AI ಮೂಲಕ ನೀಲಿ ಚಿತ್ರ ತಾರೆ ಮಾಡಿದ್ನಾ? ಬೇಬಿಡಾಲ್ ಆರ್ಚಿ.. ಫೇಕ್ ಫೇಕ್!
ಮಾಜಿ ಲವರ್‌ ಬಹುದೊಡ್ಡ ದೋಖಾ!

AI ಮೂಲಕ ನೀಲಿ ಚಿತ್ರ ತಾರೆ ಮಾಡಿದ್ನಾ? ಬೇಬಿಡಾಲ್ ಆರ್ಚಿ.. ಫೇಕ್ ಫೇಕ್!ಮಾಜಿ ಲವರ್‌  ಬಹುದೊಡ್ಡ ದೋಖಾ!

ಇಲ್ಲಿ ಸುಳ್ಳು ನಿಜವಾಗುತ್ತೆ.. ನಿಜ ಸುಳ್ಳಾಗುತ್ತೆ.. ಯಾಕಂದ್ರೆ ಇದು AI ಜಮಾನ.. ಸೋಷಿಯಲ್ ಮೀಡಿಯಾದಲ್ಲಿ ನಾವು ಯಾವುದ್ದನ್ನ ನಂಬಬೇಕು ಯಾವುದ್ದನ್ನ ನಂಬಬಾರದು ಅನ್ನೋದೆ ಗೊತ್ತಾಗಲ್ಲ. ಅಷ್ಟರ ಮಟ್ಟಿಗೆ AI ಕ್ವಾಟ್ಲೆ ಶುರುವಾಗಿದೆ. ನಿಜವಿರುವಂತೆ ವಿಡಿಯೋಗಳನ್ನ ಕ್ರಿಯೇಟ್ ಮಾಡಿ ಜನರ ದಾರಿ ತಪ್ಪಿಸಲಾಗ್ತಿದೆ.. ಈ AI ಯನ್ನ ಸಾಕಷ್ಟು ಜನ ಕ್ರಿಮಿನಲ್ ಕೆಲಸಗಳಿಗೂ ಬಳಸಿಕೊಳ್ಳುತ್ತಿದ್ದಾರೆ.. ನಿಜಕ್ಕೂ ಈ AI ಎಷ್ಟು ಅಪಯಕಾರಿ ಅನ್ನೋದ್ದಕ್ಕೆ ಬೇಬಿಡಾಲ್ ಆರ್ಚಿಯ ಸ್ಟೋರಿನೇ ಸಾಕ್ಷಿ.. ಮಾಜಿ ಲವರ್ ಮೇಲೆ ಸೇಡು ತಿರಿಸಿಕೊಳ್ಳೋಕೆ ಪಾಗಲ್ ಪ್ರೇಮಿ ಮಾಡಿದ ಕೆಲಸಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ..

ಬೇಬಿ ಡಾಲ್ ಆರ್ಚಿ.. ಪಡ್ಡೆ ಹುಡುಗರ ಮನಸ್ಸು ಕದ್ದ ಒಂದು ಇನ್ಸ್ಟಾ ಗ್ರಾಮ್ ಅಕೌಂಟ್‌.. ಹಾಟ್ ಹಾಟ್ ವಿಡಿಯೋಗಳನ್ನ ಹಾಕಿ ಮಿಲಿಯನ್ ಗಟ್ಟಲೇ ಫಾಲೋವರ್ಸ್‌ಗಳನ್ನ ಪಡೆದ ಅಕೌಂಟ್‌.. ಬೇಬಿಡಾಲ್ ಆರ್ಚಿಯ ಫೋಟೋ ವಿಡಿಯೋ ನೋಡಿದವರು ಏನಪ್ಪಾ ಹೀಗ್ ಇದ್ದಾಳೆ ಅಂತ ಅಂದ್ಕೊಂಡಿದ್ರು.. ಬಟ್ ಇದೆಲ್ಲಾ ಫೇಕ್.

