ಜಡ್ಜಸ್‌ಗೆ ಬಾಳು ಬೆಳಗುಂದಿ ಸ್ಪೆಷಲ್ಲಾ? – ಜವಾರಿ ಹೈದನ ವಿರುದ್ಧ ಕೆಟ್ಟ ಕಾಮೆಂಟ್ಸ್
ನಿಜವಾದ ಪ್ರತಿಭೆಗಳಿಗೆ ಬೆಲೆ ಇಲ್ವಾ?

ಜಡ್ಜಸ್‌ಗೆ ಬಾಳು ಬೆಳಗುಂದಿ ಸ್ಪೆಷಲ್ಲಾ? – ಜವಾರಿ ಹೈದನ ವಿರುದ್ಧ ಕೆಟ್ಟ ಕಾಮೆಂಟ್ಸ್ನಿಜವಾದ ಪ್ರತಿಭೆಗಳಿಗೆ ಬೆಲೆ ಇಲ್ವಾ?

ಸರಿಗಮಪ ಶೋನಲ್ಲಿ ಬಾಳು ಬೆಳಗುಂದಿ ಸಖತ್​ ಶೈನ್​ ಆಗಿದ್ದಾರೆ. ತಕ್ಷಣವೇ ಹಾಡನ್ನು ರೆಡಿ ಮಾಡಿ ಹಾಡೋ ಅದ್ಭುತ ಪ್ರತಿಭೆ. ಈ ಜವಾರಿ ಹೈದನಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆದ್ರೀಗ ವೀಕ್ಷಕರು ಬಾಳು ಬೆಳಗುಂದಿ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ. ಚೆನ್ನಾಗಿರೋ ಹಾಡನ್ನ ಕೆಟ್ಟದಾಗಿ ಹಾಡ್ತಿದ್ದಾರೆ.. ಆದ್ರೂ ಜಡ್ಜಸ್‌ ಅವರನ್ನೇ ಹೊಗಳ್ತಿದ್ದಾರೆ ಅಂತಾ ಆರೋಪ ಮಾಡ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ವೀಕ್ಷಕರು ಗ್ರಾಮೀಣ ಪ್ರತಿಭೆ ಮೇಲೆ ಅಸಮಧಾನ ಹೊರ ಹಾಕಿದ್ದು ಯಾಕೆ? ಶೋ ನಲ್ಲಿ ಏನಾಯ್ತು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ – ಈ ಮಾರ್ಗದಲ್ಲಿ ನಾಳೆ ಸಂಚಾರ ಸ್ಥಗಿತ!

ಸರಿಗಮಪ ಸೀಸನ್‌ 21 ಆಡಿಷನ್‌ ನಲ್ಲಿ ಬೇರೆ ಸ್ಪರ್ಧಿಗಳೆಲ್ಲಾ ಸಿನಿಮಾ ಹಾಡು ಹಾಡಿ ಸೆಲೆಕ್ಟ್‌ ಆದ್ರೆ, ಬಾಳು ಬೆಳಗುಂದಿ ಮಾತ್ರ ತಾವೇ ರಚಿಸಿ ಹಾಡಿದ ಹಾಡನ್ನ ಹಾಡಿ ಶೋ ಗೆ ಸೆಲೆಕ್ಟ್‌ ಆಗಿದ್ರು.. ಈತನ ದೇಸಿ ಪ್ರತಿಭೆಗೆ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೇ ರಾಜೇಶ್ ಕೃಷ್ಣನ್ ಕೂಡ ಫಿದಾ ಆಗಿದ್ರು. ಅಷ್ಟೇ ಯಾಕೆ ಆನ್ ದಿ ಸ್ಪಾಟ್​ನಲ್ಲೇ ಹಾಡು ಹೇಳಿ ಎಲ್ಲರ ಮನ ಗೆದ್ದಿದ್ರು. ಪ್ರತಿಭೆ ಇದೆ ಅನ್ನೋ ಕಾರಣಕ್ಕೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಚಾನ್ಸ್‌ ಕೂಡ ಕೊಟ್ಟಿದೆ. ಆದ್ರೀಗ ಇದೇ ದೇಸಿ ಪ್ರತಿಭೆ ಮೇಲೆ ವೀಕ್ಷಕರು ಸಿಟ್ಟು ಮಾಡ್ಕೊಂಡಿದ್ದಾರೆ. ಅಷ್ಟೇ ಅಲ್ಲ.. ಶೋನ ಜಡ್ಜಸ್‌ ವಿರುದ್ಧ ಕೂಡ ಅಸಮಧಾನ ಹೊರ ಹಾಕ್ತಿದ್ದಾರೆ. ಚೆನ್ನಾಗಿರೋ ಹಾಡನ್ನ ಹಾಳು ಮಾಡ್ತಿದ್ದಾರೆ ಅಂತಾ ಹೇಳ್ತಿದ್ದಾರೆ ವೀಕ್ಷಕರು.

