ಪಾಕ್ ಹೀರೋ ಬಾಬರ್ ಅಜಮ್‌ಗೆ ಪಿಸಿಬಿ ಶಾಕ್ – ಪಾಕಿಸ್ತಾನ ತಂಡದಿಂದಲೇ ಬಾಬರ್‌ಗೆ ಗೇಟ್‌ಪಾಸ್

ಟಿ20 ವಿಶ್ವಕಪ್ ಟೂರ್ನಿಯಿಂದ ಹೀನಾಯವಾಗಿ ಪಾಕಿಸ್ತಾನ ಹೊರಬಿದ್ದಿದ್ದೇ ಬಿದ್ದಿದ್ದು. ಪಾಕಿಸ್ತಾನ ಕ್ರಿಕೆಟಿಗರ ಬ್ಯಾಟ್ ಟೈಮ್ ಕೂಡಾ ಅಲ್ಲಿದಂಲೇ ಶುರುವಾಗಿದೆ. ಗೆದ್ದಾಗ ಹೊತ್ತು ಮೆರೆಯುವವರು ಸೋತಾಗ ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತೇವೆ ಅನ್ನೋದನ್ನು ಪಾಕಿಸ್ತಾನ ತೋರಿಸಿಕೊಟ್ಟಿದೆ. ಒಬ್ಬೊಬ್ಬ ಆಟಗಾರನಿಗೂ ತಲಾ 50 ಲಕ್ಷ ರೂಪಾಯಿ ದಂಡ ವಿಧಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ಸ್ಟಾರ್ ಆಟಗಾರರಿಗೆ ತಂಡದಿಂದಲೇ ಗೇಟ್ ಪಾಸ್ ಕೊಟ್ಟಿದೆ.
ಇದನ್ನೂ ಓದಿ:ಹರಿಣಗಳ ಕಿವಿ ಹಿಂಡಿದ ಕಿವೀಸ್ ಪಡೆ – ಸೌತ್ ಆಫ್ರಿಕಾಕ್ಕೆ ಮತ್ತೆ ಸಿಕ್ತು ಚೋಕರ್ಸ್ ಹಣೆಪಟ್ಟಿ
ಪಾಕಿಸ್ತಾನ ದೇಶದ ಹಣೆಬರಹ ಮೊದಲೇ ಕೆಟ್ಟು ಹೋಗಿದೆ. ಪಾಪ.. ಕ್ರಿಕೆಟಿಗರನ್ನು ಕೂಡಾ ಪಾಕಿಸ್ತಾನ ಬಿಡುತ್ತಿಲ್ಲ. ಟಿ20 ವಿಶ್ವಕಪ್ ಸೋಲಿನ ಬೆನ್ನಲ್ಲೇ ಬಾಬರ್ ಅಜಮ್ ಸೇರಿದಂತೆ ಸ್ಟಾರ್ ಕ್ರಿಕೆಟಿಗರಿಗೆ ತಂಡದಿಂದ ಗೇಟ್ ಪಾಸ್ ಕೊಟ್ಟಿದೆ. ಇದೀಗ ಪಿಸಿಬಿ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಿದೆ. ಮಾರ್ಚ್ 11 ರಿಂದ 15 ರವರೆಗೆ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಶಾಹೀನ್ ಅಫ್ರಿದಿ ಪಾಕಿಸ್ತಾನ ತಂಡದ ನಾಯಕರಾಗಿದ್ದಾರೆ. ಶಾಹೀನ್ ಅಫ್ರಿದಿ ನೇತೃತ್ವದಲ್ಲಿ 15 ಸದಸ್ಯರ ಪಾಕಿಸ್ತಾನ ತಂಡವನ್ನು ಆಯ್ಕೆ ಮಾಡಲಾಗಿದೆ. ತಂಡದಲ್ಲಿ ಆರು ಪ್ರಮುಖ ಬದಲಾವಣೆಯಾಗಿದೆ. ಆರು ಆಟಗಾರರು ಹೊಸದಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಬಾಬರ್ ಅಜಮ್ ಮತ್ತು ಸೈಮ್ ಅಯೂಬ್ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿದೆ.
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಅಬ್ದುಲ್ ಸಮದ್ , ಮಾಜ್ ಸದಾಕತ್, ಮೊಹಮ್ಮದ್ ಘಾಜಿ ಘೋರಿ, ಸಾದ್ ಮಸೂದ್, ಸಾಹಿಬ್ಜಾದಾ ಫರ್ಹಾನ್ ಮತ್ತು ಶಮಿಲ್ ಹುಸೇನ್ ಆಯ್ಕೆಯಾಗಿದ್ದಾರೆ. ಇವರಲ್ಲಿ, ಸಮದ್, ಸದಾಕತ್, ಮಸೂದ್ ಮತ್ತು ಶಮಿಲ್ ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಸರಣಿಯ ಭಾಗವಾಗಿದ್ದರು.
ಟಿ20 ಮಾದರಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಬಾಬರ್ ಅವರನ್ನು ಇತ್ತೀಚೆಗೆ ಕೈಬಿಡಲಾಯಿತು., 2025 ರಲ್ಲಿ ಅವರ ಏಕದಿನ ಪ್ರದರ್ಶನ ಉತ್ತಮವಾಗಿತ್ತು. 17 ಏಕದಿನ ಪಂದ್ಯಗಳಲ್ಲಿ, ಅವರು 77.16 ರ ಸರಾಸರಿಯಲ್ಲಿ 544 ರನ್ ಗಳಿಸಿದರು. ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದರು. ಏಕದಿನ ಮಾದರಿಯಲ್ಲಿ ನಂಬರ್ ಒನ್ ಬ್ಯಾಟರ್ ಆಗಿದ್ದರು. ಪ್ರಸ್ತುತ ಏಕದಿನ ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಇದರ ಹೊರತಾಗಿಯೂ, ಬಾಬರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ನೋಡಿರಿ

