ಮುಂದಿನ ವರ್ಷ ಜಾಗತಿಕ ಆರ್ಥವ್ಯವಸ್ಥೆ ಭಾರಿ ಪ್ರಮಾಣದಲ್ಲಿ ಕುಸಿಯಲಿದೆಯಾ? – ಆರ್ಥಿಕ ತಜ್ಞರು ನುಡಿದ ಭವಿಷ್ಯವೇನು?

ಮುಂದಿನ ವರ್ಷ ಜಾಗತಿಕ ಆರ್ಥವ್ಯವಸ್ಥೆ ಭಾರಿ ಪ್ರಮಾಣದಲ್ಲಿ ಕುಸಿಯಲಿದೆಯಾ? – ಆರ್ಥಿಕ ತಜ್ಞರು ನುಡಿದ ಭವಿಷ್ಯವೇನು?

ಮುಂದಿನ ವರ್ಷ ಜಾಗತಿಕ ಆರ್ಥವ್ಯವಸ್ಥೆ ಭಾರಿ ಪ್ರಮಾಣದಲ್ಲಿ ಕುಸಿಯಲಿದೆ ಅಂತಾ ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ. ಹಣದುಬ್ಬರ ಏರಿಕೆಯಾಗುತ್ತಿದ್ದು, 2023ರಲ್ಲಿ ಅರ್ಥವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರಲಿದೆ. ಈ ವರ್ಷ ಅಂದ್ರೆ 2022ರಲ್ಲಿ ಜಾಗತಿಕ ಆರ್ಥಿಕತೆ 100 ಟ್ರಿಲಿಯನ್​ ಡಾಲರ್​​ನ್ನ ದಾಟಿತ್ತು. ಆದ್ರೆ, 2023ರಲ್ಲಿ ಇದು ಇಷ್ಟಕ್ಕೇ ಸ್ಥಗಿತಗೊಳ್ಳಲಿದೆ. ಬಡ್ಡಿದರ ಏರಿಕೆಯಾಗುತ್ತಲೇ ಇದ್ದು, ಇದ್ರಿಂದಾಗಿ ಹಣದುಬ್ಬರ ಹೆಚ್ಚಾಗುತ್ತಿದೆ. ಹಣದುಬ್ಬರ ಕಡಿಮೆ ಮಾಡೋಕೆ ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿ ಕ್ರಮಗಳನ್ನ ಕೈಗೊಳ್ಳುತ್ತಿಲ್ಲ. ಹೀಗಾಗಿ ಮುಂದಿನ ವರ್ಷ ಜಾಗತಿಕ ಮಟ್ಟದ ಜಿಡಿಪಿ ಶೇಕಡಾ ಎರಡಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಬೆಳೆಯಬಹುದು ಅಂತಾ ಆರ್ಥಿಕ ತಜ್ಞರು ಹೇಳಿದ್ದಾರೆ. ಚೀನಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಿನ ಆರ್ಥಿಕ ಸಮರ, ರಷ್ಯಾ-ಉಕ್ರೇನ್ ಯುದ್ಧ ಇವೆಲ್ಲದ್ರ ಎಫೆಕ್ಟ್​ ಮುಂದಿನ ಆರ್ಥಿಕ ವರ್ಷದ ಮೇಲೆ ಆಗಲಿದೆ ಅಂತಾ ತಜ್ಞರು ಎಚ್ಚರಿಸಿದ್ದಾರೆ.

suddiyaana