ಬಾಬರ್ ಅಥವಾ ಔರಂಗಜೇಬ್.. ಮಂದಿರ ಕೆಡವಿದ್ಯಾರು? – ಬಾಬ್ರಿ ಮಸೀದಿ ಕೆಳಗೆ ಸಿಕ್ಕಿದ್ದೇನು?

ಬಾಬರ್ ಅಥವಾ ಔರಂಗಜೇಬ್.. ಮಂದಿರ ಕೆಡವಿದ್ಯಾರು? – ಬಾಬ್ರಿ ಮಸೀದಿ ಕೆಳಗೆ ಸಿಕ್ಕಿದ್ದೇನು?

ರಾಮಮಂದಿರ. ಇಂದು ಅಯೋಧ್ಯೆಯಲ್ಲಿ ನೂತನ ಭವ್ಯ ರಾಮಮಂದಿರ ತಲೆ ಎತ್ತಿ ನಿಂತಿರಬಹುದು. ಆದ್ರೆ ಶತ ಶತಮಾನಗಳ ಹಿಂದೆಯೇ ಅಲ್ಲೊಂದು ರಾಮಮಂದಿರವಿತ್ತು. ದಶರಥ, ಶ್ರೀರಾಮನ ಆಡಳಿತದ ಬಳಿಕ ಅಯೋಧ್ಯೆಯಲ್ಲಿ ಹಲವು ಮಂದಿ ರಾಜರುಗಳು ಆಳಿದ್ರು. ಅದ್ರಲ್ಲೂ ರಾಮನ ಭಕ್ತ ರಾಜ ವಿಕ್ರಮಾದಿತ್ಯ ಅಯೋಧ್ಯೆ ಮೊಟ್ಟ ಮೊದಲ ಬಾರಿಗೆ ರಾಮಮಂದಿರ ಕಟ್ಟಿಸಿದ್ದ ಅನ್ನೋದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ಆದ್ರೆ ಭಾರತಕ್ಕೆ ದಂಡೆತ್ತಿ ಬಂದಿದ್ದ ಶತ್ರುಗಳು ರಾಮಮಂದಿರವನ್ನ ಕೂಡ ಸುಮ್ನೆ ಬಿಟ್ಟಿರಲಿಲ್ಲ. ಒಟ್ಟು 17 ಬಾರಿ ಮಂದಿರದ ಮೇಲೆ ದಾಳಿಯಾಗಿತ್ತು.

1325 – 1517ರವರೆಗೂ ಸುಮಾರು 17 ಬಾರಿ ರಾಮಮಂದಿರ ಮೇಲೆ ಅಟ್ಯಾಕ್ ಮಾಡೋ ಪ್ರಯತ್ನ ನಡೆದಿತ್ತು. ಮೊಹಮ್ಮದ್ ಘಜ್ನಿಯಿಂದ ಹಿಡಿದು ಮೊಹಮ್ಮದ್ ಬಿನ್ ತುಘಲಕ್, ಶಾ ತುಘಲಕ್, ನಸೀರುದ್ದೀನ್ ತುಘಲಕ್, ಸಿಖಂದರ್ ಲೋಧಿ, ಫಿರೀಜ್ ಖಾನ್ ಹೀಗೆ ಸಾಲು ಸಾಲು ಮಂದಿ ರಾಮಮಂದಿರದ ಮೇಲೆ ಮುಗಿಬಿದ್ದಿದ್ರು. ಆದ್ರೂ ರಾಮ ಭಕ್ತರ ಕೋಟೆಯನ್ನ ಇವಱರಿಗೂ ಭೇದಿಸೋಕೆ ಸಾಧ್ಯವಾಗಿರಲಿಲ್ಲ. ಆದ್ರೆ 1527ರ ಸಂದರ್ಭದಲ್ಲಿ ಮೊಘಲರ ಮೊದಲ ದೊರೆ ಬಾಬರ್ ಭಾರತಕ್ಕೆ​ ಬರ್ತಾನೆ. ಇದೇ ಸಂದರ್ಭದಲ್ಲಿ ರಾಮಮಂದಿರವನ್ನ ಕೆಡವಲಾಯ್ತು ಅಂತಾ ಹೇಳಲಾಗುತ್ತೆ. ಮೊಘಲರ ಆಳ್ವಿಕೆ ಸಂದರ್ಭದಲ್ಲಿ ನಮ್ಮ ದೇಶದಲ್ಲಿರುವ ಹಲವಾರು ದೇವಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು. ಕೆಲ ಮಾಹಿತಿಗಳ ಪ್ರಕಾರ ಮೊಘಲರು ದೇಶಾದ್ಯಂತ ಸುಮಾರು 5000ಕ್ಕೂ ಹೆಚ್ಚು ದೇವಾಲಗಳನ್ನ ಹಾಳು ಮಾಡಿದ್ರಂತೆ. ಇನ್ನೂ ಕೆಲವರು ಬರೆದುಕೊಂಡಿರೋ ಪ್ರಕಾರ 30,000ಕ್ಕೂ ಹೆಚ್ಚು ದೇವಾಲಯಗಳ ಮೇಲೆ ದಾಳಿ ನಡೆಸಿದ್ರಂತೆ. ಇಲ್ಲಿ ಒಂದಂತೂ ಸ್ಪಷ್ಟ ಮೊಘಲರ ಕಾಲದಲ್ಲಿ ಹಲವು ದೇವಾಲಯಗಳು ನಾಶಗೊಂಡಿತ್ತು ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಅದಕ್ಕೆ ಬೇಕಾದ ಸಾಕ್ಷ್ಯಗಳು ಕೂಡ ಸಿಕ್ಕಿವೆ. ಈಗಲೂ ಕೂಡ ಅಂದು ಹಾನಿಗೊಳಗಾದ ಹಲವಾರು ದೇವಾಲಯಗಳನ್ನ ದೇಶದಲ್ಲಿ ಕಾಣಬಹುದು. ಮೊಘಲರು ಅದ್ರಲ್ಲೂ ಬಾಬರ್​ ನಾಶ ಮಾಡಿಸಿದ್ದ ಅನ್ನೋ ದೇವಾಲಯಗಳ ಪೈಕಿ ಅಯೋಧ್ಯೆಯ ರಾಮಮಂದಿರ ಕೂಡ ಒಂದು ಎನ್ನಲಾಗುತ್ತೆ. ಬಾಬರ್ ಭಾರತಕ್ಕೆ ದಂಡೆತ್ತಿ ಬಂದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಕೂಡ ಒಂದು ವಾರಗಳ ಕಾಲ ವಾಸ್ತವ್ಯ ಹೂಡಿದ್ನಂತೆ. 1528ರಲ್ಲಿ ಬಾಬರ್ ತನ್ನ ಸೇನಾಪತಿ ಮೀರ್​ ಬನ್ಕಿಗೆ ಅಯೋಧ್ಯೆ ಮೇಲೆ ದಾಳಿ ನಡೆಸುವಂತೆ ಸೂಚಿಸಿದ್ನಂತೆ. ಬಾಬರ್ ಆದೇಶದ ಮೇರೆಗೆ ಮೀರ್​ ಬನ್ಕಿ ಸಾವಿರಾರು ಸಂಖ್ಯೆಯ ಸೇನೆ ಜೊತೆಗೆ ಅಯೋಧ್ಯೆಗೆ ನುಗ್ತಾನೆ. ಕೆಲ ಇತಿಹಾಸದ ಪುಸ್ತಕಗಳಲ್ಲಿ ಉಲ್ಲೇಖವಾಗಿರುವಂತೆ ಮೀರ್ ಬನ್ಕಿ ಸೇನೆ ಅಯೋಧ್ಯೆ ಪ್ರವೇಶಿಸುತ್ತಲೇ ಎಂದಿನಂತೆ ಹಿಂದೂಗಳು ಅಯೋಧ್ಯೆಯಲ್ಲಿದ್ದ ಮಂದಿರಗಳ ರಕ್ಷಣೆಗೆ ಮುಂದಾಗ್ತಾರೆ.

