ಕೆಲಸ ಕೊಡಿಸುತ್ತೇನೆಂದು ಮಂಗಳೂರಿಗೆ ಕರೆತಂದ! – ಸ್ನೇಹಿತ ನಾಪತ್ತೆ.. ಉದ್ಯೋಗವಿಲ್ಲದೆ ಮರವೇರಿ ಕುಳಿತ ಯುವಕ!

ಕೆಲಸ ಸಿಗೋದಿಲ್ಲ ಅನ್ನೋ ಚಿಂತೆ ಈಗಿನ ಯುವಕರಿಗೆ ಕಾಡುತ್ತಿದೆ. ಎಲ್ಲಿಯಾದ್ರೂ ಕೆಲಸ ಇದ್ಯಾ ಎಂದು ತಮ್ಮ ಸ್ನೇಹಿತರ ಬಳಿ ಕೇಳುತ್ತಾರೆ. ಇನ್ನು ಕೆಲವರು ಕೆಲಸ ಕೊಡಿಸುತ್ತೇನೆ ಎಂದು ಸಿಟಿಗೆ ಕರೆಸಿಕೊಂಡಿದ್ದೂ ಇದೆ. ಇದೀಗ ಇಲ್ಲೊಬ್ಬ ಯುವಕ ಕೆಲಸಕ್ಕೆಂದು ಸ್ನೇಹಿತ ಜೊತೆ ಮಂಗಳೂರಿಗೆ ಬಂದಿದ್ದಾನೆ. ಆದ್ರೆ ಆತನಿಗೆ ಕೆಲಸ ಸಿಗುವ ಮುನ್ನವೇ ಸ್ನೇಹಿತ ನಾಪತ್ತೆಯಾಗಿದ್ದಾನೆ. ಇತ್ತ ಸ್ನೇಹಿತನೂ ನಾಪತ್ತೆಯಾಗಿದ್ದಾನೆ. ಕೆಲಸನೂ ಇಲ್ಲದೆ ಯುವಕ ಕಂಗಾಲಾಗಿದ್ದಾನೆ.
ಇದನ್ನೂ ಓದಿ: ಮಲ್ಲಮ್ಮಗೆ ಖುಲಾಯಿಸಿತು ಅದೃಷ್ಠ! – ಸ್ಯಾಂಡಲ್‌ವುಡ್ ಸಿನಿಮಾದಲ್ಲಿ ಸಿಕ್ಕಿತು ಚಾನ್ಸ್!
ಏನಿದು ಘಟನೆ?
ಈ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಾಗಲಕೋಟೆಯ 24 ವರ್ಷದ ಭೀಮಾ ಎಂಬಾತ ಕೆಲಸವಿಲ್ಲದೆ ಮನೆಯಲ್ಲೇ ಇದ್ದ. ಹೀಗಾಗಿ ಆತನ ಸ್ನೇಹಿತ ಕೆಲಸ ಕೊಡಿಸುವುದಾಗಿ ಹೇಳಿ ಭೀಮಾನನ್ನು ಮಂಗಳೂರಿಗೆ ಕರೆದುಕೊಂಡು ಬಂದಿದ್ದಾನೆ. ಆತ ಮಂಗಳೂರಿಗೆ ಬಂದ ಕೆಲವೇ ದಿನದಲ್ಲಿ ಸ್ನೇಹಿತ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಇದರಿಂದ ಇತ್ತ ಕೆಲಸನೂ ಇಲ್ಲ, ಅತ್ತ ಕರೆತಂದ ಸ್ನೇಹಿತನೂ ಇಲ್ಲದೆ ಕಂಗಲಾಗಿದ್ದಾನೆ. ಬಳಿಕ ರಸ್ತೆ ಪಕ್ಕದಲ್ಲಿದ್ದ ಮರವೇರಿ ಕೂತಿದ್ದಾನೆ.
ಸ್ನೇಹಿತ ನಾಪತ್ತೆಯಾಗುತ್ತಿದ್ದಂತೆ ಕಂಗಾಲಾದ ಯುವಕ ಮಂಗಳೂರಿನ ಕರಂಗಲ್ಪಾಡಿಯಲ್ಲಿರುವ ಬೃಹತ್ ಅಶ್ವಥ ಮರವನ್ನು ಏರಿ ಈತ ಕುಳಿತಿದ್ದಾನೆ. ಸುಮಾರು ಒಂದೂವರೆ ಗಂಟೆಯಿಂದ ಈತ ಮರದಲ್ಲೇ ಇರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕದ್ರಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ನೋಡಿರಿ

