ಭಕ್ತರಿಗೆ ತೆರೆದ ಬದರೀನಾಥ ದೇಗುಲ – 15 ಕ್ವಿಂಟಾಲ್ ಹೂಗಳಿಂದ ದೇವಸ್ಥಾನದ ಸಿಂಗಾರ

ಭಕ್ತರಿಗೆ ತೆರೆದ ಬದರೀನಾಥ ದೇಗುಲ – 15 ಕ್ವಿಂಟಾಲ್ ಹೂಗಳಿಂದ ದೇವಸ್ಥಾನದ ಸಿಂಗಾರ

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಇರುವ ಬದರೀನಾಥ ದೇಗುಲ ಗುರುವಾರ ಬೆಳಗ್ಗೆ 7.10 ಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ  ಭಕ್ತರಿಗೆ ತೆರೆಯಲಾಯಿತು.

ಇದನ್ನೂ ಓದಿ: ಭಾರತದ ಕೊನೆಯ ಹಳ್ಳಿಯಾಗಿದ್ದ ‘ಮಾಣಾ’ ಈಗ ಭಾರತದ ಪ್ರಥಮ ಗ್ರಾಮ!

ಚಳಿಗಾಲದ ಹಿನ್ನೆಲೆ ಮುಚ್ಚಲಾಗಿದ್ದ ಬದರೀನಾಥ ದೇಗುಲವನ್ನು ಇಂದು ಮುಂಜಾನೆ ಮಂತ್ರಘೋಷಗಳ ಉದ್ಧಾರದೊಂದಿಗೆ ಬಾಗಿಲು ತೆರೆಯಲಾಯ್ತು. ದೇಗುಲದ ಬಾಗಿಲು ತೆರೆಯುವ ಹಿನ್ನಲೆಯಲ್ಲಿ ಇಡೀ ದೇವಸ್ಥಾನವನ್ನು 15 ಕ್ವಿಂಟಲ್ ಹೂಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನದ ಬಾಗಿಲು ತೆರೆಯುವ ವೇಳೆ ಭಕ್ತರ ಉದ್ವೇಷ ಮುಗಿಲು ಮುಟ್ಟಿತ್ತು. ಕೀರ್ತನೆಗಳನ್ನು ಹಾಡಿ, ನೃತ್ಯ ಮಾಡಿ ಸಂಭ್ರಮಿಸಿದರು. ಬಳಿಕ ದೇಗುಲದಲ್ಲಿ ವಿವಿಧ ಪೂಜೆಗಳು ಜರುಗಿದವು.

ಉತ್ತರಾಖಂಡದ ನಾಲ್ಕು ಧಾಮಗಳಲ್ಲಿ ಒಂದಾಗಿರುವ ಬದರೀನಾಥ ಧಾಮವು, ವಿಷ್ಣುವಿನ ದೇಗುಲವಾಗಿದೆ. ಈ ದೇವಾಲಯವು ಉತ್ತರಾಖಂಡದ ಚಮೋಲಿ ಜಿಲ್ಲೆಯ ಅಲಕನಂದಾ ನದಿಯ ದಡದಲ್ಲಿದೆ. ಪ್ರಕೃತಿ ಮಡಿಲಲ್ಲಿರುವ ಈ ದೇಗುಲದಲ್ಲಿ ಇಲ್ಲಿ ವಿಷ್ಣುವಿನ ವಿಗ್ರಹವು ವಿಶ್ರಮುದ್ರದಲ್ಲಿದೆ. ಚಳಿಯಿಂದ ಬಂದ್‌ ಮಾಡಲಾಗಿದ್ದ ದೇಗುಲದ ಬಗಿಲು ಇಂದು ತೆರೆಯಲಾಗಿದೆ.

suddiyaana