ರಾಮಮಂದಿರವನ್ನ ಕೂಡ ಸುತ್ತುವರಿದ ರಕ್ಷಿಸೋಕೆ ಯತ್ನಿಸ್ತಾರೆ. ಆದ್ರೆ ಬಾಬರ್​ ಕಳುಹಿಸಿದ್ದ ಸೇನೆಯೇನು ಸಣ್ಣ ಸಂಖ್ಯೆಯಲ್ಲಿರಲಿಲ್ಲ. ಸಾವಿರಾರು ಸೈನಿಕರು ಅಯೋಧ್ಯೆಗೆ ನುಗ್ಗಿದ್ರು. ಇತ್ತ ಅಯೋಧ್ಯೆ ಜನರ ಬಳಿ ಶಸ್ತ್ರಾಸ್ತ್ರಗಳೂ ಇರಲಿಲ್ಲ. ಆದ್ರೂ ರಾಮಭಕ್ತರು ಸುಮಾರು 15 ದಿನಗಳ ಕಾಲ ಬಾಬರ್​ನ ಸೇನೆ ವಿರುದ್ಧ ಬರಿಗೈನಲ್ಲೇ ಹೋರಾಡಿದ್ರಂತೆ. ಈ ವೇಳೆ ಸಾವಿರಾರು ಹಿಂದೂಗಳ ಮಾರಣಹೋಮವೇ ನಡೆದಿತ್ತಂತೆ. ಬಳಿಕ ಬಾಬರ್ ಅಯೋಧ್ಯೆಯಲ್ಲಿ ಹೊಸ ನಿಯಮಾವಳಿಯನ್ನೇ ತಂದಿದ್ನಂತೆ. ತಮ್ಮ ರೂಲ್ಸ್​ನ್ನೇ ಜನರು ಅನುಸರಿಸಬೇಕು ಅನ್ನೋದು ಆತನ ಆದೇಶವಾಗಿತ್ತಂತೆ. ಅಯೋಧ್ಯೆಯನ್ನ ಹಿಡಿತಕ್ಕೆ ತೆಗೆದುಕೊಂಡ ಬಳಿಕ ರಾಮಮಂದಿರವನ್ನ ಕೆಡವೋಕೆ ಬಾಬರ್ ಸೂಚಿಸ್ತಾನಂತೆ. ಬಾಬರ್​​ನ ಆದೇಶದ ಮೇರೆಗೆ ಆತನ ಸೇನಾಪತಿ ಮೀರ್​ ಬನ್ಕಿಗೆ ತನ್ನ ಅಷ್ಟೂ ಸೈನಿಕರನ್ನ ಬಳಸಿ ರಾಮಮಂದಿರವನ್ನ ನಾಶಪಡಿಸ್ತಾನಂತೆ. ಮಂದಿರ ಕೆಡವೋಕೆ ಇಡೀ ಸೇನೆಯನ್ನೇ ಬಳಸಬೇಕಾದ ಪರಿಸ್ಥಿತಿ ಬಂದಿತ್ತಂತೆ. ಯಾಕಂದ್ರೆ ರಾಮಮಂದಿರ ಅಷ್ಟೊಂದು ಗಟ್ಟಿಯಾಗಿತ್ತು. ಕೆಡವೋದು ಸುಲಭ ಇರಲಿಲ್ಲ. ಮಂದಿರವನ್ನ ನಾಶ ಮಾಡಿದ ಮೇಲೆ ಅದೇ ಜಾಗದಲ್ಲಿ ಸ್ಥಳೀಯ ಮುಸ್ಲಿಮರಿಗೆ ಪ್ರಾರ್ಥನೆ ಮಾಡೋಕೆ ಮಸೀದಿ ನಿರ್ಮಾಣ ಮಾಡುವಂತೆ ಬಾಬರ್ ಸೂಚಿಸ್ತಾನಂತೆ. ಇದ್ರಂತೆ ಸೇನಾಪತಿ ಮೀರ್​ ಬನ್ಕಿ ಮಸೀದಿ ಕಟ್ಟಿಸ್ತಾನೆ. ಬಳಿಕ ಮಸೀದಿ ಬಾಬ್ರಿ ಮಸೀದಿ ಅಂತಾ ಕರೆಯಲಾಗುತ್ತೆ. ಸ್ನೇಹಿತರೇ..