ಹೌದು ಬೇಬಿಡಾಲ್ ಆರ್ಚಿ ಖಾತೆಯ ಹಿಂದೆ ಇರೋದು ಅರ್ಚಿತಾ ಫುಕನ್‌ರ ಮಾಜಿ ಪ್ರೇಮಿ ಪ್ರತೀಮ್ ಬೋರಾ.. ಇವನು ಮೆಕಾನಿಕಲ್ ಇಂಜಿನಿಯರ್‌.. ಇಂಜಿನಿಯರ್ ಆದ್ರೂ ಮಣ್ಣು ತಿನ್ನೋ ಕೆಲಸ ಮಾಡಿದ್ದಾನೆ. ಇವನ್ AI ಮೂಲಕ ಅರ್ಚಿತಾರ ಫೋಟೋ ಬಳಸಿ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ರಚಿಸಿ ಬೇಬಿಡಾಲ್ ಆರ್ಚಿ ಎಂಬ ಫೇಕ್ ಡಿಜಿಟಲ್ ವ್ಯಕ್ತಿತ್ವವನ್ನು ಸೃಷ್ಟಿಸಿದ್ದಾನೆ. ಇನ್ಸ್ಟಾಗ್ರಾಮ್‌ನಲ್ಲಿ  2020ರಲ್ಲಿ ಇವನು ಬೇಬಿಡಾಲ್ ಆರ್ಚಿ ಅಕೌಂಟ್ ಕ್ರಿಯೆಟ್ ಮಾಡಿದ್ದು, 1.3 ಮಿಲಿಯನ್ ಫಾಲೋವರ್‌ ಗಳಿಸಿದೆ. ಮೊದಲು ಲವರ್ ಮೇಲಿನ ಸೇಡಿಗೆ ಅಕೌಂಟ್ ಕ್ರಿಯೇಟ್ ಮಾಡಿದ  ಪ್ರತೀಮ್ ಬೋರಾಗೆ ನಂತ್ರ ಇದ್ರಿಂದ ಒಳ್ಳೆಯ ಲಾಭ ಬಂದಿದೆ.. ಆಮೇಲೆ ಇದ್ದನ್ನೇ ಬಂಡವಾಳ ಮಾಡಿಕೊಂಡು ಬೇಬಿಡಾಲ್ ಆರ್ಚಿ ಹೆಸರಲ್ಲಿ ಕಥೆ ಹೇಳುತ್ತಾ ವಂಚನೆ ಮಾಡಿದ್ದಾನೆ.