ಅಂದ್ಹಾಗೆ, ಬಾಳು ಬೆಳಗುಂದಿ ಸರಿಗಮಪ  ಶೋಗೆ ಬರೋ ಮುಂಚೆಯೇ ಉತ್ತರ ಕರ್ನಾಟಕ ಜನ್ರ ಪಾಲಿಗೆ ದೊಡ್ಡ ಸೆಲೆಬ್ರಿಟಿ. ಬಾಳು ಬೆಳಗುಂದಿ ಓದಿದ್ದು ಮೂರನೇ ಕ್ಲಾಸ್‌ ಆದ್ರೂ, ಅವರು ಪದಕಟ್ಟಿ ಹಾಡೋದ್ರಲ್ಲಿ ಎಕ್ಸ್‌ಪರ್ಟ್‌ ಆಗಿದ್ದಾರೆ. ಜನಪದ ಅಥವಾ ಫೇಮಸ್ ಆದಂತ ಹಾಡುಗಳಿದ್ದರೆ ಅದೇ ಟ್ಯೂನ್​ನಲ್ಲಿ ಅವ್ರದ್ದೇ ಸ್ಟೈಲ್‌ನಲ್ಲಿ ಹಾಡು ಬರೆದು ಹಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಕುರಿ ಕಾಯುವ ಕೆಲಸದ ಜತೆಗೆ ಹಾಡು ಹಾಡಿ ಸೋಷಿಯಲ್‌ ಮೀಡಿಯಾದಲ್ಲೂ ಪೋಸ್ಟ್‌ ಮಾಡ್ತಾರೆ.. ಈಗಾಗಲೇ ಬಾಳುಬೆಳಗುಂದಿ ಯೂಟ್ಯೂಬ್‌ನಲ್ಲಿ 12 ಲಕ್ಷಕ್ಕೂ ಹೆಚ್ಚು ಸಬ್ ಸ್ಕ್ರೈಬರ್ಸ್ ಹೊಂದಿದ್ದಾರೆ. ಇದೀಗ ಇದೇ ಪ್ರತಿಭೆ ಸರಿಗಮಪದಲ್ಲೂ ಭಾಗವಹಿಸ್ತಿದ್ದಾರೆ. ಆರಂಭದಲ್ಲಿ ಬಾಳುಬೆಳಗುಂದಿಯನ್ನ ಮೆಚ್ಚಿದಂತಹ ವೀಕ್ಷಕರು ಈಗ ಅವರ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ. ಬರು ಬರುತ್ತಾ ರಾಯರ ಕುದುರೆ ಕತ್ತೆ ಆಯ್ತಾ ಅಂತಾ ಕೇಳ್ತಿದ್ದಾರೆ. ಬೆಳಗುಂದಿಗೆ ಟಾಲೆಂಟ್‌ ಇರೋದು ನಿಜ.. ಆದ್ರೆ ಅದು ಎಲ್ಲಾ ಸಮಯದಲ್ಲಿ ವರ್‌ಕೌಟ್‌ ಆಗಲ್ಲ..  ಬಾಳು ಬೆಳಗುಂದಿಗೆ ಯಾವ ಹಾಡು ಕೊಟ್ರು.. ಅದನ್ನ ಜನಪದ ಶೈಲಿಯಲ್ಲೇ ಹಾಡ್ತಾರೆ. ಅದು ಕೇಳೋಕೆ ಆಗಲ್ಲ.. ಆತ ಚೆನ್ನಾಗಿ ಹಾಡಿಲ್ಲ ಅಂದ್ರೂ ಜಡ್ಜ್ ಗಳು ಅದನ್ನೇ ದೇವಗಾಯನ ಅನ್ನೋ ತರ ಆಡ್ತಿದ್ದಾರೆ. ಎಲ್ಲಾ ಸಾಂಗ್‌ ಅನ್ನ ಜನಪದ ಸ್ಟೈಲ್‌ ಹಾಡಿದ್ರೂ ಜಡ್ಜಸ್‌ ಅದನ್ನೇ ಹೊಗಳ್ತಾರೆ.. ಟಿ ಆರ್‌ಪಿಗಾಗಿ ಇನ್ನೂ ಏನೆಲ್ಲಾ ಮಾಡ್ತಿರೋ ಅಂತಾ ಅಸಮಧಾನ ಹೊರ ಹಾಕ್ತಿದ್ದಾರೆ ಸಂಗೀತ ಪ್ರೇಮಿಗಳು. ಮತ್ತೂ ಕೆಲವರು, ಸಿಂಗಿಂಗ್‌ ಶೋ ಅಂದ್ಮೇಲೆ.. ರಾಗ, ತಾಳ, ಶೃತಿ ಎಲ್ಲವೂ ಸರಿ ಇರ್ಬೇಕು.. ಸಂಗೀತದಲ್ಲಿ ಸಾಧನೆ ಮಾಡ್ಬೇಕು ಅಂತಾ ಅದೇಷ್ಟೋ ವರ್ಷ ಪ್ರ್ಯಾಕ್ಟೀಸ್‌ ಮಾಡಿ ಶೋಗೆ ಬಂದಿರ್ತಾರೆ. ಈ ಶೋನಲ್ಲಿ ನಿಜವಾದ ಪ್ರತಿಭೆಗಳಿಗೆ ಏನ್‌ ಬೆಲೆ ಇದೆ? ಜಡ್ಜಸ್‌ ಗಳಿಗೆ ಏನ್‌ ಒತ್ತಡ ಇದೆ ಅಂತಾ ಗೊತ್ತಿಲ್ಲ.. ಹಾಡು ಹಾಡಿದ್ದು ಸರಿ ಇಲ್ಲ.. ಆದರೂ ಕೂಡ ಸರಿಯಾಗಿದೆ ಅಂತ ತೀರ್ಮಾನ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಲ್ಲಾ ಸ್ಪರ್ಧಿಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯ ಬಾಳುಬೆಳಗುಂದಿಗೆ ಕೊಡ್ತಿರೋದು ಸರಿನಾ? ಎಲ್ಲಾ ಸ್ಪರ್ಧಿಗಳನ್ನ ಈಕ್ವಲ್‌ ನೋಡಲ್ಲ ಯಾಕೆ ಅಂತಾ ಪ್ರಶ್ನೆ ಮಾಡಿದ್ದಾರೆ.

Shwetha M

Leave a Reply

Your email address will not be published. Required fields are marked *