ಕುರ್ಚಿಯಲ್ಲಿ ಕುಳಿತುಕೊಳ್ಳಲು ಆಗಲ್ಲ ಎಂದು ಕೋಪಿಸಿಕೊಂಡ ಆನೆ ಮರಿ – ಅಬ್ಬಬ್ಬಾ.. ಬೇಬಿ ಎಲಿಫೆಂಟ್‌ಗೆ ಇಷ್ಟೊಂದು ಕೋಪ ಬರುತ್ತಾ?

ಕುರ್ಚಿಯಲ್ಲಿ ಕುಳಿತುಕೊಳ್ಳಲು ಆಗಲ್ಲ ಎಂದು ಕೋಪಿಸಿಕೊಂಡ ಆನೆ ಮರಿ – ಅಬ್ಬಬ್ಬಾ.. ಬೇಬಿ ಎಲಿಫೆಂಟ್‌ಗೆ ಇಷ್ಟೊಂದು ಕೋಪ ಬರುತ್ತಾ?

ಆನೆ ಮರಿಗಳ ಆಟ ತುಂಟಾಟ ನೋಡುವುದೇ ಕಣ್ಣಿಗೆ ಹಬ್ಬ.. ಬೇಬಿ ಎಲಿಫೆಂಟ್‌ ಮಾಡೋ ಕಿತಾಪತಿ ನೋಡಿದ್ರೆ ಎಂತವರಿಗೂ ನಗು ಬರೋದು ಗ್ಯಾರೆಂಟಿ. ಇಲ್ಲೊಂದು ಆನೆ ಮರಿ ಕುರ್ಚಿ ಮೇಲೆ ಕೂರಲು ಪ್ರಯತ್ನಿಸಿದೆ.. ಕುರ್ಚಿ ಮೇಲೆ ಕೂರಲು ಆಗಿಲ್ಲ ಅಂತ ಕೋಪಿಸಿಕೊಂಡಿದೆ. ಇದೀಗ ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಇಂಗ್ಲೆಂಡ್‌ನಲ್ಲಿ ಭಾರತದ ವನಿತೆಯರಿಂದ ಇತಿಹಾಸ ಸೃಷ್ಟಿ – ಹರ್ಮನ್ ಪ್ರೀತ್ ಕೌರ್ ವೇಗದ ಶತಕಕ್ಕೆ ಸೋತು ಶರಣಾದ ಆಂಗ್ಲರು

ಪುಟಾಣಿ ಆನೆ ಮರಿಗಳ ಕಸರತ್ತು ಒಂದೆರಡಲ್ಲ.. ಬೇಬಿ ಎಲಿಫೆಂಟ್‌ ಪೆದ್ದು ಪೆದ್ದು ಆಟವನ್ನು ನೋಡೋದೆ ಚೆಂದ. ಈ ಮುಗ್ಧ ಪ್ರಾಣಿಗಳು ಮಕ್ಕಳಂತೆ ಮುದ್ದು ಮುದ್ದಾಗಿ ಕೋಪಿಸಿಕೊಳ್ಳುತ್ತವೆ. ಇದೀಗ ಮರಿಯಾನೆ ತುಂಟಾಟದ ವಿಡಿಯೋ ವೈರಲ್ ಆಗಿದೆ. ಮಡಚಿ ಇಡಬಹುದಾದ ಕುರ್ಚಿಯನ್ನು ಕಂಡೊಡನೆ ಓಡಿ ಹೋಗಿ ಕುಳಿತುಕೊಳ್ಳಲು ಪ್ರಯತ್ನಿಸಿದೆ. ಆದ್ರೆ ಕುರ್ಚಿ ಸಣ್ಣದಾಯ್ತು.. ತನಗೆ ಕುಳಿತುಕೊಳ್ಳಲು ಆಗ್ತಿಲ್ಲ ಅಂತ ಕೋಪಿಸಿಕೊಂಡಿದೆ.

ಈ ಮುದ್ದಾದ ವಿಡಿಯೋವನ್ನ tuskersh ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ.  ಪುಟಾಣಿ ಮರಿಯೊಂದು ನಿಧಾನವಾಗಿ ತನ್ನ ದೇಹ ಸಮತೋಲನವನ್ನು ಕಾಯ್ದುಕೊಂಡು ಮಡಚಿ ಇಡಬಹುದಾದ ಕುರ್ಚಿ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದೆ. ಎಷ್ಟೇ ಪ್ರಯತ್ನಿಸಿದ್ರೂ ಕುರ್ಚಿ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ. ಕೊನೆಗೆ ಸಿಟ್ಟಿನಲ್ಲಿ ಕುರ್ಚಿಯನ್ನು ಕಾಲಿನಿಂದ ಒದ್ದು ಅಪ್ಪಚಿ ಮಾಡಿ ತನ್ನ ಕೋಪವನ್ನು ಹೊರಹಾಕಿದೆ. ಇದ್ರ ವಿಡಿಯೋ ಈ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗ್ತಿದೆ.

 

View this post on Instagram

 

A post shared by @tuskershelter

Shwetha M