ಬಳ್ಳಾರಿ ಬ್ಯಾನರ್ ಗಲಾಟೆ ಕೇಸ್! – ಜನಾರ್ದನ ರೆಡ್ಡಿ ವಿರುದ್ಧ ಸ್ಫೋಟಕ ಸಾಕ್ಷ್ಯ ರಿಲೀಸ್ ಮಾಡಿದ ಭರತ್ ರೆಡ್ಡಿ ಬೆಂಬಲಿಗರು!

ಬಳ್ಳಾರಿಯ ಬ್ಯಾನರ್ ಗಲಾಟೆ ರಾಜಕೀಯ ತಿರುವು ಪಡೆದುಕೊಂಡಿದೆ. ಎರಡು ಬಣಗಳ ಮಧ್ಯೆ ಈಗ ಆರೋಪ ಪ್ರತ್ಯಾರೋಪ ಶುರುವಾಗಿದೆ. ಇದೀಗ ಗಲಭೆ ವೇಳೆ ಜನಾರ್ದನ ರೆಡ್ಡಿ ಮನೆ ಮೇಲೆ ಗನ್‌ಮ್ಯಾನ್ ನಿಂತಿರೋದು ಎನ್ನಲಾದ ಫೋಟೋವೊಂದನ್ನು ಶಾಸಕ ಭರತ್ ರೆಡ್ಡಿ ಬೆಂಬಲಿಗರು ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತೆ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ್ರಾ ಪೊಲೀಸರು? – ಕಡೆಗೂ ಬಯಲಾಯ್ತು ಅಸಲಿ ವಿಚಾರ!
ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ರಕ್ತ ಹರಿದಿದೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ನಿವಾಸದ ಬಳಿ ಫೈರಿಂಗ್, ಕಲ್ಲುತೂರಾಟ ನಡೆದಿದ್ದು, ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದಾನೆ. ಬ್ಯಾನರ್ ಗಲಾಟೆಯಿಂದ ಎದ್ದ ಕಿಚ್ಚು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿನ ಮೂಲಕ ಧಗಧಗಿಸಿ ತಾರಕಕ್ಕೇರಿದೆ. ರಾಜಶೇಖರ್ ದೇಹ ಹೊಕ್ಕಿದ ಗುಂಡು ಯಾರದ್ದು ಎಂಬ ಪ್ರಶ್ನೆ ಇದೀಗ ನಿಗೂಢವಾಗಿದೆ. ಜನಾರ್ದನ ರೆಡ್ಡಿ ಕಡೆಯವರಿಂದಲೂ ಫೈರಿಂಗ್ ನಡೆದಿದೆ ಎಂದು ಆರೋಪಿಸಲಾಗಿದ್ದು, ಸರ್ಕಾರಿ ಗನ್‌ಮ್ಯಾನ್ ವಿಚಾರಣೆಗೆ ಕಾಂಗ್ರೆಸ್ ಒತ್ತಾಯ ಮಾಡಿದೆ. ಇದೀಗ ಗಲಭೆ ವೇಳೆ ಜನಾರ್ದನ ರೆಡ್ಡಿ ಮನೆ ಮೇಲೆ ಗನ್‌ಮ್ಯಾನ್ ನಿಂತಿರೋದು ಎನ್ನಲಾದ ಫೋಟೋವೊಂದನ್ನು ಶಾಸಕ ಭರತ್ ರೆಡ್ಡಿ ಬೆಂಬಲಿಗರು ರಿಲೀಸ್ ಮಾಡಿದ್ದಾರೆ. ಜನಾರ್ದನ ರೆಡ್ಡಿ ಕಡೆಯವರಿಂದಲೂ ಫೈರಿಂಗ್ ನಡೆದಿದೆ ಎಂದು ಆರೋಪಿಸಲಾಗಿದ್ದು, ಸರ್ಕಾರಿ ಗನ್‌ಮ್ಯಾನ್ ವಿಚಾರಣೆಗೆ ಕಾಂಗ್ರೆಸ್ ಒತ್ತಾಯ ಮಾಡಿದೆ. ಹೀಗಾಗಿ ಈಗ ಬಿಡುಗಡೆ ಮಾಡಲಾಗಿರುವ ಫೋಟೋ ಬಗ್ಗೆಯೂ ಬಳ್ಳಾರಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇನ್ನು ಈ ಗಲಭೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ರೆಡ್ಡಿ ಹಾಗೂ ಬೆಂಬಲಿಗ ನಾಗರಾಜ್ ನೀಡಿದ ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ಯತ್ನ ಎಂದು ಆರೋಪಿಸಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಕೇಸ್ ದಾಖಲಿಸಿದ್ದರೆ, ಅವರ ಆಪ್ತ ನಾಗರಾಜ್ ಅಟ್ರಾಸಿಟಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಬ್ಯಾನರ್ ಹರಿದ ಸ್ಥಳ, ಜನಾರ್ದನ ರೆಡ್ಡಿ ತೋರಿಸಿದ ಜಾಗಗಳನ್ನು ಬಾಂಬ್ ನಿಷ್ಕ್ರಿಯ ದಳ ಮತ್ತು ಎಫ್ಎಸ್ಎಲ್ ತಂಡ ಪರಿಶೀಲನೆ ನಡೆಸಿದೆ. ಜನಾರ್ದನ ರೆಡ್ಡಿ ದೂರಿನ ಕೇಸ್ ತನಿಖಾಧಿಕಾರಿ ಅಯ್ಯನಗೌಡ ಮತ್ತು ಅಟ್ರಾಸಿಟಿ ಕೇಸ್ ತನಿಖಾಧಿಕಾರಿ ಬಸವರಾಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಜನಾರ್ದನ ಮನೆ ಸಿಸಿಕ್ಯಾಮರ ದೃಶ್ಯಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಶಾಸಕ ಜನಾರ್ದನ ರೆಡ್ಡಿ ತೋರಿಸಿದ್ದ ಬುಲೆಟ್ ಕೂಡ ಜಪ್ತಿ ಮಾಡಿದ್ದಾರೆ.
ಶಾಸಕ ಭರತ್ ರೆಡ್ಡಿ ಕಡೆಯವರು ಫೈ ರಿಂಗ್ ಮಾಡುತ್ತಿರುವ ದೃಶ್ಯಗಳನ್ನ ಬಿಜೆಪಿ ನಾಯಕರು ರಿಲೀಸ್ ಮಾಡಿದ್ದರು. ಇತ್ತ ಬಿಜೆಪಿ ಕಡೆಯವರು ಖಾರದಪುಡಿ ಎರಚಿರೋದು, ಬ್ಯಾನರ್ ಹರಿಯುತ್ತಿರುವ ದೃಶ್ಯಗಳನ್ನ ಕಾಂಗ್ರೆಸ್ ಪಡೆ ಬಿಡುಗಡೆ ಮಾಡಿತ್ತು. ನಿನ್ನೆ ಬಳ್ಳಾರಿಗೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಜನಾರ್ದನ ರೆಡ್ಡಿ ವಿರುದ್ಧ ಕಿಡಿ ಕಾರಿದ್ದರು. ಜನಾರ್ದನರೆಡ್ಡಿಯನ್ನು ಕೊಲ್ಲಲು ಬಂದಿದ್ದರೆ ಮಹಜರು ಮಾಡಿಸಬೇಕಿತ್ತು. ಜನಾರ್ದನರೆಡ್ಡಿ ಬುಲೆಟ್ ತೋರಿಸ್ತಿದ್ರು, ಅವರಿಗೆ ಹೊಡೆದಿತ್ತಾ ಅದು? ತಪ್ಪು ಮಾಹಿತಿ ನೀಡೋದು ಸರಿಯಲ್ಲ, ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲ್ಲ ಎಂದಿದ್ದರು.

ನೋಡಿರಿ