ಆದ್ರೆ ಇಲ್ಲಿ ಇನ್ನೊಂದು ವಾದ ಕೂಡ ಇದೆ. ರಾಮಮಂದಿರವನ್ನ ಕೆಡವೋಕೆ ಬಾಬರ್​ ಆದೇಶ ನೀಡಿಯೇ ಇರಲಿಲ್ವಂತೆ. ಬಾಬರ್​ ಯಾವತ್ತೂ ಅಯೋಧ್ಯೆಗೆ ಕಾಲೇ ಇಟ್ಟಿಲ್ಲ. ಮೀರ್​ ಬನ್ಕಿ ಕೂಡ ಅಯೋಧ್ಯೆಗೆ ಹೋಗಿಲ್ಲ. ರಾಮಮಂದಿರವನ್ನ ಕೆಡವಿದ್ದು ಔರಂಗಜೇಬ್. ಮಥುರಾ, ಕಾಶಿಯಲ್ಲಿ ದೇವಾಲಯಗಳನ್ನ ನಾಶ ಮಾಡಿದಂತೆ ರಾಮಮಂದಿರದ ಮೇಲೆ ಔರಂಗಜೇಬ್ ದಾಳಿ ನಡೆಸಿದ್ದ ಅನ್ನೋದಾಗಿ ಕೆಲ ಇತಿಹಾಸದ ಪುಸ್ತಕಗಳಲ್ಲಿ ಬರೆಯಲಾಗಿದೆ. ಬಾಬ್ರಿ ಮಸೀದಿ ವಿವಾದದ ವಿಚಾರಣೆ ವೇಳೆ ಈ ಬಗ್ಗೆ ಸುಪ್ರೀಂಕೋರ್ಟ್​​ನಲ್ಲಿ ಕೂಡ ಪ್ರಸ್ತಾಪವಾಗಿತ್ತು. ಹೀಗಾಗಿ ನಿಜವಾಗಿಯೂ ರಾಮಮಂದಿರವನ್ನ ಕೆಡವಿದ್ದು ಯಾರು ಅನ್ನೋ ಬಗ್ಗೆ ಇನ್ನೂ ಕೂಡ ಒಂದಷ್ಟು ಗೊಂದಲಗಳಿವೆ. ಆದ್ರೆ ಬಹುತೇಕ ಇತಿಹಾಸಕಾರರು ಬಾಬರ್​ ಕಾಲದಲ್ಲೇ ರಾಮಮಂದಿರ ನೆಲಸಮವಾಗಿದೆ ಅಂತಾ ಬರೆದುಕೊಂಡಿದ್ದಾರೆ. ಹಾಗೆಯೇ ರಾಮಮಂದಿರ ಕೆಡವುಂತೆಯಾಗಲಿ, ಬಾಬ್ರಿ ಮಸೀದಿ ನಿರ್ಮಾಣ ಮಾಡುವಂತೆಯೇ ಆಗಲಿ ಬಾಬರ್​ ಯಾವುದೇ ಆದೇಶ ನೀಡಿರಲಿಲ್ಲ. ಇದ್ರಲ್ಲಿ ಆತನದ್ದು ಯಾವುದೇ ಪಾತ್ರ ಇಲ್ಲ. ಇವೆಲ್ಲವನ್ನೂ ಆತನ ಸೇನಾಧಿಪತಿ ಮೀರ್​ ಬನ್ಕಿಯೇ ಮಾಡಿಸಿದ್ದ ಅಂತಾನೂ ಹೇಳಲಾಗುತ್ತೆ. ಇಲ್ಲಿ ಇದ್ಕೆ ಇನ್ನೊಂದು ಟ್ವಿಸ್ಟ್ ಕೂಡ ಇದೆ. ಮೀರ್ ಬನ್ಕಿ ಅನ್ನೋ ಸೇನಾಧಿಪತಿಯೇ ಇರಲಿಲ್ಲ. 1813-1814ರ ಅವಧಿಯಲ್ಲಿ ಬ್ರಿಟಿಷ್ ಸರ್ವೇಯರ್​ಗೆ ನಕಲಿ ಶಾಸನ ರೂಪಿಸೋಕೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ ಮೀರ್ ಬನ್ಕಿ ಅನ್ನೋ ಕ್ಯಾರೆಕ್ಟರ್​​ನ್ನ ಸೃಷ್ಟಿ ಮಾಡಲಾಗುತ್ತೆ. ಅಸಲಿಗೆ ಮೊಘಲರ ಕಮಾಂಡರ್ ಆಗಿದ್ದ ಬಖಿ ತಾಷ್ಕಂಡಿ ಎಂಬಾತ ರಾಮಮಂದಿರ ಕೆಡವಿ, ಬಾಬ್ರಿ ಮಸೀದಿಯನ್ನ ಕಟ್ಟಿಸಿದ್ದ ಅಂತಾ ಕಿಶೋರ್ ಕುನಾಲ್ ಅನ್ನೋ ಇತಿಹಾಸಕಾರರೊಬ್ಬರು ಬರೆದುಕೊಂಡಿದ್ದಾರೆ.

Shantha Kumari