ನೆಕ್ಟ್‌ಫ್ಲಿಕ್ಸ್ ಬಳಕೆದಾರರಿಗೆ ಕಹಿ ಸುದ್ದಿ! – ಶೀಘ್ರದಲ್ಲೇ ಸಬ್ ಸ್ಕ್ರಿಪ್ಷನ್ ಶುಲ್ಕ ಹೆಚ್ಚಳ?
ಕೋಟ್ಯಾಂತರ ಮಂದಿ ವೀಡಿಯೋ ಸ್ಟ್ರೀಮಿಂಗ್ ಅಪ್ಲಿಕೇಷನ್ ನೆಕ್ಟ್‌ಫ್ಲಿಕ್ಸ್ ಬಳಸುತ್ತಿದ್ದಾರೆ. ಇದೀಗ ನೆಟ್‌ಫ್ಲಿಕ್ಸ್ ತನ್ನ ಚಂದಾದಾರರಿಗೆ ಶೀಘ್ರದಲ್ಲೇ ಭಾರೀ ಶಾಕ್ ನೀಡಲಿದೆ. ಇದೇ ವರ್ಷ ಅಂತ್ಯಕ್ಕೆ ಅಥವಾ ಮುಂದಿನ ವರ್ಷಾರಂಭದಲ್ಲಿ ಸಬ್ ಸ್ಕ್ರಿಪ್ಷನ್ ಶುಲ್ಕ ಹೆಚ್ಚಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇತ್ತೀಚೆಗೆ, ಕಂಪನಿಯು ಪಾಸ್‌ವರ್ಡ್ ಹಂಚಿಕೆ ನಿಷೇಧಿಸುವುದಾಗಿ ಮತ್ತು ಜಾಹೀರಾತು-ಬೆಂಬಲಿತ ಯೋಜನೆಗಳನ್ನು ಪರಿಚಯಿಸುವುದಾಗಿ ಘೋಷಿಸಿತ್ತು. ಇದೀಗ ಸಬ್ ಸ್ಕ್ರಿಪ್ಷನ್ ದರಗಳನ್ನು ಕಂಪನಿ ಏರಿಕೆ ಮಾಡುವ ಸಾಧ್ಯತೆ ಇದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಹೆಚ್ಚಳವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ ಎಂದು ಮೂಲಗಳು ಹೇಳುತ್ತಿವೆ.
ಇದನ್ನೂ ಓದಿ: ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯ – ಯೂಟ್ಯೂಬ್ ಸೇರಿ ಸೋಶಿಯಲ್ ಮೀಡಿಯಾಗಳಿಗೆ ಕೇಂದ್ರ ಖಡಕ್ ಸೂಚನೆ!
ಸಬ್ ಸ್ಕ್ರಿಪ್ಷನ್ ದರಗಳನ್ನು ಮೊದಲು ಅಮೆರಿಕಾ, ಕೆನಡಾ ಸೇರಿ ಪ್ರಮುಖ ಮಾರುಕಟ್ಟೆ ಹೊಂದಿರುವ ದೇಶಗಳಲ್ಲಿ ಹೆಚ್ಚಿಸಲಿದ್ದು, ಬಳಿಕ ವಿಶ್ವಾದ್ಯಂತ ಹೆಚ್ಚಿಸಲಿದೆ ಎನ್ನಲಾಗುತ್ತಿದೆ. ಆದರೆ ಭಾರತದಲ್ಲಿ ಚಂದಾದಾರಿಕೆ ಶುಲ್ಕ ಹೆಚ್ಚಾಗಲಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಕಳೆದ ವರ್ಷವಷ್ಟೇ ಬಳಕೆದಾರರ ಶುಲ್ಕ ಹೆಚ್ಚಿಸಿದ್ದ ನೆಟ್‌ಫ್ಲಿಕ್ಸ್ ಮತ್ತೆ ದರ ಹೆಚ್ಚಿಸಲು ಮುಂದಾಗಿರುವುದಕ್ಕೆ ಬಳಕೆದಾರರು ಅಸಮಾದಾನ ವ್ಯಕ್ತಡಿಸುತ್ತಿದ್ದಾರೆ. ಒಂದು ವೇಳೆ ಹೀಗಾದರೆ ಬಳಕೆಯಿಂದ ದೂರುಳಿಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.