ಪಾಕ್ ಕ್ರಿಕೆಟಿಗರ ಕಳಪೆ ಪ್ರದರ್ಶನ – ಸ್ಯಾಲರಿಗೆ ಕತ್ತರಿ ಹಾಕೋಕೆ ಮುಂದಾದ ಪಿಸಿಬಿ

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬ್ಯಾಕ್ ಟು ಬ್ಯಾಕ್ ಡಿಸಪಾಯಿಂಟ್ ಆಗ್ತಿದೆ. ಟಿ-20ಗೆ ಕಳ್ಸಿದ್ರೂ ಗೆಲ್ತಿಲ್ಲ. ಏಕದಿನ, ಟೆಸ್ಟ್ ಮಾದರಿಯಲ್ಲೂ ಆಡ್ತಿಲ್ಲ. ಯಾರಿಂದಲೂ ಹೋಪ್ಸ್ ಇಟ್ಕೊಳ್ಳುವಂತ ಪರ್ಫಾಮೆನ್ಸ್ ಬರ್ತಿಲ್ಲ. ಇದ್ರಿಂದಾಗಿ ವಿಶ್ವ ಕ್ರಿಕೆಟ್ನಲ್ಲಿ ಬಾರೀ ಮುಜುಗರಜಕ್ಕೀಡಾಗಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳೋಕೆ ಹೊರಟಿರೋ ಪಿಸಿಬಿ ಪರ್ಫಾಮೆನ್ಸ್ ಪೆನಾಲ್ಟಿ ಹಾಕೋಕೆ ಮುಂದಾಗಿದೆ. ಆಟಗಾರರ ಐಸಿಸಿ ಆದಾಯದ ಪಾಲನ್ನೂ ರದ್ದುಗೊಳಿಸಿದೆ.
ಇದನ್ನೂ ಓದಿ : ಏಷ್ಯಾಕಪ್ ನಲ್ಲಿ ಬ್ಯಾಟಿಂಗ್ & ಬೌಲಿಂಗ್ ನಲ್ಲಿ ಲಂಕನ್ನರ ಮೇಲುಗೈ – ಕೊಹ್ಲಿ & ಭುವಿ ಬರೆದ ದಾಖಲೆಗಳೇನು?
ಪಾಕಿಸ್ತಾನ ಪ್ರಸ್ತುತ ಮೂರೂ ಫಾರ್ಮೆಟ್ನಲ್ಲೂ ಕಳಪೆ ಪ್ರದರ್ಶನ ನೀಡಿದೆ. ಇದೇ ಕಾರಣಕ್ಕೆ ರಾಷ್ಟ್ರೀಯ ತಂಡದ ಆಟಗಾರರಿಗೆ ಕಠಿಣ ಆರ್ಥಿಕ ದಂಡ ವಿಧಿಸಲು ಸಿದ್ಧತೆ ನಡೀತಿದೆ. ಈ ವರ್ಷ ಪಾಕಿಸ್ತಾನ ಮೂರು ಟೆಸ್ಟ್ ಪಂದ್ಯಗಳನ್ನ ಆಡಿದ್ದು ಅದ್ರಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ಮಾತ್ರವೇ ಗೆಲುವು ಸಾಧಿಸಿದೆ. ಹಾಗೇ 11 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದು ಈ ಪೈಕಿ ಕೇವಲ ಎರಡು ಏಕದಿನ ಗೆಲುವುಗಳನ್ನು ಮಾತ್ರ ಕಂಡಿದೆ. ಅದ್ರಲ್ಲೂ ಬಾಂಗ್ಲಾದೇಶ ವಿರುದ್ಧ ಟಿ20ಐ ಸರಣಿ ಸೋಲು ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಐತಿಹಾಸಿಕ ಸೋಲು ಕಂಡಿದೆ. ಇನ್ನು ಟಿ-20ಯಲ್ಲೂ ಕೂಡ ಹೇಳಿಕೊಳ್ಳುವಂತ ರಿಸಲ್ಟ್ ಬಂದಿಲ್ಲ. ಪಾಕಿಸ್ತಾನ ಈ ವರ್ಷ ಆಡಿರುವ 14 ಟಿ20 ಪಂದ್ಯಗಳಲ್ಲಿ ಏಳರಲ್ಲಿ ಮಾತ್ರವೇ ಗೆಲುವು ಕಂಡಿದೆ. ಅದ್ರಲ್ಲೂ ಇತ್ತೀಚೆಗೆ ವಿಂಡೀಸ್ ವಿರುದ್ಧ 202 ರನ್ಗಳ ಬೃಹತ್ ಅಂತರದಲ್ಲಿ ಸೋತಿದೆ. 1991ರ ನಂತರ ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ ಗೆದ್ದಿರುವ ಮೊದಲ ದ್ವಿಪಕ್ಷೀಯ ಏಕದಿನ ಸರಣಿ ಇದು.
