ನವಜಾತ ಶಿಶುವಿಗೆ ನಾಲ್ಕು ಕಾಲು – ಅಚ್ಚರಿಗೆ ಕಾರಣವಾದ ಮಧ್ಯಪ್ರದೇಶದ ಮಗು

ನವಜಾತ ಶಿಶುವಿಗೆ ನಾಲ್ಕು ಕಾಲು – ಅಚ್ಚರಿಗೆ ಕಾರಣವಾದ ಮಧ್ಯಪ್ರದೇಶದ ಮಗು

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲಿನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಅವರು ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿನ ತೂಕ 2.3 ಕೆಜಿ ಇದೆ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಮನೆಯೊಂದು ಎರಡು ರಾಜ್ಯ… ನಾಲ್ಕು ಕೋಣೆ ಮಹಾರಾಷ್ಟ್ರಕ್ಕೆ, ನಾಲ್ಕು ಕೋಣೆ ತೆಲಂಗಾಣಕ್ಕೆ!

ನಾಲ್ಕು ಕಾಲಿರುವ ಮಗು ಜನಿಸಿದೆ. ಆ ಮಗುವಿಗೆ ಅಂಗವಿಕಲತೆ ಇದೆ. ಈ ರೀತಿಯ ಹೆಚ್ಚಿನ ಅಂಗಗಳೊಂದಿಗೆ ಜನಿಸುವ ಶಿಶುಗಳಿಗೆ ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ. ಆ ಎರಡು ಕಾಲುಗಳು ಸ್ವಾಧೀನಗೊಂಡಿವೆ ಎಂದು ಹೇಳಿದ್ದಾರೆ.

ಮಗುವಿಗೆ ಯಾವುದೇ ಅಪಾಯವಿಲ್ಲ ಎಂದಾದರೆ, ಆ ಕಾಲುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಲಾಗುತ್ತದೆ. ಇದರಿಂದ ಮಗು ಮುಂದೆ ಸಹಜ ಜೀವನ ನಡೆಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಮಹಿಳೆಯೊಬ್ಬರು ಎರಡು ತಲೆ, ಮೂರು ಕೈಗಳು ಮತ್ತು ಎರಡು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ್ದರು.

suddiyaana