ಹೆದ್ದಾರಿಗೆ ಜಾನುವಾರುಗಳು ಬರದಂತೆ ತಡೆಯಲು ಪ್ಲಾನ್ – ರಸ್ತೆಬದಿಗಳಲ್ಲಿ ನಿರ್ಮಾಣವಾಗಲಿದೆ ‘ಬಾಹುಬಲಿ ಬೇಲಿ’..!

ಹೆದ್ದಾರಿಗೆ ಜಾನುವಾರುಗಳು ಬರದಂತೆ ತಡೆಯಲು ಪ್ಲಾನ್ – ರಸ್ತೆಬದಿಗಳಲ್ಲಿ ನಿರ್ಮಾಣವಾಗಲಿದೆ ‘ಬಾಹುಬಲಿ ಬೇಲಿ’..!

ಹೆದ್ದಾರಿಗಳಲ್ಲಿ ವಾಹನಗಳು ಸ್ಪೀಡ್ ಆಗಿ ಹೋಗುತ್ತಿರುವಾಗ ಸಡನ್ ಆಗಿ ಜಾನುವಾರುಗಳು ಅಡ್ಡ ಬರುತ್ತವೆ. ಜಾನುವಾರುಗಳ ಜೀವ ಉಳಿಸಲು ಹೋಗುವ ಭರದಲ್ಲಿ ಅಪಘಾತಗಳು ಆಗಿದ್ದೇ ಹೆಚ್ಚು. ಜಾನುವಾರುಗಳು ಕೂಡಾ ಸಾವನ್ನಪ್ಪಿರುವ ಪ್ರಕರಣಗಳು ಜಾಸ್ತಿ. ಹೀಗಾಗಿ ಅನೇಕ ಕಡೆ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಜಾನುವಾರುಗಳದ್ದೇ ಟೆನ್ಷನ್. ಹೀಗಾಗಿ ಜಾನುವಾರುಗಳು ಹೆದ್ದಾರಿಗೆ ಬಾರದಂತೆ

ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಜಾನುವಾರುಗಳು ಹೆದ್ದಾರಿಗೆ ಎಂಟ್ರಿ ಕೊಡದಂತೆ ‘ಬಾಹುಬಲಿ ಬೇಲಿ’ ನಿಮಿರ್ಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್‌ – ಒಂದು ಕೋಟಿಗೂ ಅಧಿಕ ಗ್ರಾಹಕರಿಂದ ನೋಂದಣಿ!

ಹೆದ್ದಾರಿಗಳಲ್ಲಿ ಬಾಹುಬಲಿ ದನಗಳ ಬೇಲಿ ಅಳವಡಿಸುವ ಯೋಜನೆ ರೂಪಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದರಿಂದ ಹೆದ್ದಾರಿಗಳಲ್ಲಿ ಜಾನುವಾರುಗಳು ರಸ್ತೆ ದಾಟುವುದು ತಪ್ಪಲಿದೆ. ಈ ಕುರಿತು ನಿತಿನ್ ಗಡ್ಕರಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

ಈ ಬೇಲಿ 1.20 ಮೀಟರ್ ಎತ್ತರವಿರಲಿದೆ. ಇದನ್ನು NH-30 ನ ವಿಭಾಗ 23 ರಲ್ಲಿ ಸ್ಥಾಪಿಸಲಾಗುವುದು. ಇದನ್ನು ತಯಾರಿಸಲು ಬಿದಿರನ್ನು ಬಳಕೆ ಮಾಡಲಾಗುತ್ತದೆ. ಈ ಬೇಲಿಗಳು ಕಡಿಮೆ ವೆಚ್ಚದಲ್ಲಿ ಹಾಗೂ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗುವುದು. ಈ ಬಿದಿರುಗಳನ್ನು ಕ್ರಿಯೋಸೋಟ್ ಎಣ್ಣೆಯಿಂದ ಸಂಸ್ಕರಿಸಲಾಗುತ್ತದೆ. ಬಾಹುಬಲಿಯಷ್ಟೇ ಗಟ್ಟಿಮುಟ್ಟಾಗಿರಲಿದೆ ಹಾಗಾಗಿ ಇದಕ್ಕೆ ಬಾಹುಬಲಿ ಬೇಲಿ ಎಂದು ಹೆಸರಿಡಲಾಗಿದೆ. ಭಾರತದ ಹೆದ್ದಾರಿಗಳುದ್ದಕ್ಕೂ ಜಾನುವಾರು ಬೇಲಿಗಳನ್ನು ನಿರ್ಮಿಸಲು ಮುಂದಾಗಿದ್ದೇವೆ ಎಂದು ಗಡ್ಕರಿ ತಿಳಿಸಿದ್ದಾರೆ.

suddiyaana