ಭೂಕಂಪದಲ್ಲಿ ಸಾವನ್ನೇ ಗೆದ್ದ ಮಗು ಈಗ ‘ಮಿರಾಕಲ್’ – ಕಂದನಿಗೆ ಹಾಲುಣಿಸುತ್ತಿದ್ದಾರೆ ವೈದ್ಯರ ಪತ್ನಿ!

ಭೂಕಂಪದಲ್ಲಿ ಸಾವನ್ನೇ ಗೆದ್ದ ಮಗು ಈಗ ‘ಮಿರಾಕಲ್’ – ಕಂದನಿಗೆ ಹಾಲುಣಿಸುತ್ತಿದ್ದಾರೆ ವೈದ್ಯರ ಪತ್ನಿ!

ಜಗದ ಬೆಳಕು ನೋಡುವ ಮುನ್ನವೇ ಆ ಹಸುಗೂಸು ಪ್ರಕೃತಿ ವಿಕೋಪಕ್ಕೆ ತುತ್ತಾಗಿತ್ತು. ಅಮ್ಮನ ಗರ್ಭದಿಂದ ಹೊರಬಂದ ಕಂದನಿಗೆ ಸಾವೇ ಎದುರಾಗಿತ್ತು. ಜನ್ಮ ಕೊಟ್ಟ ತಾಯಿ ಉಸಿರು ಚೆಲ್ಲಿದ್ರೆ ಇಡೀ ಕುಟುಂಬಸ್ಥರೇ ಅವಶೇಷಗಳಡಿ ಸಿಲುಕಿ ಪ್ರಾಣ ಬಿಟ್ಟಿದ್ದರು. ಹೊಕ್ಕುಳ ಬಳ್ಳಿಯನ್ನೂ ಕತ್ತರಿಸದ ಆ ಮಗು ಪವಾಡವೆಂಬಂತೆ ಬದುಕುಳಿದಿತ್ತು.

ಇದನ್ನೂ ಓದಿ :ಟರ್ಕಿಯಲ್ಲಿ ಮುಂದುವರಿದ ರಕ್ಷಣಾಕಾರ್ಯ- ಬದುಕುಳಿದವರ ಶೋಧಕ್ಕಾಗಿ ರೋಬೋಟ್‌ಗಳ ಸಹಾಯ

ಹೌದು. ಸಿರಿಯಾದ ಭೂಕಂಪದಲ್ಲಿ ಸಿಲುಕಿ ಬದುಕಿ ಬಂದ ಅದೇ ಕಂದನಿಗೆ ‘ಆಯಾ’ ಎಂದು ಹೆಸರಿಡಲಾಗಿದೆ. ಸಿರಿಯಾ ಭಾಷೆಯಲ್ಲಿ ‘ಆಯಾ’ ಎಂದರೆ ಇಂಗ್ಲಿಷ್​ನಲ್ಲಿ ‘ಮಿರಾಕಲ್’ ಎಂದು ಅರ್ಥ. ಸದ್ಯ ಬೆನ್ನಿನಲ್ಲಿ ಮಗುವಿಗೆ ಗಾಯವಾಗಿದ್ದು ಚಿಕಿತ್ಸೆ ನೀಡಲಾಗ್ತಿದೆ. ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಪತ್ನಿ ತಮ್ಮ ಮಗುವಿನ ಜೊತೆ ಈ ಮಗುವಿಗೂ ಹಾಲುಣಿಸಿ ಅಮ್ಮನಂತೆ ಆರೈಕೆ ಮಾಡ್ತಿದ್ದಾರೆ. ಈ ನಡುವೆ ಸಾವಿರಾರು ಜನ ಮಗುವನ್ನ ದತ್ತು ಪಡೆಯಲು ಮುಂದಾಗಿದ್ದಾರೆ. ಆದ್ರೆ ಮಗುವಿನ ಚಿಕ್ಕಪ್ಪ ತಮ್ಮ ಜೊತೆಯೇ ಇಟ್ಟುಕೊಳ್ಳೋದಾಗಿ ಹೇಳಿದ್ದಾರೆ.

ಭೀಕರ ಭೂಕಂಪಕ್ಕೆ ತುತ್ತಾಗಿರೋ ಟರ್ಕಿ ಹಾಗೂ ಸಿರಿಯಾದಲ್ಲಿ ನಾಪತ್ತೆಯಾಗಿರೋರಿಗಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಅವಶೇಷಗಳಡಿ ಸಿಲುಕಿದ್ದ ಹತ್ತಾರು ಮಕ್ಕಳನ್ನ ಈಗಾಗ್ಲೇ ರಕ್ಷಣೆ ಮಾಡಲಾಗಿದೆ.

 

suddiyaana