ಹುಟ್ಟುವಾಗಲೇ ಹೆಣ್ಣು ಮಗುವಿಗೆ ಇದ್ದಿತ್ತು 2 ಇಂಚಿನ ಉದ್ದದ ಬಾಲ..! – ಅಚ್ಚರಿಯಾದರೂ ಇದು ಸತ್ಯ..!

ಹುಟ್ಟುವಾಗಲೇ ಹೆಣ್ಣು ಮಗುವಿಗೆ ಇದ್ದಿತ್ತು 2 ಇಂಚಿನ ಉದ್ದದ ಬಾಲ..! – ಅಚ್ಚರಿಯಾದರೂ ಇದು ಸತ್ಯ..!

ಮೆಕ್ಸಿಕೋದ ನ್ಯೂವೋ ಲಿಯಾನ್‌ ಆಸ್ಪತ್ರೆಯಲ್ಲಿ ವಿಶೇಷ ಹೆಣ್ಣು ಮಗುವೊಂದು ಜನಿಸಿದೆ. ಈ  ಶಿಶುವಿಗೆ ಹುಟ್ಟುತ್ತಲೇ  2 ಇಂಚು ಉದ್ದದ ಬಾಲ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಮಗುವಿನ ಫೋಟೋಗಳು ಇದೀಗ ವೈರಲ್ ಆಗುತ್ತಿದೆ.

ಈ ಮಗುವಿನ ಬಾಲ 2 ಇಂಚು ಉದ್ದವಿತ್ತು. ಈ ಬಾಲ ಮೃದುವಾಗಿತ್ತು ಹಾಗೂ ಬಾಲದ ತುದಿಯಲ್ಲಿ ಕೂದಲಿದ್ದು, ತುದಿಯ ಕಡೆಗೆ ಕಿರಿದಾಗುತ್ತಾ ವ್ಯಾಸದಲ್ಲಿ 3 ಮಿಲಿಮೀಟರ್ ಮತ್ತು 5 ಮಿಲಿಮೀಟರ್ ನಡುವೆ ಇತ್ತು. ಇದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: ಎಟಿಎಂ ಇಲ್ಲದೆ ಹಣ ವಿಥ್‌ಡ್ರಾ ಮಾಡಬಹುದು – ಹೇಗೆ ಗೊತ್ತಾ?

ಈ ಬಾಲ ಸ್ನಾಯು, ನರ ಹಾಗೂ ರಕ್ತನಾಳ ಒಳಗೊಂಡಿರುವ ನಿಜವಾದ ಬಾಲ. ಆದರೆ ಪ್ರಾಣಿಗಳ ಬಾಲದಂತೆ ಯಾವುದೇ ಮೂಳೆಗಳಿಲ್ಲ. ಬಹುಶಃ ಗರ್ಭಾಶಯಲ್ಲಿ ಬೆಳವಣಿಗೆಯಾದ ಭ್ರೂಣದ ಬಾಲದಿಂದ ಇದು ಹುಟ್ಟಿಕೊಂಡಿದೆ ಎಂದು ಹೇಳಲಾಗಿದೆ. ಆದರೆ ಸಾಮಾನ್ಯವಾಗಿ ಮೂಳೆಯನ್ನು ರೂಪಿಸಲು ದೇಹ ಭ್ರೂಣದ ಬಾಲವನ್ನು ಪುನಃ ಒಳಕ್ಕೆಳೆದುಕೊಳ್ಳುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಮೆಕ್ಸಿಕೊದಲ್ಲಿ ಈ ಪ್ರಕರಣ ದಾಖಲಾಗಿರುವುದು ಇದೇ ಮೊದಲಾದರೂ, ಪ್ರಪಂಚದಾದ್ಯಂತ ಸುಮಾರು 200 ಪ್ರಕರಣಗಳು ದಾಖಲಾಗಿವೆ ಎಂದು ವೈದ್ಯರು ಹೇಳಿದ್ದಾರೆ.

suddiyaana