ಬಾಬಾವಂಗಾ ಭವಿಷ್ಯದ ರಹಸ್ಯವೇನು? – ಕಣ್ಣು ಹೋಗಿ.. ದೈವ ಶಕ್ತಿ ಬಂದಿದ್ದೇಗೆ?
ಇವರ ಮಾತಿಗೆ ಜಗತ್ತು ಬೆಚ್ಚುವುದೇಕೆ?

ಬಲ್ಗೇರಿಯಾದ ಬಾಬಾ ವಂಗಾ ಭವಿಷ್ಯ ಸಖತ್ ಪೇಮಸ್ಸ್.. ಇವ್ರು ಹೇಳಿದ್ದೆಲ್ಲಾ ನಿಜವಾಗುತ್ತೆ ಅನ್ನೋ ನಂಬಿಕೆ ಇದೆ.. ಅದ್ದಕ್ಕಾ ಸಾಕ್ಷಿ ಕೂಡ ಉಂಟು. ಇಡೀ ಜಗತ್ತು ಕೂಡ ನಂಬುತ್ತೆ. ಆದ್ರೆ ಕೆಲವರಿಗೆ ಇವರು ಸತ್ತ ಮೇಲೂ ಹೇಗೆ ಭವಿಷ್ಯ ಹೇಳ್ತಾರೆ? ಅನ್ನೋ ಡೌಟ್ ಇದೆ.. ಅದ್ದನ್ನ ಇಲ್ಲಿ ತಿಳಿದುಕೊಳ್ಳೋಣ.
ಬಾಬಾ ವಂಗಾ ಅವರು ಬಲ್ಗೇರಿಯಾದ ದೃಷ್ಟಿಹೀನ ಮಹಿಳೆ. ಅಂದ್ರೆ ಕಣ್ಣು ಕಾಣದ ಮಹಿಳೆ.. ಇವರು 1911 ರಲ್ಲಿ ಜನಿಸಿದವರು ಮೊದಲ 12 ವರ್ಷಗಳ ಕಾಲ ಸಾಮಾನ್ಯ ಮನುಷ್ಯರಂತೆ ಜೀವನ ನಡೆಸಿದ್ರು, ನಂತ್ರ ಪ್ರವಾದಿಯಾಗ್ತಾರೆ. ದಿನ ಕಳೆದಂತೆ ಭವಿಷ್ಯ ನುಡಿಯುವಲ್ಲಿ ಪರಿಣಿತರಾಗ್ತಾರೆ.. ಬಾಲ್ಯದಲ್ಲಿ ಒಂದು ಚಂಡಮಾರುತದಿಂದ ಕಣ್ಣು ಕುರುಡಾಗಿ, ಭವಿಷ್ಯ ನುಡಿಯುವ ಶಕ್ತಿ ಬಂದಿತು ಎಂದು ಹೇಳಲಾಗುತ್ತದೆ. ಬಾಬಾ ವಂಗಾ ಅಂತ ಹೇಳಿ ಪ್ರಸಿದ್ಧರಾಗ್ತಾರೆ. ಬಲ್ಗೇರಿಯಾದ ಬಾಬಾ ವಂಗಾ ಅವರ ಹೆಚ್ಚಿನ ಭವಿಷ್ಯವಾಣಿಗಳು ನಿಜವಾಗಿವೆ. ಇವರು ಈಗ ಬದುಕಿಲ್ಲ.. ಸುಮಾರು 30 ವರ್ಷಗಳ ಹಿಂದೆ ಅಂದ್ರೆ 1996ರಲ್ಲಿ ಮರಣ ಹೊಂದುತ್ತಾರೆ.
ಬಾಬಾ ವಂಗಾ ಮುಂದೆ ಏನೆಲ್ಲಾ ಆಗುತ್ತೆ ಅನ್ನೋದ್ದನ್ನ ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ. ಅವರ ಭವಿಷ್ಯವಾಣಿಗಳನ್ನು ಬಿಚ್ಚಿಡಲು ವಿವಿಧ ಗುಂಪುಗಳು ಕೆಲಸ ಮಾಡುತ್ತವೆ. ಸಾಮಾನ್ಯವಾಗಿ ಈ ಭವಿಷ್ಯವಾಣಿಗಳು ತುಂಬಾ ಅಸ್ಪಷ್ಟ ಮತ್ತು ಸಾಂಕೇತಿಕವಾಗಿರುತ್ತವೆ, ಅದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಆದ್ದರಿಂದ, ಜ್ಯೋತಿಷಿಗಳು, ಇತಿಹಾಸಕಾರರು ಮತ್ತು ತಜ್ಞರು ಅವುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಆ ಭವಿಷ್ಯವಾಣಿಯನ್ನು ಹೇಳುವ ಕೆಲಸ ಮಾಡುತ್ತಾರೆ.
