PAK ಕ್ರಿಕೆಟ್ ನಲ್ಲಿ ಅಲ್ಲೋಲ ಕಲ್ಲೋಲ – ತ್ರಿವಳಿ ಸ್ಟಾರ್ಸ್ ಗೆ PCB ಗೇಟ್ ಪಾಸ್
ಬಾಬರ್, ರಿಜ್ವಾನ್, ಆಫ್ರಿದಿ ಯುಗಾಂತ್ಯ?

2026 ರಲ್ಲಿ ಐಸಿಸಿ ಟಿ20 ವಿಶ್ವಕಪ್ ಆಯೋಜನೆ ಮಾಡಲಾಗುತ್ತೆ. ಈ ಚುಟುಕು ಕ್ರಿಕೆಟ್ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯವಹಿಸಲಿದೆ. ಅಂದರೆ ಬಹುತೇಕ ಪಂದ್ಯಗಳು ಭಾರತದಲ್ಲಿ ನಡೆದರೆ, ಕೆಲ ಮ್ಯಾಚ್ಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಐಸಿಸಿಯ ಮುಂದಿನ ಟೂರ್ನಿಯಲ್ಲಿ ಒಟ್ಟು 20 ಕಣಕ್ಕಿಳಿಯಲಿವೆ. ಈಗಾಗಲೇ 12 ತಂಡಗಳು ಟಿ20 ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದ್ದು, ಉಳಿದ 8 ತಂಡಗಳನ್ನು ಅರ್ಹತಾ ಸುತ್ತಿನ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ ಸೆಲೆಕ್ಟ್ ಆಗಿರೋ ಟೀಮ್ಗಳು ಯಾವುವು ಅಂದ್ರೆ ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ್, ಇಂಗ್ಲೆಂಡ್, ಸೌತ್ ಆಫ್ರಿಕಾ, ಯುಎಸ್ಎ, ವೆಸ್ಟ್ ಇಂಡೀಸ್, ನ್ಯೂಝಿಲೆಂಡ್, ಪಾಕಿಸ್ತಾನ್ ಹಾಗೇ ಐರ್ಲೆಂಡ್ ತಂಡಗಳು ಚಾನ್ಸ್ ಪಡೆದಿದೆ. ಸೋ ಈ ಟೂರ್ನಿಯಲ್ಲಿ ಐಸಿಸಿ ಟೈಟಲ್ ಗೆಲ್ಲೋಕೆ ಟಾರ್ಗೆಟ್ ಇಟ್ಟಿರೋ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈಗಿನಿಂದಲೇ ಕೆಲ ಆಟಗಾರರಿಗೆ ಗೇಟ್ ಪಾಸ್ ಕೊಡ್ತಿದೆ.
ಇದನ್ನೂ ಓದಿ : ಕ್ಯಾಪ್ಟನ್ಸಿ ಬೆನ್ನಲ್ಲೇ ದುರಹಂಕಾರಿ ಗಿಲ್ – ಬ್ಯಾಟ್ ಮೇಲೆ PRINCE ಬೇಕಿತ್ತಾ?
2026 ರಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಪಾಕಿಸ್ತಾನ ಕ್ರಿಕೆಟ್ ಟೀಂ ಕೂಡ ಭಾಗವಹಿಸಲಿದೆ. ಆದ್ರೆ ತಂಡದಲ್ಲಿ ಸ್ಟಾರ್ ಆಟಗಾರರಾದ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಅಫ್ರಿದಿ ಅವ್ರನ್ನ ಕೈಬಿಡೋ ಬಗ್ಗೆ ಚರ್ಚೆಗಳು ನಡೀತಿವೆ. ಪಾಕ್ ಪಾಲಿಗೆ ಇವ್ರು ಬಿಗ್ ನೇಮ್ ಆಗಿದ್ರೂ ಇತ್ತೀಚಿನ ಅವ್ರ ಪ್ರದರ್ಶನಗಳು ತೀರಾ ಕಳಪೆಯಾಗಿವೆ. ಅಲ್ದೇ ಪಾಕ್ ಟೀಂ ಸಾಲು ಸಾಲು ಪಂದ್ಯಗಳನ್ನ ಸೋತಿದ್ದು ಇದು ಕ್ರಿಕೆಟ್ ತಂಡದ ಜಾಗತಿಕ ಅಪಹಾಸ್ಯಕ್ಕೆ ಕಾರಣವಾಗಿದೆ. ಹೀಗಾಗಿ ಪಿಸಿಬಿ ವಿಶೇಷವಾಗಿ ಟಿ20ಐಗಳಲ್ಲಿ ಬದಲಾವಣೆ ಪರ್ವಕ್ಕೆ ಮುನ್ನುಡಿ ಬರೆದಿದೆ.