 ಬೇಬಿಡಾಲ್ ಆರ್ಚಿ ವೇಶ್ಯಾವಾಟಿಕೆ ಕಥೆ ಕಟ್ಟಿ ಮೋಸ

ಪಾಗಲ್ ಪ್ರೇಮಿ  ಪ್ರತೀಮ್ ಬೋರಾ ಜನರಿಂದ ಹೆಚ್ಚಿನ ವೀವ್ಸ್ ಪಡೆಯೋಕೆ  ಬೇಬಿಜಾಲ್ ಆರ್ಚಿಯ ಬಗ್ಗೆ ವೇಶ್ಯಾವಾಟಿಕೆ ಕಥೆ ಕಟ್ಟಿದ್ದ.. ಅಂದ್ರೆ ಅರ್ಚಿತಾ ಫುಕನ್ ಅವರೇ ಹೇಳುವಂತೆ ಬೋರಾ AI ವಿಡಿಯೋ ರಚಿಸಿದ್ದ.   2023ರ ಜುಲೈನಲ್ಲಿ ಒಂದು  ಪೋಸ್ಟ್ ಮಾಡಿದ್ದ.. ಅದ್ರಲ್ಲಿ ಒಂದು ಕಾಲದಲ್ಲಿ ವೇಶ್ಯಾವಾಟಿಕೆಯ ಕತ್ತಲ ಕೂಪಕ್ಕೆ ತಳ್ಳಲ್ಪಟ್ಟಿದ್ದೆ ಮತ್ತು ಆ ನರಕದಿಂದ ಹೊರಬರಲು ₹25 ಲಕ್ಷ ರೂ. ಕೊಡಬೇಕಾಯ್ತು ಅಂತ   AI ವಿಡಿಯೋ ರಚಿಸಿದ್ದ.. ಇದು ಲಕ್ಷಾಂತರ ವೀವ್ಸ್ ಪಡೆಯೋದ್ರ ಜೊತೆ ಜನ ಈ ಕಥೆಯನ್ನ ನಂಬಿದ್ರು.. ಅಯ್ಯೋ ಅರ್ಚಿತಾ ಫುಕನ್ ಪಾಪ..  ಎಷ್ಟು ಕಷ್ಟ ಪಟ್ಟಿದ್ದಾಳೆ ಅಂತ ಫೇಕ್ ಬೇಬಿ ಡಾಲ್ ಅಕೌಂಟ್‌ನ್ನ ಹೆಚ್ಚು ಹೆಚ್ಚಾಗಿ ಫಾಲೋ ಮಾಡೋಕೆ ಶುರುಮಾಡಿದ್ರು.. ಅಷ್ಟೇ ಅಲ್ಲ ಇವಳು  ಆರ್‌ಸಿಬಿ ಅಭಿಮಾನಿ ಅಂತ ಕೂಡ ಸುಳ್ಳು ಸುದ್ದಿ ಹಬ್ಬಿತ್ತು. ಆಮೇಲೆ ಒಂದಷ್ಟು ಆರ್‌ಸಿಬಿ ಫ್ಯಾನ್ಸ್ ಈ  ಅಕೌಂಟ್‌ನ ಫಾಲೋ ಮಾಡಿದ್ರು. ನೀಲಿ ಚಿತ್ರಗಳ ತಾರೆ ಅಂತ ಕೂಡ AI ಮೂಲಕ ಬಿಂಬಿಸಲಾಗಿತ್ತು.. ಹಾಲಿವುಡ್​ನಿಂದಲೂ ಈ ಫೋಟೋ ನೋಡಿ ಆಫರ್​ ಕೂಡ ಬಂದಿದೆ ಎನ್ನುವ ಸುದ್ದಿ ಕೂಡ ಹಬ್ಬಿತ್ತು. ವೈರಲ್ ಆಗೋಕೆ ಏನೆಲ್ಲಾ ಮಾಡಬೇಕು ಅದ್ದನ್ನ AI ಮೂಲಕ ಇಂಜಿನಿಯರ್ ಪ್ರತೀಮ್ ಬೋರಾ ಮಾಡಿದ್ದಾನೆ.

ಅಷ್ಟೇ ಅಲ್ಲ ಇತ್ತೀಚೆಗೆ ಅಮೆರಿಕದ ಖ್ಯಾತ ವಯಸ್ಕ ತಾರೆ ಕೆಂಡ್ರಾ ಲಸ್ಟ್ ಜೊತೆಗಿನ ಫೋಟೋ ಹಂಚಿಕೊಂಡಂತೆ, ಇಬ್ಬರೂ ಸೇರಿ ದೊಡ್ಡ ಯೋಜನೆಗೆ ಕೈ ಹಾಕಿರುವುದಾಗಿ ಕೂಡ AI ವಿಡಿಯೋವನ್ನ ರಚಿಸಿದ್ದ.. ಜನ ಇದ್ದನ್ನ ಕೂಡ ನಂಬಿದ್ರು. ಆದ್ರೆ ಈಗ ಬೇಬಿಡಾಲ್ ಆರ್ಚಿ ಫೇಕ್ ಅಕೌಂಟ್ ಅನ್ನೋದು ಗೊತ್ತಾಗಿದೆ.  .

ಪಾಗಲ್ ಪ್ರೇಮಿ ಪ್ರತೀಮ್ ಬೋರಾ ಅರೆಸ್ಟ್

ಯಾವಾಗ ಪ್ರತೀಮ್ ಬೋರಾ,  ಅರ್ಚಿತಾ ಫುಕನ್ ಅವರ ಹೆಸರಲ್ಲಿ ಅಶ್ಲೀಲವಾಗಿ ಫೋಟೋ, ವಿಡಿಯೋವನ್ನ AI ಮೂಲಕ ಕ್ರಿಯೇಟ್ ಮಾಡಿ ಮೋಸ ಮಾಡುತ್ತಿದ್ದನೆ ಅನ್ನೋದು ಗೊತ್ತಾಯ್ತೋ. ಅರ್ಚಿತಾ ಫುಕನ್‌ರ ಸಹೋದರ ಕೇಸ್ ದಾಖಲಿಸಿದ್ದಾರೆ.  ಸದ್ಯ ಈ ಬಗ್ಗೆ ತನಿಖೆ ಮಾಡಿದ ಡಿಬ್ರುಗಢ್ ಪೊಲೀಸರು ಜುಲೈ 12 ರಂದು  ತಿನ್ಸುಕಿಯಾದಲ್ಲಿ ಪ್ರತೀಮ್ ಬೋರಾನನ್ನು ಅರೆಸ್ಟ್ ಮಾಡಿದ್ದಾರೆ.

