ಐಶ್‌ ಸರ್ ನೇಮ್ ಮಿಸ್ಸಿಂಗ್.. ಸಿಟ್ಟಾದ ಅಮಿತಾಭ್ ಬಚ್ಚನ್  – ಒಂದು ಟ್ವೀಟ್‌.. ಡಿವೋರ್ಸ್ ಕನ್ಫರ್ಮ್?

ಐಶ್‌ ಸರ್ ನೇಮ್ ಮಿಸ್ಸಿಂಗ್.. ಸಿಟ್ಟಾದ ಅಮಿತಾಭ್ ಬಚ್ಚನ್  – ಒಂದು ಟ್ವೀಟ್‌.. ಡಿವೋರ್ಸ್ ಕನ್ಫರ್ಮ್?

ಬಾಲಿವುಡ್‌ ನ ಸದ್ಯದ ಹಾಟ್‌ ಟಾಪಿಕ್‌ ಏನಂದ್ರೆ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಡಿವೋರ್ಸ್‌.. ಈ ಜೋಡಿ ಈಗ ಕೂತ್ರು ನಿಂತ್ರು ಸುದ್ದಿಯಲ್ಲಿದ್ದಾರೆ.. ಇವರಿಬ್ಬರ ಮಧ್ಯೆ ಬಿರುಕು ಬಿದ್ದಿದೆ.. ದಾಂಪತ್ಯ ಜೀವನ ಎಂಡ್‌ ಮಾಡ್ತಿದ್ದಾರೆ ಅಂತಾ ಸುದ್ದಿ ಹರಿದಾಡ್ತಿದೆ.. ಇವೆಲ್ಲದ್ರ ಮಧ್ಯೆ ಐಶ್ವರ್ಯ ರೈ ಮುಂದಿದ್ದ ಬಚ್ಚನ್‌ ಸರ್ ನೇಮ್ ಮಂಗಮಾಯ ಆಗಿದೆ.. ಈ ಬೆನ್ನಲ್ಲೇ ಬಿಗ್‌ ಬಿಗ್‌ ಟ್ವೀಟ್‌ ಪೋಸ್ಟ್‌ ಕೂಡ ಹಲ್‌ಚಲ್‌ ಸೃಷ್ಠಿಸಿದೆ.. ಅಷ್ಟಕ್ಕೂ ಆಗಿದ್ದೇನು? ಅಮಿತಾಭ್ ಬಚ್ಚನ್‌ ಯಾಕೆ ಸಿಟ್ರಾದ್ರು.. ಬಿಗ್‌ ಬಿ ಕುಟುಂಬದಲ್ಲಿ ನಡಿತಿರೊದಾದ್ರೂ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: HITಮ್ಯಾನ್ ಬ್ಯಾಟ್ ಸೈಲೆಂಟ್.. 11 ಇನ್ನಿಂಗ್ಸ್.. ಗಳಿಸಿದ್ದು 134 ರನ್! – ರೋಹಿತ್ ಕ್ಯಾಪ್ಟನ್ಸಿ ಬುಮ್ರಾ ಪಾಲು?

ಕಳೆದ ಕೆಲವು ತಿಂಗಳಿನಿಂದ ಐಶ್‌ ಹಾಗೂ ಅಭಿಷೇಕ್‌ ಬಚ್ಚನ್‌ ಡಿವೋರ್ಸ್‌ ವಿಚಾರ ಭಾರಿ ಸದ್ದು ಮಾಡ್ತಾ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹಲವು ಘಟನೆಗಳು ನಡೆದರೂ ಸಹ ಅಭಿಷೇಕ್ ಬಚ್ಚನ್ ಆಗಲೀ, ಐಶ್ವರ್ಯ ರೈ ಆಗಲೀ ಅಥವಾ ಅವರ ಕುಟುಂಬದ ಮೂಲಗಳು ಈ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಹೀಗಾಗಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಛೇದನ ವಿಚಾರ ಎಲ್ಲಿಯೂ ಅಧಿಕೃತವಾಗಿಲ್ಲ. ಆದರೆ ಇಬ್ಬರೂ ದೂರಾಗಿದ್ದಾರೆ ಎನ್ನುವ ಸುದ್ದಿ ಮಾತ್ರ ಪ್ರಚಾರದಲ್ಲೇ ಇದೆ. ಇದಕ್ಕೆ ಮಹತ್ವದ ಸಾಕ್ಷಿ ಎನ್ನುವಂತೆ ಮತ್ತೊಂದು ಸುಳಿವು ಈಗ ಹೊರ ಬಿದ್ದಿದೆ. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಛೇದನ ಕನ್ಫರ್ಮ್‌ ಅಂತಾ ಹೇಳಲಾಗ್ತಿದೆ.

ಐಶ್ವರ್ಯ ರೈ ಇದೀಗ ತಮ್ಮ ಹೆಸರಿನಿಂದ ಬಚ್ಚನ್ ಸರ್ನೇಮ್ ಅನ್ನು ತೆಗೆದು ಹಾಕಿದ್ದಾರೆ. ಐಶ್ವರ್ಯ ರೈ ಎಂದಿದ್ದ ಹೆಸರನ್ನು ಮದುವೆಯಾದ ಮೇಲೆ ಐಶ್ವರ್ಯ ರೈ ಬಚ್ಚನ್ ಎಂದು ಬದಲಿಸಿಕೊಂಡಿದ್ದರು. ಹಲವು ವರ್ಷಗಳಿಂದ ಅದೇ ಹೆಸರಿನಿಂದ ಗುರುತಿಸಿಕೊಂಡಿದ್ದ ಐಶ್ವರ್ಯ ಇದೀಗ ತಮ್ಮ ಸರ್ನೇಮ್ ಅನ್ನು ತೆಗೆದು ಹಾಕಿದ್ದಾರೆ. ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ವಿಚ್ಛೇಧನ ವಿಚಾರಕ್ಕೆ ಪುಷ್ಠಿ ಕೊಡುವಂತಿದೆ.

ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಶ್ವರ್ಯ ರೈ ಭಾಗಿಯಾಗಿದ್ರು.. ಈ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ತಾರೆಯಾಗಿ ಆಗಮಿಸಿದ್ದ ಐಶ್ವರ್ಯಾ ರೈ ಅವರ ಫೋಟೋ, ಸ್ಕ್ರೀನ್ ಮೇಲೆ ಹಾಕಲಾಗಿತ್ತು. ಐಶ್ ಫೋಟೋ ಕೆಳಗೆ ಅವರ ಹೆಸರನ್ನು ಹಾಕಲಾಗಿತ್ತು. ಆದ್ರೆ ಈ ಹೆಸರು ಎಲ್ಲರ ಗಮನ ಸೆಳೆದಿದೆ. ಐಶ್ವರ್ಯ ರೈ ಬಚ್ಚನ್ ಬದಲು ಕೇವಲ ಐಶ್ವರ್ಯ ರೈ ಎಂಬ ನಾಮಪಲಕವನ್ನು ಹಾಕಲಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಅಭಿಮಾನಗಳಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ  ಪರಸ್ಪರ ದೂರವಾಗಿದ್ದಾರೆ ಎನ್ನುವುದು ಬಹುತೇಖ ಖಚಿತವಾಗಿದೆ.

ಇನ್ನು ಐಶ್ವರ್ಯ ರೈ ಈ ಕಾರ್ಯಕ್ರಮದಲ್ಲಿ ಭಾಗಿಯಾದ ಬೆನ್ನಲ್ಲೇ ಅಮಿತಾಭ್‌ ಬಚ್ಚನ್‌ ಏಕ್ಸ್‌ ನಲ್ಲಿ ಪೋಸ್ಟ್‌ವೊಂದನ್ನ ಹಾಕಿದ್ದಾರೆ.. ಈ ಪೋಸ್ಟ್‌ ಎಲ್ಲೆಡೆ ಸಂಚಲನ ಮೂಡಿದೆ. ಹೌದು, ಕೆಲ ದಿನಗಳ ಹಿಂದೆ ಅಮಿತಾಬ್ ಬಚ್ಚನ್ ಬ್ಲಾಗ್ ಮೂಲಕ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಮಾತುಕತೆ ಬಗ್ಗೆ ಮೌನ ಮುರಿದು… ವದಂತಿಗಳು ಕೇವಲ ವದಂತಿಗಳೇ.. ಅವುಗಳಲ್ಲಿ ಯಾವುದೇ ಸತ್ಯವಿಲ್ಲ… ಎಂದು ಬಿಗ್ ಬಿ ಹೇಳಿದ್ದರು.. ಇದರ ಬಳಿಕ ಅಂದ್ರೆ ಡಿಸೆಂಬರ್ 2  ರಂದು ಅಮಿತಾಬ್ ಒಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ‘ಚುಪ್’ ಎಂದು ಒಂದೇ ಪದವನ್ನು ಬರೆದು.. ಮುಂದೆ ಕೋಪದ ಎಮೋಜಿಯನ್ನು ಸಹ ಪೋಸ್ಟ್ ಮಾಡಿದ್ದಾರೆ. ಐಶ್ವರ್ಯಾ ರೈ ತಮ್ಮ ಹೆಸರಿನಿಂದ ಬಚ್ಚನ್ ಉಪನಾಮವನ್ನು ತೆಗೆದುಹಾಕಿದ ನಂತರ ಬಿಗ್ ಬಿ ಈ ಟ್ವೀಟ್ ಮಾಡಿದ್ದಾರೆ. ಇದೀಗ ಬಿಗ್‌ಬಿ ಪೋಸ್ಟ್‌ ಭಾರಿ ಚರ್ಚೆಯಲ್ಲಿದ್ದಾರೆ.. ಬಚ್ಚನ್‌ ಈ ಪೋಸ್ಟ್‌ ಯಾಕೆ ಹಾಕಿದ್ರು? ಯಾರ ಮೇಲಿನ ಸಿಟ್ಟಿನಿಂದ ಪೋಸ್ಟ್‌ ಹಾಕಿದ್ರು? ಐಶ್‌ ಸರ್‌ನೇಮ್‌ ಮಿಸ್‌ ಆಗಿದ್ದಕ್ಕೆ ಸಿಟ್ಟಾದ್ರಾ ಅಥವಾ ಸೊಸೆ ಐಶ್‌ ಅನ್ನ ಟೀಕಿಸುತ್ತಿರುವವರ ಮೇಲೆ ಸಿಟ್ಟಾದ್ರಾ ಅನ್ನೋದು ಈಗ ಎಲ್ಲರನ್ನ ಕಾಡುತ್ತಿರುವ ಪ್ರಶ್ನೆ. ಈ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗುತ್ತಾ ಅಂತಾ ಕಾದು ನೋಡ್ಬೇಕು.

Shwetha M