ಸರಿಗಮಪಗೆ ಎಂಟ್ರಿ ಕೊಟ್ಟ ಗಗನಾ.. – ಕಮಾನ್ ಡಾರ್ಲಿಂಗ್ ಎಂದ ಬೆಳಗುಂದಿ
ಮಾತಿನ ಮಲ್ಲಿಗೆ ಜವಾರಿ ಹೈದನ ಸಾಂಗ್
ಜೀ ಕನ್ನಡ ಸರಿಗಮಪ ಶೋ, ಕನ್ನಡ ರಿಯಾಲಿಟಿ ಶೋಗಳ ಕಿಂಗ್ ಅಂತಾನೇ ಹೇಳ್ಬೋದು.. ಇದೀಗ ಸೀಸನ್ 21 ಅದ್ಧೂರಿಯಾಗಿ ಮೂಡಿ ಬರುತ್ತಿದೆ. ಪ್ರತಿ ವಾರ ಹೊಸ ಹೊಸ ಕಾನ್ಸೆಪ್ಟ್‌ನೊಂದಿಗೆ ಶೋ ವೀಕ್ಷಕರನ್ನ ಮನರಂಜಿಸುತ್ತಿದೆ. ಈ ವಾರ ಸರಿಗಮಪ ಶೋಗೆ ಮಹಾನಟಿ ಗಗನಾ ಎಂಟ್ರಿಕೊಟ್ಟಿದ್ದಾರೆ.. ಜವಾರಿ ಹೈದ ಬಾಳುಬೆಳಗುಂದಿ ಜೊತೆ ಸೇರಿ ಹಾಡಿ ಜಬರ್ದಸ್ತ್ ಮನರಂಜನೆ ನೀಡಿದ್ದಾರೆ.. ಈ ವೇಳೆ ದುರ್ಗದ ಹೆಣ್ಣ.. ದಾಳಿಂಬೆ ಹಣ್ಣು ಅಂತಾ ಗಗನಾಗೆ ಸ್ಪೆಷಲ್ ಹಾಡು ಡೆಡಿಕೇಟ್ ಮಾಡಿದ್ದಾರೆ..
ಇದನ್ನೂ ಓದಿ: ವಾಹನ ಸವಾರರಿಗೆ ಶಾಕ್ ಕೊಟ್ಟ ಪೊಲೀಸರು! – ಇನ್ನುಮುಂದೆ ಈ ತಪ್ಪು ಮಾಡಿದ್ರೆ ಡಿಎಲ್ ಅಮಾನತು!
ಕನ್ನಡದ ಜನಪ್ರೀಯ ರಿಯಾಲಿಟಿ ಶೋಗಳಲ್ಲಿ ಸರಿಗಮಪ ಕೂಡ ಒಂದು. ಟಿಆರ್ ಪಿ ರೇಸ್ ನಲ್ಲೂ ಈ ಶೋ ಮುಂದಿದೆ. ಸರಿಗಮಪ ಲಿಟಲ್ ಚಾಂಪ್ಸ್ ಅಥವಾ ವಯಸ್ಕರ ಸೀಸನ್ಗಳೇ ಆಗಲಿ ಎರಡು ರೀತಿಯ ಸೀಸನ್ಗಳು ಇಲ್ಲಿಯವರೆಗೂ ಸೂಪರ್ ಹಿಟ್ ಕಂಡಿವೆ. ಈಗಾಗಲೇ ಸೀಸನ್ 21 ಆರಂಭವಾಗಿದ್ದು, ವೀಕ್ಷಕರಿಗೆ ಮನರಂಜನೆಯ ಜೊತೆಗೆ ಸಂಗೀತ ರಸದೌತಣ ನೀಡುತ್ತಿದೆ. ಈ ಸೀಸನ್ 21ಕ್ಕೆ ಬಂದಿರೋ ಎಲ್ಲ ಸ್ಪರ್ಧಿಗಳು ಭಿನ್ನ ವಿಭಿನ್ನವಾಗಿ ಹಾಡು ಹಾಡುವ ಮೂಲಕ ಸಖತ್ ಫೇಮಸ್ ಆಗುತ್ತಿದ್ದಾರೆ. ಅದರಲ್ಲೂ ಹಳ್ಳಿ ಪ್ರತಿಭೆ ಬಾಳುಬೆಳಗುಂದಿ ಈ ಸೀಸನ್ ನಲ್ಲಿ ಹೈಲೈಟ್ ಆಗಿದ್ದಾರೆ.. ಯಾವುದೇ ಕ್ಷಣದಲ್ಲಾದ್ರೂ ಸಮಯಕ್ಕೆ ತಕ್ಕಂತೆ ಹಾಡು ರೆಡಿ ಮಾಡಿ.. ಹಾಡು ಹಾಡೋ ಅದ್ಭುತ ಗಾಯಕ.. ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕತ್ರಿಕೊಪ್ಪ ಎಂಬ ಸಣ್ಣ ಹಳ್ಳಿಯ ಪ್ರತಿಭಾವಂತ ಯುವಕ ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಮಹಾನಟಿ ಗಗನಾ ಜೊತೆ ಹಾಡು ಹಾಡಿ ಮತ್ತಷ್ಟು ಶೈನ್ ಆಗಿದ್ದಾರೆ.
