2025ರಲ್ಲಿ ನಡೆಯೋದೇನು? – ಬಾಬಾ ವಂಗಾ, ನಾಸ್ಟ್ರಾಡಾಮಸ್‌ ಭಯಾನಕ ಭವಿಷ್ಯ!

2025ರಲ್ಲಿ ನಡೆಯೋದೇನು? – ಬಾಬಾ ವಂಗಾ, ನಾಸ್ಟ್ರಾಡಾಮಸ್‌ ಭಯಾನಕ ಭವಿಷ್ಯ!

ನಾವು 2025ಕ್ಕೆ ಎಂಟ್ರಿಕೊಡುತ್ತಿದ್ದೇವೆ.. ಪ್ರತಿ ಹೊಸ ಕ್ಯಾಲೆಂಡ್ ಚೇಂಜ್ ಆದ ಹಾಗೇ ನಮ್ಮ ಭವಿಷ್ಯ ಚೇಂಜ್ ಆಗುತ್ತಾ ಅಂತಾ ಎಲ್ಲಾರು ಕಾಯ್ತಾ ಇರ್ತಾರೆ.. ಸಾಕಷ್ಟು ಜನ ಭವಿಷ್ಯವನ್ನ ನಂಬುತ್ತಾರೆ.. ನಮ್ಮದು ಹಿಂದೂ ರಾಷ್ಟ್ರ..  ನಾವೆಲ್ಲಾ ನಂಬೋಂದು ಸಹಜ.. ಕೇವಲ ನಾವು ಮಾತ್ರ ಅಲ್ಲ ಇಡೀ   ಜಗತ್ತೇ ಭವಿಷ್ಯವನ್ನ ನಂಬುತ್ತೆ.. ಪ್ರತಿ ವರ್ಷ ಬಂದಾಗಲೂ ಇಬ್ಬರು ಭವಿಷ್ಯಕಾರರ ಮಾತುಗಳು ಮುನ್ನೆಲೆಗೆ ಬರ್ತವೆ. ಹಾಗಿದ್ರೆ ಆ ಭವಿಷ್ಯಕಾರರು ಯಾರು? 2025ರ ಬಗ್ಗೆ  ಅವರಿಬ್ರೂ ಹೇಳಿರುವ ಮಾತುಗಳು, ಭಯ ಹುಟ್ಟಿಸಿದ್ದೇಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IND Vs AUS.. ಮಳೆಗೆ ಪಂದ್ಯ ರದ್ದು.. ಭಾರತಕ್ಕೆ ನಷ್ಟ.. ಆಸಿಸ್ ಗೆ ಲಾಭ ಹೇಗೆ? – WTC ಕನಸಿಗೆ ಎಳ್ಳುನೀರು ಬಿಡುತ್ತಾ?

ಬಲ್ಗೇರಿಯಾದ ಕುರುಡು ಭವಿಷ್ಯಕಾರ್ತಿ ಬಾಬಾ ವಂಗಾ ಹಾಗೂ ಪ್ರಸಿದ್ಧ ಫ್ರೆಂಚ್ ಭವಿಷ್ಯಕಾರ ನಾಸ್ಟ್ರಾಡಾಮಸ್ ತಮ್ಮ ನಿಖರ ಭವಿಷ್ಯವಾಣಿಗಳಿಂದ ಖ್ಯಾತರಾಗಿದ್ದಾರೆ. ಅವರು ಹೇಳಿರುವ ಹಲವು ಭವಿಷ್ಯಗಳು ಅಕ್ಷರಶಃ ಸತ್ಯವಾಗಿದೆ. ಹಾಗಾಗಿ ಬಾಬಾ ವಂಗಾ ಮತ್ತು ನಾಸ್ಟ್ರಾಡಾಮಸ್ ಭವಿಷ್ಯ ಎಂದರೆ ಜಗತ್ತಿನ ಜನರು ಹೆದರುತ್ತಾರೆ. 2024 ಮುಗಿಯುತ್ತಿದ್ದಂತೆ ಇವರಿಬ್ಬರ ಭವಿಷ್ಯವಾಣಿಗಳು ಮತ್ತೆ ಸದ್ದು ಮಾಡಿದೆ. ಹೊಸ ವರ್ಷದಲ್ಲಿ ಅಂದರೆ 2025ರಲ್ಲಿ ಸಂಭವಿಸಬಹುದಾದ ಅಹಿತಕರ ಘಟನೆಗಳ ಬಗ್ಗೆ ಇವರಿಬ್ಬರು ಹಿಂದೆಯೇ ಹೇಳಿದ್ದು, ಇಬ್ಬರ ಭವಿಷ್ಯ ಒಂದೇ ರೀತಿ ಇವೆ..

