ಪಾಕಿಸ್ತಾನದಲ್ಲಿ ತಾರಕಕ್ಕೇರಿದ ಬೆಂಬಲಿಗರ ಹಿಂಸಾಚಾರ – ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದಲ್ಲಿ ತಾರಕಕ್ಕೇರಿದ ಬೆಂಬಲಿಗರ ಹಿಂಸಾಚಾರ – ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಭೂಕಬಳಿಕೆ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ, ಮಾಜಿ ಪ್ರಧಾನಿ ಇಮ್ರಾನ್​​ ಖಾನ್​ಗೆ ಇಸ್ಲಮಾಬಾದ್​ ಹೈಕೋರ್ಟ್​ ಎರಡು ವಾರಗಳ ಕಾಲ ಜಾಮೀನು ನೀಡಿದೆ. ಜೊತೆಗೆ ಮೇ 17ರವರೆಗೆ ಇಮ್ರಾನ್​​ರನ್ನ ಬಂಧಿಸುವಂತಿಲ್ಲ ಅಂತಾನೂ ಕೋರ್ಟ್ ಆದೇಶಿಸಿದೆ. ಕೊಂಚ ನಿಟ್ಟುಸಿರು ಬಿಡುವಷ್ಟರಲ್ಲೇ ಇನ್ನೂ 10 ಪ್ರಕರಣಗಳಲ್ಲಿ ಇಮ್ರಾನ್​​ಗೆ ಅರೆಸ್ಟ್​ ವಾರಂಟ್ ಹೊರಡಿಸಲಾಗಿದ್ದು, ಮೇ 17ರ ಬಳಿಕ ಮತ್ತೆ ಇಮ್ರಾನ್​​​ ಅರೆಸ್ಟ್​ ಆದ್ರೂ ಅಚ್ಚರಿ ಇಲ್ಲ. ಇನ್ನು ಇಮ್ರಾನ್ ಖಾನ್ ವಿರುದ್ಧ ಇದುವರೆಗೆ 200ಕ್ಕೂ ಅಧಿಕ ಕೇಸ್​ಗಳು ದಾಖಲಾಗಿದ್ದು, ಮೇಲಿಂದ ಮೇಲೆ ಅರೆಸ್ಟ್ ವಾರಂಟ್​ಗಳು ಬರುತ್ತಲೇ ಇವೆ.

ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್ – ಪಾಕಿಸ್ತಾನದಲ್ಲಿ ಭುಗಿಲೆದ್ದ ಭಯಾನಕ ಹಿಂಸಾಚಾರ 

ಇಮ್ರಾನ್ ಖಾನ್‌​​ರನ್ನು ಕಾನೂನಿನ ಸುಳಿಯಲ್ಲಿ ಸಿಲುಕಿಸೋಕೆ, ಮತ್ತೆ ರಾಜಕೀಯ ರಣಾಂಗಣಕ್ಕೆ ಇಳಿಯದಂತೆ ಏನೆಲ್ಲಾ ಮಾಡಬೇಕು ಆ ಎಲ್ಲಾ ಪ್ರಯತ್ನಗಳು ಕೂಡ ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಈ ನಡುವೆ ಇಮ್ರಾನ್ ಖಾನ್ ಕೆಲ ಗಂಭೀರ ಆರೋಪಗಳನ್ನ ಕೂಡ ಮಾಡಿದ್ದಾರೆ. ಜೈಲಿನಲ್ಲಿ ನನ್ನನ್ನ ಹತ್ಯೆಗೈಯ್ಯೋಕೆ ಸಂಚು ಮಾಡಲಾಗಿತ್ತು. ನನ್ನ ಮೇಲೆ ದೈಹಿಕ ಹಲ್ಲೆ ನಡೆಸಲಾಗಿದೆ. ಜೈಲಿನ ಊಟದಲ್ಲಿ ಹಾರ್ಟ್​ ಅಟ್ಯಾಕ್ ಆಗಲು ಬೇಕಾದ ಇನ್ಸುಲಿನ್ ಮಿಶ್ರಣ ಮಾಡಲಾಗಿತ್ತು. ನನಗೆ ಶೌಚಾಲಯದ ವ್ಯವಸ್ಥೆ ಕೂಡ ಇರಲಿಲ್ಲ ಅಂತಾ ಇಮ್ರಾನ್ ಖಾನ್ ಆರೋಪಿಸಿದ್ದಾರೆ.

ಮತ್ತೊಂದೆಡೆ ಇಮ್ರಾನ್​ ಬೆಂಬಲಿಗರ ಹಿಂಸಾಚಾರ ಕೂಡ ತಾರಕಕ್ಕೇರಿದೆ. ಪಾಕ್ ಸೇನೆಯ ಸೀನಿಯರ್ ಲೆಫ್ಟಿನೆಂಟ್ ಜನರಲ್ ಮನೆಗೆ ನುಗ್ಗಿ, ಸೇನಾ ಜನರಲ್ ಸೇರಿದಂತೆ ಮನೆ ಮಂದಿಯನ್ನೆಲ್ಲಾ ಹೊರಕ್ಕೆ ಅಟ್ಟಿ, ಅಡುಗೆ ಕೋಣೆಯೊಳಗಿದ್ದ ಮಟನ್ ಕೂರ್ಮಾ ಸೇರಿದಂತೆ ಆಹಾರ ಪದಾರ್ಥಗಳನ್ನೆಲ್ಲಾ ಇಮ್ರಾನ್ ಬೆಂಬಲಿಗರು ತಿಂದು ತೇಗಿದ್ದಾರೆ. ತನ್ನನ್ನ ಮತ್ತೆ ಬಂಧಿಸಿದ್ರೆ ಇನ್ನಷ್ಟು ಹಿಂಸಾಚಾರವಾಗಲಿದೆ ಅಂತಾ ಇಮ್ರಾನ್​ ಖಾನ್ ಕೂಡ ಬೆಂಬಲಿಗರನ್ನ ಪ್ರಚೋದಿಸಿದ್ದಾರೆ. ಪಾಕಿಸ್ತಾನದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ತುರ್ತುಪರಿಸ್ಥಿತಿ ಹೇರುವಂತೆ ಪ್ರಧಾನಿ ಶೆಹಬಾಜ್​ ಷರೀಫ್​​ಗೆ ಪಕ್ಷದ ಮಂದಿ ಸಲಹೆ ನೀಡಿದ್ದಾರೆ ಅನ್ನೋ ಮಾಹಿತಿ ಇದೆ, ಹೀಗಾಗಿ ಯಾವುದೇ ಕ್ಷಣದಲ್ಲಿ ಬೇಕಾದ್ರೂ ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಗಬಹುದು.

suddiyaana