ತಂಡದ ಕಳಪೆ ಪ್ರದರ್ಶನದಿಂದಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಟಗಾರರ ವೇತನಕ್ಕೆ ಕತ್ತರಿ ಹಾಕೋಕೆ ಹೊರಟಿದೆ. ಹಾಗೇ ಸೆಂಟ್ರಲ್ ಒಪ್ಪಂದದ ಭಾಗವನ್ನು ತೆಗೆದುಹಾಕುವ ಸಾಧ್ಯತೆಯಿದೆ. ಈ ಒಪ್ಪಂದ ಐಸಿಸಿಯ ಆದಾಯದ ಪಾಲಿನ ಶೇ 3 ರಷ್ಟು ಭಾಗವನ್ನೂ ಕಡಿತಗೊಳಿಸಲಿದೆ. ಐಸಿಸಿ ಪಾಲನ್ನು ಕಡಿತಗೊಳಿಸಿರುವುದರಿಂದ ಬೇಸಿಕ್ ಸಂಭಾವನೆ ಮಾತ್ರವೇ ಪಡೀತಾರೆ.
ಪಾಕ್ ಆಟಗಾರರ ಜೇಬಿಗೆ ಕತ್ತರಿ!
ಬಾಬರ್ ಅಜಮ್ , ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ರಿಜ್ವಾನ್
ಬಾಬರ್ ಮತ್ತು ರಿಜ್ವಾನ್ ಎ ವರ್ಗದ ಆಟಗಾರರಾಗಿದ್ದು 31.51% ರಷ್ಟು ಕಡಿತ
ಬಿ ವರ್ಗಕ್ಕೆ ಸೇರಿದ ಶಾಹೀನ್ ಅವರ ಸಂಬಳದಲ್ಲಿ 33.33% ರಷ್ಟು ಇಳಿಕೆ
ಪಾಕಿಸ್ತಾನ ವರ್ಸಸ್ ವೆಸ್ಟ್ ಇಂಡೀಸ್ ಸರಣಿಯಲ್ಲಿ, ಬಾಬರ್ ಕೇವಲ 56 ರನ್
ರಿಜ್ವಾನ್ ಕೂಡ ಒಂದು ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ್ರೆ ಮತ್ತೊಂದ್ರಲ್ಲಿ 69 ರನ್
ಶಾಹೀನ್ ಶಾ ಅಫ್ರಿದಿ ಕೂಡ ತಮ್ಮ ಬೌಲಿಂಗ್ ಪ್ರದರ್ಶನದಲ್ಲಿ ಸದ್ದು ಮಾಡಲಿಲ್ಲ
ಮೂರು ಪಂದ್ಯಗಳಲ್ಲಿ ದುಬಾರಿ ಸ್ಪೆಲ್‌ಗಳೊಂದಿಗೆ 6 ವಿಕೆಟ್ ಗಳನ್ನು ಮಾತ್ರ

ನೋಡಿರಿ

