆ. ಬಾಳು ಬೆಳಗುಂದಿಯವ್ರ ಚಾನಲ್ 12 ಲಕ್ಷಕ್ಕೂ ಹೆಚ್ಚು ಸಬ್ ಸ್ಕ್ರೈಬರ್ಸ್ ನ ಹೊಂದಿದೆ.

ಇನ್ನು ಬೆಳಗುಂದಿಯವ್ರ ಸಾಕಷ್ಟು ಸಾಂಗ್ಸ್ ಹಲ್​ಚನ್ ಎಬ್ಬಿಸಿವೆ. ಇವ್ರ ಲಿರಿಕ್ಸ್ ಅಂತೂ ನೆಕ್ಸ್ಟ್​​ಲೆವೆಲ್​ನಲ್ಲಿದೆ. ಯೂಟ್ಯೂಬ್‌ ಚಾನೆಲ್‌ನಲ್ಲಿ ಅತೀ ಹೆಚ್ಚು ಜನಪ್ರಿಯತೆ ಪಡೆದಿರೋ ಹಾಡು ಅಂದ್ರೆ ಕುಣೀತಾಳೋ ಕುಣೀತಾಳೋ ನೆಲಕ್ ಕಾಲ್ ಹತ್ತದಂಗ್ ಕುಣೀತಾಳೋ ಅನ್ನೋ ಸಾಂಗ್ 12 ಕೋಟಿ ವೀಕ್ಷಣೆಯತ್ತ ಬಂದಿದೆ.

ಹೀಗೆ ಉತ್ತರ ಕರ್ನಾಟಕದಲ್ಲಿ ಗಿಚ್ ಎಬ್ಬಿಸಿರೋ ಮತ್ತೊಂದು ಹಾಡು ಲಂಗಾ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ ಎಂಬ ಹಾಡು. ಯೂಟ್ಯೂಬ್‌ನಲ್ಲಿ ಇದೂ ಕೂಡ ಟಾಪ್‌ನಲ್ಲಿದೆ. ಹೈಯೆಸ್ಟ್ ವ್ಯೂಸ್ ಲಿಸ್ಟ್​ನಲ್ಲಿ ಟಾಪ್ 2ನಲ್ಲಿದೆ. 11 ಕೋಟಿಗಿಂತ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅದ್ರಲ್ಲೂ ಜೀ ಕನ್ನಡ ಸರಿಗಮಪಗೆ ಸೆಲೆಕ್ಟ್ ಆದ್ಮೇಲಂತೂ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಿದೆ.

ಇನ್ನು ಬೆಳಗುಂದಿಯವ್ರ ಸಾಂಗ್ಸ್ ಲಿಸ್ಟ್ ನಲ್ಲಿ ಎಲ್ಲವೂ ಒಂದಕ್ಕಿಂತ ಒಂದು ಸೂಪರ್ ಡೂಪರ್ ಆಗಿವೆ. ಎಲ್ಲವೂ ಲಕ್ಷಗಟ್ಟಲೆ ವ್ಯೂಸ್ ಪಡ್ಕೊಂಡಿವೆ. ಒಂದೊಂದು ಹಾಡುಗಳಿಗೂ ಸಾವಿರಾರು ಕಾಮೆಂಟ್‌ಗಳು ಬಂದಿರುವುದು ಇವರ ಜನಪ್ರಿಯತೆಗೆ ಸಾಕ್ಷಿ. ತಮ್ಮ ಚಾನೆಲ್‌ನಲ್ಲಿ ಆಲ್ಬಮ್ ಸ್ಟೈಲ್​ಮಲ್ಲಿ ಸಾಂಗ್ಸ್ ಮಾಡೋದೇ ಇವ್ರಿಗೆ ಇರೋ ಇನ್ನೊಂದು ಪ್ಲಸ್ ಪಾಯಿಂಟ್.  ಅಲ್ದೇ ಪತ್ನಿ ಮಾಲಾಶ್ರೀ ಕೂಡ ಬಹುತೇಕ ಹಾಡುಗಳಲ್ಲಿ ಜೊತೆಯಾಗೋದ್ರಿಂದ ಈ ಜೋಡಿ ಉತ್ತರ ಕರ್ನಾಟಕದ ಪಾಲಿಗೆ ಮಸ್ತ್ ಮಜಾ ಕೊಡ್ತಿದೆ.

ಒಟ್ನಲ್ಲಿ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕತ್ರಿಕೊಪ್ಪ ಎಂಬ ಸಣ್ಣ ಹಳ್ಳಿಯ ಪ್ರತಿಭಾವಂತ ಯುವಕ ಈಗ ಸರಿಗಮಪ ವೇದಿಕೆ ಹತ್ತಿದ್ದಾರೆ.  ಓದಿರೋದು ಕೇವಲ 3ನೇ ಕ್ಲಾಸ್​. ಕುರಿ ಕಾಯೋ ಕಾಯಕ ಇವ್ರದ್ದು. ಹವ್ಯಾಸವಾಗಿ ಶುರುವಾದ ಗಾಯನ ಸರಿಗಮಪ ವೇದಿಕೆವರೆಗೂ ತಂದು ನಿಲ್ಲಿಸಿದೆ. ಸುಮಾರು 600ಕ್ಕೂ ಹೆಚ್ಚು ಹಾಡುಗಳನ್ನ ಬರೆದು ಹಾಡಿರೋ ಹೆಗ್ಗಳಿಕೆ ಇವ್ರದ್ದು. ಜನಪ್ರಿಯ ಹಾಡುಗಳ ಮ್ಯೂಸಿಕ್​ಗೆ ತಮ್ಮದೇ ಶೈಲಿಯ ಸಾಹಿತ್ಯ ಬರೆದು ಭಾವ ತುಂಬಿ ಹಾಡುವ ಬೆಳಗುಂದಿ ಆರಂಭದಲ್ಲೇ ಜನ್ರಿಗೆ ಫುಲ್ ಎಂಟರ್​ಟೈನ್​ಮೆಂಟ್ ಕೊಡ್ತಿದ್ದಾರೆ. ಸೋ ಮುಂದಿನ ದಿನಗಳಲ್ಲಿ ಜವಾರಿ ಹೈದನ ಪ್ರತಿಭೆ ಮತ್ತಷ್ಟು ಹೊರಬರಲಿ.. ಆತನ ಟ್ಯಾಲೆಂಟ್​ಗೆ ಒಳ್ಳೆ ಬೆಲೆ ಸಿಗ್ಲಿ ಅನ್ನೋದೇ ನಮ್ಮ ಆಶಯ.

Shwetha M

Leave a Reply

Your email address will not be published. Required fields are marked *