ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್‌ಗೆ ಕಳಪೆ ಪಟ್ಟ – ಎದುರಾಳಿ ಆಯ್ಕೆ ಸರಿನಾ..? ವೀಕ್ಷಕರ ಪ್ರಶ್ನೆ
ಬಿಗ್‌ಬಾಸ್ ಮನೆಯಲ್ಲಿ ವಾರದ ಕೊನೆಯಲ್ಲಿ ಕಳಪೆ ಮತ್ತು ಉತ್ತಮ ಅನ್ನೋ ಆಯ್ಕೆ ಇರುತ್ತದೆ. ಆದರೆ, ಸಂಗೀತಾ ಎದುರಾಳಿ ಟೀಮ್‌ಗೆ ಟಾರ್ಗೆಟ್ ಮಾಡಲು ಈ ಬಾರಿ ಪ್ರತಾಪ್ ಆಗಲಿ, ಸಂಗೀತಾ ಆಗಲಿ ಸಿಗಲಿಲ್ಲ. ಹೀಗಾಗಿ ಇವರ ಆಯ್ಕೆ ಕಾರ್ತಿಕ್. ಈ ಬಾರಿ ಕಾರ್ತಿಕ್ ಕಳಪೆ ಪಟ್ಟ ಹೊತ್ತುಕೊಂಡಿದ್ದಾರೆ. ಇದು ಸರಿಯಾದ ಆಯ್ಕೆಯೇ ಎಂಬ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: ವಿನಯ್ ಸೇಡಿಗೆ ಆಸ್ಪತ್ರೆ ಸೇರಿದ ಸಂಗೀತಾ, ಡ್ರೋನ್ ಪ್ರತಾಪ್ – ಸ್ಪರ್ಧಿಗಳ ಅತಿರೇಕದ ವರ್ತನೆಗೆ ಬಿಗ್‌ಬಾಸ್ ಮೌನವೇಕೆ?
ಬಿಗ್‌ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್‌ಗಳಲ್ಲಿ ಮನೆಯ ಹಲವು ಮಂದಿ ಕೆಟ್ಟದಾಗಿಯೇ ಆಡಿದ್ದರು. ಒಬ್ಬರು ರಾಕ್ಷಸತನ ತೋರಿದರೆ ಅದಕ್ಕೆ ಬದಲಾಗಿ ದುಪ್ಪಟ್ಟು ರಾಕ್ಷಸತನ ಇನ್ನೊಂದು ಟೀಮ್ ಪ್ರದರ್ಶಿಸಿತ್ತು. ಆದರೆ, ಈ ವಾರ ಕಳಪೆ ಪಟ್ಟ ಮಾತ್ರ ಕಾರ್ತಿಕ್ ಪಾಲಾಗಿದೆ. ಮನೆಯ ಸದಸ್ಯರ ಬಹುಮತದಂತೆ ಕಾರ್ತಿಕ್ ಈ ವಾರದ ಕಳಪೆ ಸ್ಪರ್ಧಿಯಾದರು.
ವಿನಯ್ ಜೊತೆ ಜಗಳ, ಅವಾಚ್ಯ ಶಬ್ದದ ಬಳಕೆ ಇನ್ನಿತರೆ ಕಾರಣಗಳನ್ನು ಸ್ಪರ್ಧಿಗಳು ನೀಡಿದರು. ಸಂಗೀತಾ ಗಾಯಗೊಂಡು ಹೊರಗೆ ಹೋಗಿದ್ದ ಕಾರಣ ಎಲ್ಲರ ಗುರಿ ಕಾರ್ತಿಕ್ ಆದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್ ಹಾಗೂ ಪವಿ ಇಬ್ಬರೂ ಸಮಾನ ಮತಗಳನ್ನು ಪಡೆದ ಕಾರಣ ಇಬ್ಬರಿಗೂ ಉತ್ತಮ ನೀಡಲಾಯ್ತು. ಅವಿನಾಶ್, ಟಾಸ್ಕ್ ಆಡುವ ಸಂದರ್ಭದಲ್ಲಿ ಯಾವುದೇ ದೂರು ಹೇಳದೆ, ಟಾಸ್ಕ್ನ ನಿಯಮಗಳಿಗೆ ಬದ್ಧವಾಗಿದ್ದ ಕಾರಣ ಅವರು ಉತ್ತಮ ಎನ್ನಿಸಿಕೊಂಡರು.