ಸರಿಗಮಪ ರಿಯಾಲಿಟಿ ಪ್ರತಿ ವಾರ ವಿಭಿನ್ನ ಕಾನ್ಸೆಪ್ಟ್ ನೊಂದಿಗೆ ವೀಕ್ಷಕರನ್ನ ಮನರಂಜಿಸುತ್ತಿದೆ. ಈ ವಾರ ಸೀರಿಯಲ್ ನಟರ ಜೊತೆ ರಿಯಾಲಿಟಿ ಶೋನಲ್ಲಿ ಮಿಂಚಿದವರನ್ನ ಕರೆಸಲಾಗಿತ್ತು.. ಹೀಗಾಗಿ ಮಹಾನಟಿ ಗಗನ ಕೂಡ ಸರಿಗಮಪ ವೇದಿಕೆಯಲ್ಲಿ ಹಾಡಿ ರಂಜಿಸಿದ್ದಾರೆ. ಗಗನ, ಬಾಳು ಬೆಳಗುಂದಿ ಜೊತೆಗೆ ಕಮಾನು ಡಾರ್ಲಿಂಗ್ ಹಾಡನ್ನು ಹಾಡಿದ್ದಾರೆ ಎಲ್ಲರ ಮನಗೆದ್ದಿದ್ದಾರೆ., ಸರಿಗಮಪ ಮಹಾ ಮನರಂಜನೆಯಲ್ಲಿ ಬಾಳು ಬೆಳಗುಂದಿ ಮತ್ತು ಗಗನ ಸಖತ್ ಹಾಡಿನ ಜೊತೆಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಜೊತೆಗೆ ಮಹಾನಟಿ ಗಗನಗಾಗಿ ಒಂದು ಹಾಡನ್ನು ಡೆಡಿಕೇಟ್ ಮಾಡಿದ್ದಾರೆ.
ವೇದಿಕೆಯಲ್ಲಿ ಬಾಳು ಬೆಳಗುಂದಿ ದುರ್ಗದ ಹೆಣ್ಣೇ.. ದಾಳಿಂಬೆ ಹಣ್ಣೇ.. ಲೈಟ್ ಗೆ ಹೊಳೆದಂಗೆ ಹೊಳಿತಾವೆ ಅವ್ಳ ಕಣ್ಣ.. ನಿನ್ನ ಸೊಂಟ.. ಐತೆ ಸಣ್ಣ.. ಮಹಾ ನಟಿಯ ಮಹಾರಾಣಿ.. ಗಗನಾ ಗನನಾ ಮಸ್ತ್ ಕಾಣುತಿ ಅಂತಾ ಹಾಡಿದ್ದಾರೆ.. ಬಾಳು ಬೆಳಗುಂಡಿ ಹಾಡ್ತಿದ್ದಂತೆ ಗಗನಾ ನಾಚಿ ನೀರಾಗಿದ್ದಾರೆ.
ಇನ್ನೂ ಯೂಟ್ಯೂಬ್‌ನಲ್ಲಿ 12 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಬಾಳು ಬೆಳಗುಂದಿ. ಓದಿರೋದು ಕೇವಲ 3ನೇ ಕ್ಲಾಸ್. ಕುರಿ ಕಾಯೋ ಕಾಯಕ ಇವರದ್ದು. ಹವ್ಯಾಸವಾಗಿ ಶುರುವಾದ ಗಾಯನ ಸರಿಗಮಪ ವೇದಿಕೆ ವರೆಗೂ ತಂದು ನಿಲ್ಲಿಸಿದೆ. ಸುಮಾರು 600ಕ್ಕೂ ಹೆಚ್ಚು ಹಾಡುಗಳನ್ನ ಬರೆದು ಹಾಡಿರೋ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಜನಪ್ರಿಯ ಹಾಡುಗಳ ಮ್ಯೂಸಿಕ್ಗೆ ತಮ್ಮದೇ ಶೈಲಿಯ ಸಾಹಿತ್ಯ ಬರೆದು ಭಾವ ತುಂಬಿ ಹಾಡುತ್ತಾರೆ. ಸದ್ಯ ಸರಿಗಮಪ ವೇದಿಕೆಯಲ್ಲಿ ತಮ್ಮದೇ ಶೈಲಿಯಲ್ಲಿ ಹಾಡನ್ನು ಹಾಡಿ ಮೋಡಿ ಮಾಡುತ್ತಿದ್ದಾರೆ.