ಇಡೀ ಜಗತ್ತೇ 2025ರ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲು ಸಜ್ಜಾಗಿರುವಾಗ ಬಲ್ಗೇರಿಯಾದ ಬಾಬಾ ವಂಗಾರ ಭವಿಷ್ಯವಾಣಿಗಳು ಆತಂಕ ಮೂಡಿಸಿವೆ. 2025ರ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿಗಳು ತುಂಬಾ ಆತಂಕಕಾರಿಯಾಗಿದೆ. ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ, ಕೋವಿಡ್ ಸಾಂಕ್ರಾಮಿಕ ರೋಗ, ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಮರು ಆಯ್ಕೆ ಹೀಗೆ ಅವರ ಹಲವಾರು ಭವಿಷ್ಯಗಳು ನಿಜವಾಗಿದೆ.

ಬಾಬಾ ವಂಗಾರ ಭವಿಷ್ಯ -2025

ವಂಗಾರ ಭವಿಷ್ಯವಾಣಿಯ ಪ್ರಕಾರ, ಸಿರಿಯಾ ಪತನದ ಬಳಿಕ 3ನೇ ಮಹಾಯುದ್ಧ ನಡೆಯಲಿದೆ ಎಂದು ಹೇಳಲಾಗಿದೆ. ಆ ಭವಿಷ್ಯವಾಣಿ ನಿಜವಾಗಿದ್ದು, ಸಿರಿಯಾ ಪತನವಾಗಿದೆ. ಸಿರಿಯಾದಲ್ಲಿ ಉಂಟಾಗಿರುವ ಈ ಗೊಂದಲವೇ 3ನೇ ವಿಶ್ವ ಮಹಾ ಯುದ್ಧಕ್ಕೆ ನಾಂದಿ ಹಾಡಲಿದೆಯೇ? ಈ ಭವಿಷ್ಯ ನಿಜವಾಗಲಿದೆಯೇ? ಅನ್ನೋ ಆತಂಕವನ್ನು ಮೂಡಿಸಿದೆ. ಬಾಬಾ ವಂಗಾ ಅವರು, ಯುರೋಪ್ನಲ್ಲಿ ಜನ ಸಂಖ್ಯೆ ಕಡಿಮೆಯಾಗಲಿದೆ ಅನ್ನೋ ಭವಿಷ್ಯ ನುಡಿದಿದ್ದಾರೆ. ಇದು ಯುದ್ಧದಿಂದಲೇ ಅಥವಾ ಪ್ರಕೃತಿ ವಿಕೋಪಗಳಿಂದಲೇ ಎಂಬುದು ಗೊತ್ತಿಲ್ಲ. ಆದರೆ ಯುರೋಪ್ನಲ್ಲಿ ಹೀಗಾಗಲೇ ಹಲವು ಕಡೆ ಆಂತರಿಕ ದಂಗೆಗಳು ಕಾಣುತ್ತಿದ್ದು, ಇದರಿಂದ ವಿಶ್ವ ಮಹಾಯುದ್ಧ ಸಂಭವಿಸಲಿದೆ ಅಂತಾನೇ ಹೇಳಲಾಗುತ್ತಿದೆ. ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿಯಾಗಲಿದ್ದು, ಆಧುನಿಕ ಚಿಕಿತ್ಸಾ ವಿಧಾನ, ಮಾರಕ ರೋಗಗಳಿಗೆ ಪರಿಣಾಮಕಾರಿ ಔಷಧಗಳು ಬರಲಿವೆ. ಆರೋಗ್ಯ ವಿಭಾಗದಲ್ಲಿ ತುಂಬಾನೇ ಬದಲಾವಣೆಯಾಗಲಿದ್ದು, ಈ ಬದಲಾವಣೆಯಿಂದ ಜನರ ಜೀವನ ಮಟ್ಟ ಸುಧಾರಿಸಲಿದೆ. ಕ್ಯಾನ್ಸರ್ ಸೇರಿದಂತೆ ಮಾರಕ ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯುವ ಬಗ್ಗೆಯೂ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಅನ್ಯಗ್ರಹ ಜೀವಿಗಳ ಜೊತೆಗೆ ಭೂಮಿಯಲ್ಲಿರುವ ಮಾನವನಿಗೆ ಸಂವಹನ ಸಾಧ್ಯವಾಗಲಿದೆ ಎಂಬ ಭವಿಷ್ಯವನ್ನು ಸಹ ಬಾಬಾ ವಂಗಾ ನುಡಿದಿದ್ದಾರೆ.

