ಚಿರಂಜೀವಿ-ಬಾಲಕೃಷ್ಣ ನಡುವೆ ಮತ್ತೆ ಮನಸ್ತಾಪ – ಮೆಗಾಸ್ಟಾರ್ ವಿರುದ್ಧ ಸಿಡಿದೆದ್ದ ಬಾಲಯ್ಯ

ಮೆಗಾಸ್ಟಾರ್ ಚಿರಂಜೀವಿ ಮತ್ತು ನಂದಮೂರಿ ಕುಟುಂಬದ ನಡುವೆ ವೈಮನಸ್ಯ ಇಂದು ನಿನ್ನೆಯದಲ್ಲ. ಆದರೆ ಇತ್ತೀಚೆಗೆ ಎರಡೂ ಕುಟುಂಬಗಳು ಒಂದಾಗಿದ್ದವು. ಇದೀಗ ಮತ್ತೆ ಈ ಕುಟುಂಬಗಳ ನಡುವೆ ಮನಸ್ತಾಪ ಮೂಡಿದೆ. ಬಾಲಯ್ಯ, ಚಿರಂಜೀವಿ ವಿರುದ್ಧ ಅಸೆಂಬ್ಲಿಯಲ್ಲೇ ಕಿಡಿಕಾರಿದ್ದಾರೆ.
ಇದನ್ನೂ ಓದಿ:ಅಪ್ಪ ಗೌತಮ್ ಜೊತೆ ಮಗ ಇದ್ದಿದ್ದೇ ತಪ್ಪಾಯ್ತಾ? – ಗಂಡನಿಂದ ಮತ್ತಷ್ಟು ದೂರ ಹೋಗ್ತಾಳಾ ಭೂಮಿಕಾ?
ಎನ್ಟಿಆರ್ ಕುಟುಂಬದ್ದೇ ಪಕ್ಷವಾದ ಟಿಡಿಪಿ ಜೊತೆಗೆ ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಕೈ ಜೋಡಿಸಿ, ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸಹ ಆದರು. ಆ ಬಳಿಕ ಚಿರಂಜೀವಿ ಹಾಗೂ ಬಾಲಯ್ಯ ಸಹ ಬಹಿರಂಗ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡು ಪರಸ್ಪರರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು. ಆದರೆ ಈ ಸ್ನೇಹ ಉಳಿದಿದ್ದು, ಕೆಲವೇ ಕೆಲವು ದಿನಗಳು ಮಾತ್ರ. ಈಗ ಮತ್ತೆ ಬಾಲಯ್ಯ, ಅಸೆಂಬ್ಲಿಯಲ್ಲೇ ಚಿರಂಜೀವಿ ವಿರುದ್ಧ ಸಿಟ್ಟಿನಿಂದ ಮಾತನಾಡಿದ್ದಾರೆ.
ಆಂಧ್ರ ಪ್ರದೇಶ ಅಸೆಂಬ್ಲಿಯಲ್ಲಿ ಹಾಲಿ ಸಚಿವ ಕಮಿನೇನಿ ಕೃಷ್ಣ ಶ್ರೀನಿವಾಸ್ ಮಾತನಾಡುತ್ತಾ, ಜಗನ್ ಎಂಥಹಾ ಕೆಟ್ಟ ವ್ಯಕ್ತಿ ಆಗಿದ್ದರು ಎಂಬುದನ್ನು ತಮ್ಮ ಮಾತಿನಲ್ಲಿ ವಿವರಿಸುತ್ತಾ, ಮೆಗಾಸ್ಟಾರ್, ನಟ ಚಿರಂಜೀವಿ ಅವರು ಜಗನ್ ಅವರನ್ನು ಭೇಟಿ ಆದ ಘಟನೆಯನ್ನು ವಿವರಿಸಿದರು. ಟಿಕೆಟ್ ದರಗಳನ್ನು ತಗ್ಗಿಸಿದ್ದಾಗ ಚಿರಂಜೀವಿ ಅವರು ಮುಂದಾಳತ್ವ ವಹಿಸಿ ಮೊದಲಿಗೆ ಜಗನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಬಗ್ಗೆ ವಿವರಣೆ ನೀಡಿದರು. ತೆಲುಗು ಚಿತ್ರರಂಗದ ಪ್ರಮುಖರ ಪಟ್ಟಿ ನೀಡಿದ್ದು ಚಿರಂಜೀವಿ. ಇದರಲ್ಲಿ ಬಾಲಕೃಷ್ಣ ಹೆಸರು ಇರಲೇ ಇಲ್ಲ ಎಂದರು. ಇದರಿಂದ ಬೇಸರಗೊಂಡ ಬಾಲಕೃಷ್ಣ, ‘ಕೃಷ್ಣ ಶ್ರೀನಿವಾಸ್ ಮಾತನಾಡಿದ ಕೂಡಲೇ ಎದ್ದು ನಿಂತು, ‘ಆ ಪಟ್ಟಿಯಲ್ಲಿ ನನ್ನ ಹೆಸರು ಇತ್ತು, ಆದರೆ ನನ್ನ ಹೆಸರನ್ನು 9ನೇ ಹೆಸರನ್ನಾಗಿ ಹಾಕಲಾಗಿತ್ತು. ಆಗಲೇ ನಾನು ಕೇಳಿದೆ, ಯಾವನು ಈ ಪಟ್ಟಿ ಮಾಡಿದವನು ಎಂದು?’ ಎಂದು ಸಿಟ್ಟಿನಿಂದಲೇ ಹೇಳಿದರು. ಬಳಿಕ ಮಾತು ಮುಂದುವರೆಸಿ, ಅಲ್ಲಿ ಯಾರೂ ಗಟ್ಟಿಯಾಗಿ ಏನೂ ಮಾತನಾಡಲಿಲ್ಲ. ಚಿರಂಜೀವಿ ಗಟ್ಟಿಯಾಗಿ ಮಾತನಾಡಿದ್ದಕ್ಕೆ ಜಗನ್ ಬಂದರು ಎಂಬುದು ಸುಳ್ಳು, ನಾನ್ಸೆನ್ಸ್, ಅಲ್ಲಿ ಯಾರೂ ಗಟ್ಟಿಯಾಗಿ ಮಾತನಾಡಲೇ ಇಲ್ಲ. ಎಂದು ಪರೋಕ್ಷವಾಗಿ ಚಿರಂಜೀವಿ ವಿರುದ್ಧವೇ ಬಾಲಯ್ಯ ಸಿಟ್ಟು ವ್ಯಕ್ತಪಡಿಸಿದರು. ತಮ್ಮ ಭಾಷಣದ ಕೊನೆಯಲ್ಲಿ ಸಿಟ್ಟಿನಿಂದ ನಾನ್ಸೆನ್ಸ್ ಎಂಬ ಪದವನ್ನು ಬಾಲಯ್ಯ ಬಳಸಿದ್ದಾರೆ. ಬಾಲಯ್ಯ ಅವರ ಈ ಮಾತುಗಳು, ಚಿರಂಜೀವಿ ಹಾಗೂ ಬಾಲಕೃಷ್ಣ ನಡುವಿನ ವೈಮನಸ್ಯವನ್ನು ಮತ್ತಷ್ಟು ಹೆಚ್ಚು ಮಾಡಿದೆ.

ನೋಡಿರಿ