9/11 ದಾಳಿ ಬಗ್ಗೆ ಮೊದ್ಲೇ ಹೇಳಿದು ಅಂತ ನಂಬಲಾಗಿದೆ. “ಉಕ್ಕಿನ ಹಕ್ಕಿಗಳು ಅಮೆರಿಕಾದ ಸಹೋದರರ ಮೇಲೆ ದಾಳಿ ಮಾಡುತ್ತವೆ ಎಂದು 1989ರಲ್ಲಿ ಹೇಳಿದ್ದಾಗಿ ಪ್ರಚಾರ ಮಾಡಿದ್ರು. ಸೆಪ್ಟೆಂಬರ್ 11, 2001ರಂದು ನ್ಯೂಯಾರ್ಕ್ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಕ್ಕೆ ವಿಮಾನದ ಮೂಲಕ ಉಗ್ರರು ದಾಳಿ ನಡೆಸಿದ್ರು. ಯುರೋಪ್ ಜನರಹಿತವಾಗುತ್ತದೆ ಅಥವಾ ದೊಡ್ಡ ಯುದ್ಧದಿಂದ ಹಾನಿಯಾಗುತ್ತದೆ ಎಂದು ಹೇಳಿದ್ದರು. ರಷ್ಯಾ-ಉಕ್ರೇನ್ ಯುದ್ಧ ಮತ್ತು ಇತರ ಸಂಘರ್ಷಗಳು ಇದಕ್ಕೆ ಸಂಬಂಧಿಸಿರಬಹುದು.. ಅನ್ಯಗ್ರಹ ಜೀವಿಗಳು ಖಂಡದಾದ್ಯಂತ ವಿನಾಶವನ್ನುಂಟು ಮಾಡುತ್ತವೆ ಎಂದು ಬಾಬಾ ವಂಗಾ ತಮ್ಮ ಭವಿಷ್ಯವಾಣಿಯಲ್ಲಿ ಹೇಳಿದ್ದಾರೆ. ಯುರೋಪಿನ ಭಯಾನಕ ಯುದ್ಧ ಮತ್ತು ರಾಜಕೀಯ ಅಸ್ಥಿರತೆಯ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ. 2026ರಲ್ಲಿ AI ಮಾನವ ನಿಯಂತ್ರಣ ಮೀರಿ ಹಾವಳಿ ಮಾಡುತ್ತೆ.. 3ನೇ ಮಹಾಯುದ್ಧ ನಡೆಯುತ್ತೆ ಅಂತ ಹೇಳಿದ್ದಾರೆ..
ಬಾಬಾ ವಂಗಾ ಅವರನ್ನು ರಷ್ಯಾ ಮತ್ತು ಯುರೋಪ್ನಲ್ಲಿ ಸಂತ ಎಂದು ಗೌರವಿಸಲಾಗಿದೆ. ಅವರು 1996 ರಲ್ಲಿ ತಮ್ಮ 85 ನೇ ವಯಸ್ಸಿನಲ್ಲಿ ನಿಧನರಾದರು. 5079 ವರ್ಷಗಳವರೆಗಿನ ಭವಿಷ್ಯವಾಣಿಗಳನ್ನು ಅವರು ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಹೇಳಲಾಗುತ್ತದೆ. ಈಕೆ ಸತ್ತರೂ ದೇಶಕ್ಕೆ ಯಾವ ವರ್ಷ ಯಾವ ಅನಾಹುತ ಬರಲಿದೆ ಎನ್ನುವುದನ್ನು ಈಗಾಗಲೇ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇದು ಅನೇಕ ಬಾರಿ ನಿಜವಾಗಿದೆ, ಅದಕ್ಕಾಗಿಯೇ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಯಾವಾಗಲೂ ಚರ್ಚೆಯಾಗುತ್ತಲೇ ಇರುತ್ತದೆ.

ನೋಡಿರಿ