ಬಲ್ಗೇರಿಯಾದ ಬಾಬಾ ವಂಗಾ ತಮ್ಮ 12ನೇ ವಯಸ್ಸಿನಲ್ಲಿ ದೃಷ್ಟಿಯನ್ನು ಕಳೆದುಕೊಂಡರು. ಅತೀಂದ್ರಿಯ ಶಕ್ತಿಗಳ ಮೂಲಕ 51ನೇ ಶತಮಾನದವರೆಗೆ ಭೂಮಿಯ ಮೇಲೆ ಘಟಿಸಲಿರುವ ಪ್ರಮುಖ ಸಂಗತಿಗಳ ಭವಿಷ್ಯವಾಣಿಗಳನ್ನು ಸಾವಿಗೂ ಮೊದಲೇ ಬಾಬಾ ವಂಗಾ ನುಡಿದಿದ್ದಾರೆ. ಇವರ ಹಾಗೇ ವಿಶ್ವ ಪ್ರಸಿದ್ಧ ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ ನುಡಿದ  ಭವಿಷ್ಯವನ್ನು ವ್ಯಾಪಕವಾಗಿ ನಂಬಲಾಗುತ್ತದೆ. 15-16ನೇ ಶತಮಾನದವರಾದ ನಾಸ್ಟ್ರಾಡಾಮಸ್ 1555 ರಲ್ಲಿ  ಜಗತ್ತಿನ ಪ್ರಮುಖ ವಿದ್ಯಮಾನಗಳ ಬಗ್ಗೆ ಪುಸ್ತಕದಲ್ಲಿ ಬರೆದಿದ್ದಾರೆ.

ನಾಸ್ಟ್ರಾಡಾಮಸ್ ಹೇಳಿದ್ದೇನು?

ಹೊಸ ವರ್ಷದಲ್ಲಿ ಭಯಾನಕ ಯುದ್ಧಗಳು ನಡೆಯಲಿವೆ. ಇಂಗ್ಲೆಂಡ್ ದೇಶವು ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರಾಚೀನ ಪ್ಲೇಗ್ನಂತಹ ರೋಗವು ಜಗತ್ತನ್ನು ಏಕಾಏಕಿ ಬಾಧಿಸಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ಅವರು ನುಡಿದಿದ್ದ COVID-19 ಸಾಂಕ್ರಾಮಿಕ ಭವಿಷ್ಯವು ನಿಜವಾಗಿರುವುದರಿಂದ ಈ ಭವಿಷ್ಯವೂ ನಿಜವಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ. 2025ರಲ್ಲಿ ಭೂಮಿಯೊಂದಿಗೆ ಕ್ಷುದ್ರಗ್ರಹ ಘರ್ಷಣೆಯಾಗಲಿದ್ದು, ಗ್ರಹವು ತೀರಾ ಅಪಾಯಕಾರಿ ಸಾಮೀಪ್ಯದಲ್ಲಿ ಬರಬಹುದು ಎನ್ನುವ ಭವಿಷ್ಯವಾಣಿ ಭಯಗೊಳಿಸಿದೆ.  ರಾಜಮನೆತನಗಳ ಸರ್ವನಾಶ, ಭೀಕರ ಕಾಯಿಲೆ ಸೇರಿ ಜಗತ್ತಿನ ಬಹುತೇಕ ವಿಚಾರಗಳ ಬಗ್ಗೆ ನಾಸ್ಟ್ರಾಡಾಮಸ್ ಬಹಳಷ್ಟು ಹಿಂದೆಯೇ ಕರಾರುವಾಕ್ಕಾಗಿ ಭವಿಷ್ಯ ನುಡಿದಿದ್ದಾರೆ. ಯುರೋಪ್ನಲ್ಲಿ 2025ರಲ್ಲಿ ಭೀಕರ ಯುದ್ಧ ನಡೆಯುವುದನ್ನು ಜಗತ್ತು ಕಾಣುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.  ಇವರಿಬ್ಬರ 2025 ಭವಿಷ್ಯ ನೋಡಿದ್ರೆ ನಿಜಕ್ಕೂ ಭಯ ಆಗುತ್ತೆ.. ಜಗುತ್ತು ಇರುತ್ತೋ ಇರಲ್ವೋ ಅನ್ನೋ ಭಯ ಶುರುವಾಗಿದೆ.. ಇವರಿಬ್ಬರು ಭವಿಷ್ಯ ಈಗಾಗಲೇ ನಿಜವಾಗಿದ್ದು, ನಂಬಲೇ ಬೇಕಾದ ಸ್ಥಿತಿಯಲ್ಲಿ ಜಗತ್ತಿದೆ. ಆದ್ರೆ 2025 ರ ಇವರ ಭವಿಷ್ಯ ಸುಳ್ಳಾಗಲಿ ಅಂತಾ ಇಡೀ ಜಗತ್ತೇ  ಪ್ರಾರ್ಥನೆ  ಮಾಡುತ್ತಿದೆ.

Shwetha M

Leave a Reply

Your email address will not be published. Required fields are marked *