ತ್ರಿವಳಿ ಸ್ಟಾರ್ಸ್ ಗೆ ಗೇಟ್ ಪಾಸ್!
ಪಿಸಿಬಿ ಆಯ್ಕೆದಾರರು ಹಾಗೇ ಮುಖ್ಯ ಕೋಚ್ ಮೈಕ್ ಹೆಸ್ಸನ್
ಬಾಬರ್, ರಿಜ್ವಾನ್ ಮತ್ತು ಶಾಹೀನ್ ಅವರಿಗೆ ಗೇಟ್ ಪಾಸ್
ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ವಿರುದ್ಧದ ಟಿ20ಐಗಳಲ್ಲಿ ಡ್ರಾಪ್
ಟೆಸ್ಟ್ ಮತ್ತು ಏಕದಿನ ಪಂದ್ಯಗಳತ್ತ ಗಮನ ಹರಿಸಿ ಅಂತಾ ಸಲಹೆ
ನ್ಯೂಜಿಲೆಂಡ್ ಪ್ರವಾಸದಿಂದ ಬಾಬರ್ ಮತ್ತು ರಿಜ್ವಾನ್ ರನ್ನು ಕೈಬಿಡಲಾಗಿತ್ತು
ಆಸ್ಟ್ರೇಲಿಯಾ, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ಸರಣಿ
ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಶಾಹೀನ್ ಅಫ್ರಿದಿ ಅವರನ್ನು ಡ್ರಾಪ್
ಜುಲೈ ತಿಂಗಳ ಕೊನೆಯ ವಾರದಲ್ಲಿ 3 ಟಿ20ಐ ಮತ್ತು ಮೂರು ಏಕದಿನ ಪಂದ್ಯ
ಮೂರು ಟಿ20ಐ ಸರಣಿಯನ್ನು ಆಡಲು ಬಾಂಗ್ಲಾದೇಶಕ್ಕೆ ಪ್ರವಾಸ
ಬಾಬರ್, ರಿಜ್ವಾನ್ ಮತ್ತು ಶಾಹೀನ್ ಆಯ್ಕೆಯಾಗೋ ಸಾಧ್ಯತೆ ಇಲ್ಲ
ಸದ್ಯ 2026ರ ಟಿ-20 ವಿಶ್ವಕಪ್ ಕೆಲ ತಿಂಗಳುಗಷ್ಟೇ ಬಾಕಿ ಇದೆ. ಪಾಕ್ ಕ್ರಿಕೆಟ್ ತಂಡದಲ್ಲಿನ ಈ ಬದಲಾವಣೆಗೆ ಅಲ್ಲಿನ ಕೆಲ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭವಿಷ್ಯಕ್ಕಾಗಿ ತಂಡವನ್ನು ಕಟ್ಟಲು ಉತ್ತಮ ಹೆಜ್ಜೆ ಎಂದಿದ್ದಾರೆ. ಆದರೆ ಇನ್ನೊಂದಷ್ಟು ಅಭಿಮಾನಿಗಳು, ಈ ಮೂವರನ್ನು ಒಟ್ಟಿಗೆ ಕೈಬಿಡುವುದರಿಂದ ತಂಡಕ್ಕೆ ಅನುಭವದ ಕೊರತೆ ಉಂಟಾಗುತ್ತದೆ ಎಂದಿದ್ದಾರೆ. ಪಾಕ್ನ ನೂತನ ಕೋಚ್ ಮೈಕ್ ಹೆಸ್ಸನ್ ಯುವ ಆಟಗಾರರಿಗೆ ಹೆಚ್ಚು ಚಾನ್ಸ್ ಕೊಡೋಕೆ ಮುಂದಾಗಿದ್ದಾರೆ. ಅಲ್ದೇ ಡಿಸೆಂಬರ್ 28 ರಿಂದ ಜನವರಿ ಅಂತ್ಯದವರೆಗೆ ಬಿಗ್ ಬ್ಯಾಷ್‌ನಲ್ಲಿ ಆಡಲು ಬಾಬರ್ ಮತ್ತು ಇತರ ಕೆಲವು ಆಟಗಾರರಿಗೆ ಪಾಕ್ ಕ್ರಿಕೆಟ್ ಮಂಡಳಿಯು NOC ನೀಡಿದೆ. ಸೋ ಇದನ್ನೆಲ್ಲಾ ನೋಡಿದ್ರೆ ಈ ಮೂವರನ್ನೂ ಟಿ-20ಐ ನಿಂದ ಕೈಬಿಟ್ಟಂತೆಯೇ ಲೆಕ್ಕ.

ನೋಡಿರಿ

