ಅಯ್ಯೋ… ಶೂಟ್‌ ಮಾಡ್ಬೇಡ! – ಆಟಿಕೆ ಗನ್‌ನಿಂದ ಶೂಟ್ ಮಾಡುತ್ತಿದ್ದಂತೆ ಬಿದ್ದಂತೆ ನಟಿಸಿದ ಅನೆ ಮರಿ!

ಅಯ್ಯೋ… ಶೂಟ್‌ ಮಾಡ್ಬೇಡ! – ಆಟಿಕೆ ಗನ್‌ನಿಂದ ಶೂಟ್ ಮಾಡುತ್ತಿದ್ದಂತೆ ಬಿದ್ದಂತೆ ನಟಿಸಿದ ಅನೆ ಮರಿ!

ಆನೆ ಮರಿಗಳ ಆಟ, ತುಂಟಾಟ ನೋಡೋದೇ ಚೆಂದ. ಇನ್ನು ತನ್ನ ಮಾಲೀಕರೊಂದಿಗೆ, ಅವರ ಮಕ್ಕಳ ಜೊತೆ ಇವುಗಳು ಆಟ ಆಡಲು ಶುರು ಮಾಡಿದ್ರೆ ನಿಲ್ಲಿಸೋದೇ ಇಲ್ಲ. ಇದೀಗ ಇಲ್ಲೊಂದು ಮರಿಯಾನೆ ಮಗುವಿನ ಜೊತೆ ಆಟವಾಡಿದೆ. ಆಟಿಕೆ ಗನ್‌ನಲ್ಲಿ ಶೂಟ್‌ ಮಾಡ್ತಿದ್ದಂತೆ ಆನೆ ಮರಿ ಕೆಳಗೆ ಬೀಳುತ್ತಿದೆ.

ಇದನ್ನೂ ಓದಿ: ಕೇರಳ ಆಯ್ತು.. ಈಗ ಕರ್ನಾಟಕದಲ್ಲೂ ವೈರಲ್‌ ವಿಡಿಯೋಗೆ ವ್ಯಕ್ತಿ ಬಲಿ! – ಅಂಕೋಲದ ವೈದ್ಯ ದುರಂತ ಅಂತ್ಯ!

ಆನೆ ಮರಿಗಳು ಮಾಲೀಕರು ಹಾಗೂ ಮಕ್ಕಳ ಜತೆಯಲ್ಲಿ ಪ್ರೀತಿ ಸಲುಗೆಯಿಂದ ವರ್ತಿಸುತ್ತವೆ. ಇಲ್ಲೊಂದು ಪುಟ್ಟ ಬಾಲಕನೊಂದಿಗೆ ಮರಿಯಾನೆ ಆಟ ಆಡುತ್ತಿದೆ. ಮಗು ಆಟಿಕೆ ಗನ್‌ನಲ್ಲಿ ಶೂಟ್‌ ಮಾಡ್ತಿದ್ದಂತೆ ಆನೆ ಮರಿ ಬಿದ್ದು ಹೊರಳಾಡುವಂತೆ ನಟಿಸಿದೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗ್ತಿದೆ.

@Hinduism_sci ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇಂದಿನ ಇಂಟರ್ನೆಟ್‌ನಲ್ಲಿ ಅತ್ಯಂತ ಸುಂದರವಾದ ವೀಡಿಯೊ ಎಂದು ಶೀರ್ಷಿಕೆ ನೀಡಲಾಗಿದೆ. ವೈರಲ್‌ ಆದ ಈ ವಿಡಿಯೋದಲ್ಲಿ ಪುಟ್ಟ ಬಾಲಕ ಮರಿಯಾನೆಯೊಂದಿಗೆ ಆಟ ಆಡುತ್ತಿರುವುದನ್ನು ಕಾಣಬಹುದು. ಮಗು ಕೈಯಲ್ಲಿ ಆಟಿಕೆ ಗನ್ ಹಿಡಿದಿದೆ. ತಮಾಷೆಯಾಗಿ, ಮಗು ಮರಿಯಾನೆಯ ಕಡೆಗೆ ಗನ್ ಗುರಿಯಿಡುತ್ತದೆ. ಈ ಗನ್‌ನಿಂದ ನೀರನ್ನು ಹಾರಿಸುತ್ತಿದ್ದಂತೆ, ಮರಿಯಾನೆಯು ನೆಲಕ್ಕೆ ಬಿದ್ದಂತೆ ನಟಿಸುತ್ತದೆ. ಮರಿಯಾನೆಯು ನೆಲದಿಂದ ಎದ್ದೇಳದಿದ್ದಾಗ ಪುಟ್ಟ ಬಾಲಕನು ಗಾಬರಿಗೊಳ್ಳುತ್ತದೆ. ತನ್ನ ಕೈಯಲ್ಲಿದ್ದ ನೀರಿನ ಗನ್ ಎಸೆದು, ತಕ್ಷಣ ಆನೆಯತ್ತ ಓಡಿ ಹೋಗುವುದನ್ನು ಕಾಣಬಹುದು. ನಂತರ ಪುಟಾಣಿಯೂ ಮರಿಯಾನೆಯನ್ನು ಪ್ರೀತಿಯಿಂದ ಅಪ್ಪಿಕೊಂಡು ಮುದ್ದಾಡುತ್ತದೆ. ಈ ವೇಳೆ ಮರಿಯಾನೆ ಮೆಲ್ಲನೆ ಎದ್ದು ನಿಂತಿದೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

Shwetha M