ಸುಮ್ನೆ ಕೂತು ತಿನ್ಬೇಕು.. ನೈವೇದ್ಯ ತಿನ್ನದ ದೇವರಿಗೆ ಪುಟ್ಟ ಕಂದನ ಕ್ಲಾಸ್!

ದೇವರ ಮುಂದೆ ನೈವೇದ್ಯ ಇಟ್ಟು ಪೂಜೆ ಮಾಡಲಾಗುತ್ತೆ. ಅದಾದ ಬಳಿಕ ಪ್ರಸಾದವೆಂದು ಹಂಚಲಾಗುತ್ತೆ. ಆದ್ರೆ ಇಲ್ಲೊಂದು ಕಡೆ ಪುಟ್ಟ ಕಂದಮ್ಮ ದೇವರಿಗೆ ಕ್ಲಾಸ್ ತೆಗೆದುಕೊಂಡಿದೆ. ಸುಮ್ನೆ ಕೂತು ತಿನ್ಬೇಕು ಅಷ್ಟೇ ಅಂತಾ ವಾರ್ನ್ ಮಾಡಿದೆ.
ಇದನ್ನೂ ಓದಿ: ‘ಹಳ್ಳಿ ಪವರ್’ ಶೋನಲ್ಲಿ ಅಲ್ಲೋಲ ಕಲ್ಲೋಲ – ರೂಲ್ಸ್ ಬ್ರೇಕ್, ಸ್ಪರ್ಧಿಗಳ ನಿರ್ಗಮನ, ಅಕುಲ್ ಬಾಲಾಜಿ ಮಾಡಿದ್ದೇನು?
ಸಣ್ಣ ಮಕ್ಕಳು ಮುದ್ದು ಮುದ್ದಾಗಿ ಮಾತನಾಡುವುದನ್ನ ಕೇಳವುದೇ ಚೆಂದ. ಇನ್ನು ಮಕ್ಕಳು ದೊಡ್ಡವರನ್ನ ಎಷ್ಟೋ ಸಲ ಅನುಕರಣೆ ಮಾಡುತ್ತಾರೆ. ಬೈಯೋದನ್ನ ನೆನಪಿಟ್ಟುಕೊಂಡು, ಮತ್ತೆ ಹಾಗೇ ಹೇಳ್ತಾರೆ. ಇದೀಗ ಪುಟ್ಟ ಮಗುವೊಂದು ದೇವರು ನೈವೇದ್ಯ ಸೇವಿಸಿಲ್ಲ ಎಂದು ಸರಿಯಾಗೇ ಕ್ಲಾಸ್ ತೆಗೆದುಕೊಂಡಿದೆ. ಸದ್ಯ ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಮಗುವು ದೇವರ ವಿಗ್ರಹಗಳಿಗೆ ಆಹಾರವನ್ನು ತಿನ್ನಲು ಹೇಳುತ್ತಾ ಗದರಿಸಿದೆ. ಈ ವೇಳೆ ತಾಯಿ ಮಧ್ಯಪ್ರವೇಶಿಸಿ ತನ್ನ ಮಗಳಿಗೆ ವಿಗ್ರಹಗಳೊಂದಿಗೆ ಹಾಗೆ ವರ್ತಿಸಬೇಡ ಎಂದು ಮೃದುವಾಗಿ ಕೇಳಿಕೊಂಡಿದ್ದಾಳೆ. ದೇವರರೊಂದಿಗೆ ಯಾಕೆ ಹೀಗೆ ಮಾತನಾಡುತ್ತೀಯಾ? ಎಂದು ಅವಳು ಕೇಳುತ್ತಾಳೆ. ಒಳ್ಳೆಯ ನಡತೆಯ ವಿದ್ಯಾರ್ಥಿಯಂತೆ, ಪುಟ್ಟ ಬಾಲಕಿ ತನ್ನ ತಾಯಿಯ ಮಾತುಗಳನ್ನು ಪಾಲಿಸಿದ್ದಾಳೆ. ದೇವರ ವಿಗ್ರಹಗಳಿಗೆ ಗದರಿಸುತ್ತಿದ್ದ ಪುಟ್ಟ ಪೋರಿ ನಂತರ ನಿಧಾನವಾಗಿ ಮಾತನಾಡುತ್ತಾಳೆ. ಮೃದುವಾಗಿ, ಅನುನಯಿಸುವ ಧ್ವನಿಯಲ್ಲಿ ದೇವತೆಗಳಿಗೆ ಆಹಾರವನ್ನು ಸೇವಿಸಿ ಮಲಗಲು ಹೇಳುತ್ತಾಳೆ. ಚಿಂತೆ ಮಾಡಬೇಡಿ, ನಿಮ್ಮ ಬಳಿ ಟೊಮೊಟೊಗಳಿವೆ ಎಂದಿದ್ದಾಳೆ. ಅಂದರೆ ದೇವರ ಬಳಿ ಟೊಮೆಟೊ ತಿನ್ನುವಂತೆ ಕೇಳಿಕೊಂಡಿದ್ದಾಳೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
View this post on Instagram

ನೋಡಿರಿ

