ನಿಜವಾಯ್ತು ವಂಗಾ ಯುದ್ಧ ಭವಿಷ್ಯ!? ವಿಶ್ವ ವಿನಾಶ.. ಬರಡಾಗುತ್ತಾ ಭೂಮಿ!?
ಭಾರತಕ್ಕೆ ಬಾಬಾ ಭವಿಷ್ಯ ಭಯ!

ಬಲ್ಗೇರಿಯಾದ ಅತೀಂದ್ರಿಯ ವ್ಯಕ್ತಿ ಬಾಬಾ ವಂಗಾ ಭವಿಷ್ಯಕ್ಕೆ ಇಡೀ ಜಗತ್ತು ಹೆದರುತ್ತೆ. 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ ಇವರು 12ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡ್ರು ಭೂಮಿ ಮೇಲೆ ನಡೆಯುವ ದುರಂತಗಳ ಕುರಿತು ಭವಿಷ್ಯ ನುಡಿಯುತ್ತಾರೆ. ಇವರು ಹೇಳಿರುವ ಬಹುತೇಕ ಎಲ್ಲಾ ಭವಿಷ್ಯವಾಣಿಗಳು ನಿಜವಾಗಿದೆ ಎಂದು ಜನರು ಇಂದಿಗೂ ನಂಬಿದ್ದಾರೆ. 1996ರಲ್ಲಿ ಬಾಬಾ ವಂಗಾ ಮರಣ ಹೊಂದಿದರೂ 5079ರ ವರೆಗೆ ಯಾವ ವರ್ಷ ಏನೆಲ್ಲಾ ನಡೆಯಲಿದೆ ಎನ್ನುವ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಅಮೆರಿಕಾದ ಮೇಲಿನ 9/11 ದಾಳಿ, ರಷ್ಯಾದ ಕುರ್ಸ್ಕ್ ಜಲಾಂತರ್ಗಾಮಿ ಅಪಘಾತ, ಇಂದಿರಾ ಗಾಂಧಿ ಹತ್ಯೆ, ಒಬಾಮಾ ಅಧ್ಯಕ್ಷರಾಗುವುದು ಸೇರಿ ಕೊರೊನಾ ದುರಂತಗಳನ್ನು ಸರಿಯಾಗಿ ಊಹಿಸಿದ್ದರು. ಹೀಗಾಗಿ ಅವರ ಭವಿಷ್ಯವಾಣಿಗಳ ಕುರಿತಾಗಿ ಈಗ ಎಲ್ಲರ ಕುತೂಹಲ ಮೂಡಿಸಿದೆ. ಅಲ್ಲದೇ ಈಗ 3ನೇ ಮಹಾಯುದ್ಧದ ಭವಿಷ್ಯ ಕೂಡ ನಿಜವಾಗುತ್ತಿದೆ. 2026ರಲ್ಲಿ ಆಂತರಿಕ ಯುದ್ಧ, ಮಧ್ಯಪ್ರಾಚ್ಯ ಕುರಿತಾಗಿ ಬಾಬಾ ವಂಗಾ ನುಡಿದಿರುವ ಭವಿಷ್ಯವೇನು? ಅನ್ನೋದ್ದನ್ನ ನೋಡೋಣ..
ಇದನ್ನೂ ಓದಿ: ಸೋಮವಾರ ಪಠಿಸಬೇಕಾದ ಆ ಪುಟ್ಟ ಶಿವ ಮಂತ್ರ ಯಾವುದು.? – ಪ್ರಯೋಜನಗಳೇನು ಗೊತ್ತಾ?
ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ದಾಳಿ ನಡೆಸುತ್ತಿದೆ. ಆದ್ರೆ ಭಯಾನಕ ವಿಷ್ಯ ಏನಪ್ಪ ಅಂದ್ರೆ, ಈ ಯುದ್ಧದ ಬಗ್ಗೆ ಬಾಬಾ ವಾಂಗ ಮೊದಲೇ ಭವಿಷ್ಯವನ್ನ ನುಡಿದಿದ್ರು. 2026 ರಲ್ಲಿ ಹೀಗೆಲ್ಲಾ ಆಗುತ್ತೆ ಅನ್ನೋನ್ನ ಹೇಳಿದ್ರು. ಎಲ್ಲವನ್ನ ತಾಳೆ ಹಾಕಿ ನೋಡಿದ್ರೆ, ಬಾಬಾ ವಂಗಾ 2026ರ ಭವಿಷ್ಯವಾಣಿ ನಿಜವಾಗಿದೆ ಎಂದು ಹೇಳಲಾಗುತ್ತಿದೆ.