ಸೇಡನ್ನೇ ಲಾಭ ಮಾಡಿಕೊಂಡಿದ್ದ ಪ್ರತೀಮ್

ಇನ್ನು ಪೊಲೀಸರ ಮುಂದೆ ಬೋರಾ ತನ್ನ ನೀಚ ತನವನ್ನ ಒಪ್ಪಿಕೊಂಡಿದ್ದಾನೆ. ಇದು ವೈಯಕ್ತಿಕ ಸೇಡಿನಿಂದ ಆರಂಭ ಆಯ್ತು.. ನಂತರ ಲಕ್ಷ ಲಕ್ಷ ಲಾಭ ಬಂತು ಅದ್ದಕ್ಕೆ ಇದ್ದನ್ನೇ ಮುಂದುವರಿಸಿದೆ ಅಂತ ಹೇಳಿಕೊಂಡಿದ್ದಾನೆ.

ಈ ಘಟನೆ ನಂತ್ರ ಪ್ರತಿಕ್ರಿಯೆ ನೀಡಿದ  ಅರ್ಚಿತಾ ತನ್ನ ಗೌರವ ಮತ್ತು ಗೌಪ್ಯತೆಗೆ ಧಕ್ಕೆ ಮಾಡಿದವನ ಬಗ್ಗೆ ದಿಟ್ಟ ಕ್ರಮ ತೆಗೆದುಕೊಂಡಿದ್ದಕ್ಕೆ ಪೊಲೀಸರಿಗೆ ಧನ್ಯವಾದ ಸಲ್ಲಿಸಿದ್ದಾರೆ.. ಹಾಗೇ ನಾನು ನ್ಯಾಯಕ್ಕಾಗಿ ಕಾಯುತ್ತಿದ್ದಾನೆ ಅಂತ ಹೇಳಿದ್ದಾರೆ.

ಸೆಲೆಬ್ರಿಟಿಗಳ ಡೀಪ್‌ಫೇಕ್ ಘಟನೆಗಳು ಬಗ್ಗೆ ಚರ್ಚೆ ಆಗುತ್ತಿರುವಾಗ ಒಬ್ಬ ಸಾಮಾನ್ಯ ವ್ಯಕ್ತಿಯಾದ ಅರ್ಚಿತಾ ಫುಕನ್‌ರ ಪ್ರಕರಣ ಜನರಲ್ಲಿ ಭಯ ಹುಟ್ಟಿಸಿದೆ.. AI ತಂತ್ರಜ್ಞಾನ ಹೇಗೆಲ್ಲಾ ದುರುಪಯೋಗ ಆಗುತ್ತೆ ಅನ್ನೋ ಬಗ್ಗೆ ಗಂಭೀರ ಚರ್ಚೆ ಆಗುತ್ತಿದೆ. ಸೇಡಿಗಾಗಿ AI ಮೂಲಕ ಒಂದು ವ್ಯಕ್ತಿತ್ವನ್ನ ರಚಿಸಿ ಹೇಗೆಲ್ಲಾ ಮಾನ ಕಳೆಯಬಹುದು ಅನ್ನೋದು ಬೇಬಿಡಾಲ್ ಆರ್ಚಿ ಫೇಕ್ ಅಕೌಂಟ್ ಮೂಲಕ ಗೊತ್ತಾಗಿದೆ. ನೀವು ಬೇಕಾ ಬಿಟ್ಟಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕೋ ಮುನ್ನ ನೂರು ಸಲ ಯೋಚನೆ ಮಾಡಿ..

 

Kishor KV