ಮತ್ತೆ 9,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಅಮೆಜಾನ್

ಮತ್ತೆ 9,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಅಮೆಜಾನ್

ನವದೆಹಲಿ: ಗೂಗಲ್, ಮೈಕ್ರೋಸಾಫ್ಟ್, ಟ್ವಿಟರ್, ಮೆಟಾದಂತಹ ದೈತ್ಯ  ಕಂಪನಿಗಳು ತಮ್ಮ ಸಂಸ್ಥೆಯ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ರಾತ್ರೋ ರಾತ್ರಿ ಉದ್ಯೋಗಿಗಳನ್ನು ವಜಾಗೊಳಿಸಿ ಮನೆಗೆ ಕಳುಹಿಸುತ್ತಿದೆ. ಜನವರಿಯಲ್ಲಿ ಅಮೆಜಾನ್ ಕೂಡ ಸುಮಾರು 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈಗ ಇದು ಸಾಕಾಗದು ಅನ್ನುವಂತೆ ಇದೀಗ  9,000 ಮಂದಿಯನ್ನು ಕೆಲಸದಿಂದ ತೆಗೆಯಲು ಅಮೆಜಾನ್ ಮುಂದಾಗಿದೆ.

ಇದನ್ನೂ ಓದಿ:  ಕುಂದಾನಗರಿಯಲ್ಲಿ ಕಾಂಗ್ರೆಸ್ ಯುವಕ್ರಾಂತಿ ರಣಕಹಳೆ – ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ಭತ್ಯೆ..!

ಅಮೆಜಾನ್ ಈ ಹಿಂದೆ ಉದ್ಯೋಗ ಕಡಿತ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ಯಾವೆಲ್ಲ ವಿಭಾಗಗಳಿಂದ ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿತ್ತು. ಅದರಂತೆಯೇ ಈ ಎರಡನೇ ಹಂತದಲ್ಲಿಯೂ ವಿವರಣೆಯನ್ನು ನೀಡಿದ್ದು, ಈ ಬಾರಿ ಎಡಬ್ಲ್ಯೂಎಸ್, ಸಾಮಾನ್ಯ ಉದ್ಯೋಗಿಗಳು, ಅನುಭವ ಹೊಂದಿರುವವರು, ಟೆಕ್ನಾಲಜಿ (ಪಿಎಕ್ಸ್‌ಟಿ), ಜಾಹೀರಾತು, ಟ್ವಿಚ್‌ ಮೊದಲಾದ ವಿಭಾಗಗಳಿಂದ ಉದ್ಯೋಗ ಕಡಿತವನ್ನು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದೆ.

ಉದ್ಯೋಗ ಕಡಿತದ ಜೊತೆಗೆ ಅಮೆಜಾನ್ ಸಂಸ್ಥೆ ತನ್ನ ಇತರ ಕೆಲ ಖರ್ಚು ವೆಚ್ಚಗಳನ್ನು ತಗ್ಗಿಸಲು ಆಲೋಚಿಸಿದೆ. ಅಮೆರಿಕದ ನಾರ್ಥ್ ವರ್ಜೀನಿಯಾದಲ್ಲಿ ಅದರ ಮುಖ್ಯಕಚೇರಿ ನಿರ್ಮಾಣದ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂದು ವರದಿಯಾಗಿದೆ.

suddiyaana