ಅಂದಹಾಗೇ ಬಲ್ಗೇರಿಯಾದ ಅಂಧ ಬಾಬಾ ವಂಗಾ ಅವರು ತಮ್ಮ ಭವಿಷ್ಯವಾಣಿಯಲ್ಲಿ ಮೂರನೇ ಮಹಾಯುದ್ಧ 2026 ರಲ್ಲಿ ಪ್ರಾರಂಭವಾಗಬಹುದು ಎಂದು ಹೇಳಿಕೊಂಡಿದ್ದರು. 2026 ಯುದ್ಧ ಮತ್ತು ವಿನಾಶದ ವರ್ಷವಾಗಲಿದೆ ಎಂದು ಅವರು ಭವಿಷ್ಯ ನುಡಿದರು. ಪ್ರಪಂಚದ ಪೂರ್ವ ಪ್ರದೇಶದಲ್ಲಿ ಒಂದು ದೊಡ್ಡ ಯುದ್ಧ ಭುಗಿಲೆದ್ದಿದ್ದು, ಅದು ವಿನಾಶಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಈ ಯುದ್ಧ ಕ್ರಮೇಣ ಪ್ರಪಂಚದಾದ್ಯಂತ ಹರಡುತ್ತದೆ ಎಂದು ಅವರು ಹೇಳಿದ್ದರು. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಯ ನಂತರ, ಬಾಬಾ ವಂಗಾ ಅವರ ಭವಿಷ್ಯವಾಣಿ ನಿಜವಾಗಿದೆ ಎಂದು ಹೇಳಲಾಗುತ್ತಿದೆ. ಈ ದೇಶಗಳ ನಡುವಿನ ಯುದ್ಧವು ಪ್ರಪಂಚದಾದ್ಯಂತ ಜನರನ್ನು ಭಯಭೀತಗೊಳಿಸಿದೆ.
ಮಧ್ಯಪ್ರಾಚ್ಯದಲ್ಲಿ ಒಂದು ದೊಡ್ಡ ಯುದ್ಧ ಆರಂಭವಾಗುತ್ತದೆ, ಅದು ಕ್ರಮೇಣ ಇಡೀ ಜಗತ್ತನ್ನೇ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ ಎಂದು ವಂಗಾ ಹೇಳಿದ್ರು. ಅದರಂತೆ ಈ ಯುದ್ಧದಿಂದ ಇಡೀ ಜಗತ್ತು ಸಂಕಷ್ಟ ಎದುರಿಸುತ್ತಿದೆ. ಭಾರತಕ್ಕೂ ಇದರ ಎಫೆಕ್ಟ್ ತಟ್ಟಿದೆ. ಗ್ಯಾಸ್ ಸಿಗದೆ ಒದ್ದಾಡುತ್ತತಿದ್ದಾರೆ. ಮಾರ್ಚ್-ಏಪ್ರಿಲ್ 2026 ರಲ್ಲಿ ಭೀಕರ ಯುದ್ಧ ಪ್ರಾರಂಭವಾಗಬಹುದು ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದರು. ಅವರು ಹೇಳಿದಂತೆ ಆಗಿದೆ. ಈ ಯುದ್ಧದ ನಂತರ, ಬಾಬಾ ವಂಗಾ ಅವರ ಮತ್ತೊಂದು ಭವಿಷ್ಯವಾಣಿಯಿಂದ ಜನರು ಹೆಚ್ಚು ಹೆಚ್ಚು ಭಯಭೀತರಾಗುತ್ತಿದ್ದಾರೆ, ಅದರಲ್ಲಿ ಅವರು ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಂತಹ ಪ್ರಬಲ ದೇಶಗಳು ಯುದ್ಧದಲ್ಲಿ ಪರಸ್ಪರ ಎದುರಿಸಬಹುದು ಎಂದು ಹೇಳಿದ್ದಾರೆ. ಯುದ್ಧವು ಪ್ರಪಂಚದ ಪಶ್ಚಿಮ ಭಾಗದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಮತ್ತು ಯುರೋಪ್ ಹೆಚ್ಚು ಹಾನಿಗೊಳಗಾಗುತ್ತದೆ ಎಂದು ಬಾಬಾ ವಂಗಾ ಹೇಳಿದ್ದಾರೆ. ಈ ವಿನಾಶವು ಯುರೋಪ್ ಅನ್ನು ಬರಡು ಭೂಮಿಯಾಗಿ ಬಿಡುತ್ತದೆ ಎಂದು ಅವರು ಹೇಳಿದ್ದಾರೆ. ರಷ್ಯಾ ಪ್ರಮುಖ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವ ಬಗ್ಗೆಯೂ ಅವರು ಮಾತನಾಡಿದರು. ದೇಶದಲ್ಲಿ ಆಗುತ್ತಿರೋ ಬೆಳವಣಿಗೆಯನ್ನ ಗಮನಿಸಿದ್ರೆ ಬಾಬಾ ವಂಗಾ ಅವರ ಭವಿಷ್ಯ ನಿಜವಾಗುತ್ತಿದೆ ಅನಿಸುತ್ತಿದೆ. ಆದ್ರೆ ಈ ಭವಿಷ್ಯ ಸುಳ್ಳಾಗಿ ಜನರ ನೆಮ್ಮದಿಯಿಂದ ಇರಲಿ ಅನ್ನೋದೆ ಎಲ್ಲರ ಆಶಯ.

ನೋಡಿರಿ

